ಬೆಂಗಳೂರು,ಜು.9-ಗಾಂಜಾ ಕಳ್ಳ ಸಾಗಾಣಿಕೆ ದಂಧೆಯಿಂದ ಆರೋಪಿಯು ಅಕ್ರಮವಾಗಿ ಗಳಿಸಿದ್ದ ಸುಮಾರು 50 ಲಕ್ಷ ರೂ ಮೌಲ್ಯದ ಅಕ್ರಮ ಚರಾಸ್ಥಿ ಹಾಗು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಆದೇಶ ಹೊರಡಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಪ್ರಥಮ ಬಾರಿಗೆ ನಗರದ ಸಿಸಿಬಿ ಪೊಲೀಸರು ಎನ್ ಡಿಪಿಎಸ್ ಕಾಯ್ದೆ ಅಧ್ಯಾಯದ ಅಧಿಕಾರವನ್ನು ಚಲಾಯಿಸಿ 50 ಲಕ್ಷ ರೂ ಮೌಲ್ಯದ ಅಕ್ರಮ ಚರಾಸ್ಥಿ ಹಾಗು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಆದೇಶ ಹೊರಡಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ತಿಳಿಸಿದರು.
ಕೋಣನಕುಂಟೆ ಪೊಲೀಸ್ ಠಾಣೆಯ ಪ್ರಕರಣದ ಸಂಬಂಧಿಸಿದಂತೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್‍ಪೆಕ್ಟರ್ ಬಿ.ಎಸ್.ಅಶೋಕ್ ರವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ವರ್ಗಾಯಿಸಿ ಆದೇಶಿಸಿದ್ದರು.
ಅದರಂತೆ ಕಾಯ್ದೆಯ ಅಧಿಕಾರವನ್ನು ಚಲಾಯಿಸಿ ತನಿಖಾಧಿಕಾರಿಯು ಸಂಪೂರ್ಣ ತನಿಖೆ ಕೈಗೊಂಡು ಕಳೆದ 10-12
ವರ್ಷಗಳಿಂದ ಗಾಂಜಾ ಕಳ್ಳಸಾಗಾಣಿಕೆ ದಂಧೆಯಲ್ಲಿ ತೊಡಗಿಸಿಕೊಂಡು ಬೆಂಗಳೂರು ನಗರ, ಮೈಸೂರು
ಹಾಗೂ ಚಾಮರಾಜನಗರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 2014 ರಿಂದ 2022 ರವರೆಗೆ 7 ಎನ್ ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೂಢಿಗತ ಆರೋಪಿ ಹನೂರು ತಾಲ್ಲೂಕಿನ ಪುಷ್ಪಾಪುರ ಗ್ರಾಮದ ಮಲ್ಲೇಶ್.ಜಿ ತಮಿಳುನಾಡು, ಆಂದ್ರಪ್ರದೇಶ, ಒರಿಸ್ಸಾ ರಾಜ್ಯಗಳಿಂದ ಗಾಂಜಾವನ್ನು ಅಕ್ರಮವಾಗಿ ಖರೀದಿಸಿ ಮಾರಾಟದಿಂದ ಗಳಿಸಿದ್ದ ಹಣದಲ್ಲಿ 2013ನೇ ಇಸವಿಯಲ್ಲಿ ತನ್ನ ಮಗ ಹಾಗು ಪತ್ನಿಯ ಹೆಸರಿನಲ್ಲಿ ಚಾಮರಾಜನಗರ ಜಿಲ್ಲೆ ಶಾಗ್ಯ ಗ್ರಾಮದಲ್ಲಿ ಖರೀದಿಸಿದ್ದ ಸುಮಾರು 50 ಲಕ್ಷ ರೂ ಬೆಲೆ ಬಾಳುವ 8 ಎಕರೆ ಕೃಷಿ ಜಮೀನು ಹಾಗು ಇವರುಗಳಿಗೆ ಸೇರಿದ 5 ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 3 ಲಕ್ಷ ರೂ
ಹಣವನ್ನು ಕಳೆದ ಜೂ.8ರಂದು ತನಿಖಾಧಿಕಾರಿಯವರು ಮುಟ್ಟಗೋಲು ಆದೇಶವನ್ನು ಹೊರಡಿಸಿ ಆದೇಶಿಸಿದ್ದರು.
Previous Articleಗಾಂಜಾ ಮಾರಾಟ; ಕೇರಳದ 12ವಿದ್ಯಾರ್ಥಿಗಳ ಬಂಧನ
Next Article ಮುನೀಶ್ ಮೌದ್ಗೀಲ್ ಗೆ ಬೆದರಿಕೆ..!