ಬೆಂಗಳೂರು,ಜು.11-ಸರ್ಕಾರಿ ಕಾಲೇಜು ಕ್ರೀಡಾ ಅಭಿವೃದ್ಧಿ ಬ್ಯಾಂಕ್ ಖಾತೆಯಿಂದ 8.92 ಲಕ್ಷ ರೂಗಳನ್ನು ಬೇರೊಂದು ಆನ್‌ಲೈನ್‌ನಲ್ಲಿ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಅಭಿವೃದ್ಧಿ ಬ್ಯಾಂಕ್ ಖಾತೆಗೆ ಸಂಬಂಧ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಸಂಬಂಧ ಕಾಲೇಜಿನ ಪ್ರಾಂಶುಪಾಲ ಡಾ.ವೈ. ವೆಂಕಟೇಶಪ್ಪ ಅವರು ಪಶ್ಚಿಮ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಆರ್ಪಿಸಿ ಬಡಾವಣೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲಾಗಿದೆ. ಕಾಲೇಜು ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಮೇ 12ರಿಂದ 30ರ ನಡುವೆ ಹಂತ ಹಂತವಾಗಿ 8.92 ಲಕ್ಷ ರೂಪಾಯಿಯನ್ನು ಅನಧಿಕೃತವಾಗಿ ಬೇರೊಂದು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಅಭಿವೃದ್ಧಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ : Online ವಂಚನೆ
Previous Articleದಾಖಲೆ ಸಲ್ಲಿಕೆಗೆ ಜಮೀರ್ ಗೆ ಎಸಿಬಿ ಸೂಚನೆ
Next Article ರೌಡಿ ಬಾಂಬೆ ಸಲೀಂ ಸಿಸಿಬಿ ವಶ