ಬೆಂಗಳೂರು,ಆ.19-ಮಾರಕಾಸ್ತ್ರಗಳೊಂದಿಗೆ ಬಂದು ಇಬ್ಬರ ಮೇಲೆ ಹಲ್ಲೆ ನಡೆಸಿ ಸುಮಾರು 80 ಹಂದಿಗಳನ್ನು ಕಳವು ಮಾಡಿ ಪರಾರಿಯಾಗಿದ್ದ 10 ಮಂದಿ ಡಕಾಯಿತರನ್ನು ಚಿಕ್ಕಜಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರಿನ ಸಿಂದನೂರಿನ ಶಂಕರ್(22),ಪರಶುರಾಮ(25)ಗದಗದ ಲಕ್ಷ್ಮೇಶ್ವರದ ಅಶೋಕ(21)
ರಾಯಚೂರಿನ ಅಂಬಾಮಠದ ಅಂಬಣ್ಣ(21) ಬೆಳಗಾವಿಯ ಅಡಿವೇಪ್ಪ(22) ಮಾನ್ವಿಯ ಬಸವರಾಜು(29)ಯಲಹಂಕದ
ರಾಜನುಕುಂಟೆಯ ಮಂಜುನಾಥ(33) ಹಾಸನ ಚನ್ನರಾಯಪಟ್ಟಣದ ಕಿರಣ್(28) ಬೆಳಗಾವಿ ಜಿಲ್ಲೆಯ ರಾಮದುರ್ಗದ ಪಕೀರಪ್ಪ ನಾಗಪ್ಪ ಚಿಪ್ಪಲಕಟ್ಟಿ(31)ಶಂಕರ್ ನಾಗಪ್ಪ ಚಿಪ್ಪಲಕಟ್ಟಿ(27) ಬಂಧಿತ ಡಕಾಯಿತರಾಗಿದ್ದಾರೆ.
ಬಂಧಿತರಿಂದ 20 ಲಕ್ಷ ಮೌಲ್ಯದ ಹಂದಿಗಳು 28 ಸಾವಿರ ನಗದು ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 21 ಸಾವಿರ ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ಆರೋಪಿಗಳಿಗೆ ಕೃತ್ಯಕ್ಕೆ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಚಿಕ್ಕಜಾಲದ ಹುಣಸಮಾರನಹಳ್ಳಿಯ ಸಂದೀಪ್ ಅವರ ಹಂದಿ ಸಾಗಾಣಿಕೆ ಶೆಡ್ ನಲ್ಲಿ ಕಳೆದ ಜು.16 ರಂದು ಮಧ್ಯ ರಾತ್ರಿ 2 ರ ವೇಳೆ 8ಮಂದಿಯ ಬಂಧಿತರ ಗುಂಪು 2 ವಾಹನದಲ್ಲಿ ಬಂದು ಸುಮಾರು 20 ಲಕ್ಷ ಬೆಲೆ ಬಾಳುವ 80 ಹಂದಿಗಳನ್ನು ಕಳ್ಳತನ ಮಾಡುತ್ತಿದ್ದರು.
ಇದನ್ನು ಕಂಡ ಸಂದೀಪ್ ಮತ್ತವರ ತಂದೆ ರಾಮಕೃಷ್ಣಪ್ಪ ನವರು ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿಗಳು ರಾಡು ಹಾಗೂ ಮಚ್ಚುಗಳಿಂದ ನಮ್ಮ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲು ಪ್ರಯತ್ನಿಸಿದ್ದರು.
ರಾಮಕೃಷ್ಣಪ್ಪ ರವರಿಗೆ ತೀವ್ರತರದ ರಕ್ತಗಾಯ ವಾಗಿರುವುದಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಈ ಸಂಬಂಧ ಬಂದ ದೂರು ಆಧರಿಸಿ ಪ್ರಕರಣ ದಾಖಲಿಸಿ ಕಾರ್ಯಾಚರಣೆಗಿಳಿದ ಚಿಕ್ಕಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಪ್ರವೀಣ್ ಎಂ ನೇತೃತ್ವದ ವಿಶೇಷ ತಂಡವು ಆರೋಪಿಗಳನ್ನು ಗಂಗಾವತಿ ಗ್ರಾಮಾಂತರದ ಮರಳಿ ಟೋಲ್ ಬಳಿ ವಶಕ್ಕೆ ಪಡೆಯಲು ಮುಂದಾಗಿತ್ತು. ಈ ವೇಳೆ ಕರ್ತವ್ಯನಿರತ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಹತ್ಯೆ ಮಾಡಲು ಪ್ರಯತ್ನಿಸಿದ್ದು ಹಾಗು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಂಕರ್( 22) ಅಶೋಕ(21) ಮೇಲೆ ಅಧಿಕಾರಿ ಸಿಬ್ಬಂದಿಗಳ ಆತ್ಮರಕ್ಷಣೆಗಾಗಿ ಅಲ್ಪ ಪ್ರಮಾಣದ ಬಲಪ್ರಯೋಗ ಮಾಡಿ ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಬೋಲೇರೋ ಪಿಕಪ್ ವಾಹನವನ್ನು ವಶಕ್ಕೆ ಪಡೆದು ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂದಿಸಿದಂತೆ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣದಲ್ಲಿ ನ್ಯಾಯಾಂಗ ಬಂದನದಲ್ಲಿದ್ದ
ಶಂಕರ್, ಅಶೋಕ,ಅಂಬಣ್ಣ,ಅಡಿವೇಪ್ಪ, ಪರಶುರಾಮನನ್ನು ಪೊಲೀಸ್ ಬಂದನಕ್ಕೆ ಪಡೆದು ವಿಚಾರಣೆ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಕಳ್ಳತನದ ಹಂದಿಗಳೆಂದು ತಿಳಿದಿದ್ದರೂ ಸಹಾ ಹಂದಿಗಳನ್ನು ಆರೋಪಿಗಳಿಂದ ಸ್ವೀಕರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ಕಿರಣ್ ನನ್ನು ಆರೋಪಿಗಳಿಗೆ ಕೃತ್ಯಕ್ಕೆ ವಾಹನ ನೀಡಿ ಸಹಕರಿಸಿದ ವಾಹನದ ಮಾಲೀಕರಾದ ಪಕೀರಪ್ಪ ನಾಗಪ್ಪ ಚಿಪ್ಪಲಕಟ್ಟಿ, ಶಂಕರ್ ನಾಗಪ್ಪ ಚಿಪ್ಪಲಕಟ್ಟಿ ನನ್ನು ದಸ್ತಗಿರಿ ಮಾಡಲಾಗಿದೆ.
ಕೃತ್ಯಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃತ್ಯದಲ್ಲಿ ಬಾಗಿಯಾದ ಕುದೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಂಗ ಬಂದನದಲ್ಲಿದ್ದ ಆರೋಪಿಗಳಾದ ಮಂಜುನಾಥ ಹಾಗೂ ಬಸವರಾಜು ರವರನ್ನು ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದು ಹಾಲಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಚಿಕ್ಕಜಾಲ ಪೊಲೀಸರ ಈ ವೃತ್ತಿಪರತೆಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಶ್ಲಾಘಿಸಿದ್ದಾರೆ.