ಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾಸ್ತವ್ ಪುಸ್ತಕ ಬರೆಯೋಕೆ ಮನಸ್ಸು ಮಾಡಿದ್ದಾರೆ. ಹೋಪ್ ಸಿನಿಮಾ ಮೂಲಕ ಕಂ ಬ್ಯಾಕ್ ಆದ ನಟಿ ತಾವು ಪುಸ್ತಕ ಬರೆಯುತ್ತಿರೋದಾಗಿ ಹೇಳಿದ್ದಾರೆ. ಅಲ್ಲದೆ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ಅಸಾಧ್ಯವಾದ ಪ್ರಯತ್ನದ ಕುರಿತು ನಟಿ ಶ್ವೇತಾ ಪುಸ್ತಕ ಬರೆಯಲು ಮನಸ್ಸು ಮಾಡಿದ್ದಾರೆ. ಈ ಜರ್ನಿಯಲ್ಲಿ ನೀವು ಕೂಡ ಸಾಥ್ ನೀಡಬಹುದು ಅಂತಾ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ಪಾತ್ರ ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರ ಮುಖ್ಯ ಉದ್ದೇಶವಿಷ್ಟೇ ಇದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂದು. ನಿಮ್ಮಲ್ಲಿ ನನ್ನನ್ನ ಕುರಿತು ಯಾವುದೇ ಪ್ರಶ್ನೆಗಳಿದ್ದರು, ನನ್ನ ಮೈಲ್ ಐಡಿ shwethasrivastav04@gmail.comಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ ಹೀಗೆಂದು ನಟಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದಾರೆ.