ಚಾಮರಾಜನಗರ,ಆ.21- ಚಿರತೆ ಉಗುರು, ಹಲ್ಲುಗಳನ್ನು ಸಾಗಿಸುತ್ತಿದ್ದ ಮೂವರನ್ನು ಅರಣ್ಯ ಸಂಚಾರಿದಳ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿದಳ ಸಿಬ್ಬಂದಿ ಹನೂರು ತಾಲೂಕಿನ ಜಲ್ಲಿಪಾಳ್ಯದ ಕಾರ್ಯಾಚರಣೆ ಕೈಗೊಂಡು
ತಮಿಳುನಾಡು ಮೂಲದ ಜವರಯ್ಯ (52), ಕೆಂಪ (55) ಹಾಗು ತಮ್ಮಯ್ಯ (45)ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಚಿರತೆ ಉಗುರುಗಳಿಗೆ ಕಾಳಸಂತೆಯಲ್ಲಿ ಭಾರಿ ಬೇಡಿಕೆ ಇದೆ ಎಂಬ ತಪ್ಪು ತಿಳುವಳಿಕೆ ಹಾಗು ಹಲ್ಲು, ಉಗುರುಗಳಿಂದ ತಾಯ್ತಾ ಮಾಡಿಕೊಂಡರೆ ಒಳಿತಾಗುತ್ತದೆ ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಪರಾರಿಯಾಗಿರುವ ಮತ್ತೋರ್ವ ಆರೋಪಿಗಾಗಿ ತೀವ್ರ ಶೋಧ ಕೈಗೊಳ್ಳಲಾಗಿದೆ.
Previous Articleಸ್ನೇಹಿತನ ಪ್ರಾಣ ಉಳಿಸಿದ ಆದರೆ….?
Next Article ರವಿಚಂದ್ರನ್ ಮಗನ ಮದುವೆ ಆಯ್ತು..