Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » C M Bommai, ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು.
    ರಾಜ್ಯ

    C M Bommai, ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು.

    vartha chakraBy vartha chakraಜನವರಿ 25, 2023Updated:ಜನವರಿ 25, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು.
    ವಿಧಾನಸಭೆ ಚುನಾವಣೆಗೆ ದಿನಗಳು‌ ಸಮೀಪಿಸುತ್ತಿರುವಂತೆ‌ ರಾಜಕೀಯ ಪಕ್ಷಗಳ ನಡುವಿನ ಸಮರ ತೀವ್ರಗೊಂಡಿದೆ. ಇದೀಗ ಕಾಂಗ್ರೆಸ್ ನಿಯೋಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
    ‘ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷವನ್ನು ಒಡ್ಡಿ, ಆ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿದೆ’ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

    ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತದಾರನಿಗೆ ಆರು ಸಾವಿರ ರೂಪಾಯಿ ನೀಡುವ ಕುರಿತು ಮಾತನಾಡಿರುವ ವಿಡಿಯೋ ತುಣುಕನ್ನು ಪೊಲೀಸರಿಗೆ ಸಲ್ಲಿಸಿದೆ. ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ‘ನೆಲದ ಕಾನೂನಿನ ಪ್ರಕಾರ ಪೊಲೀಸರು ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ತಲಾ 6 ಸಾವಿರ ದುಡ್ಡು ನೀಡಿ ಮತ ಕೊಂಡುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಇವತ್ತು ರಾಷ್ಟ್ರೀಯ ಮತದಾರರ ದಿನ. ಹಾಗಾಗಿ ಇವತ್ತು ದೂರು ನೀಡಿದ್ದೇವೆ. ಪೊಲೀಸರು ಬಿಜೆಪಿಯ ಅಕ್ರಮವನ್ನು ತಡೆಗಟ್ಟಬೇಕು’ ಎಂದು ಆಗ್ರಹಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ ‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಬಿಜೆಪಿ ದೊಡ್ಡ ಸಂಚು ರೂಪಿಸಿದೆ’ ಎಂದು ಆಪಾದಿಸಿದರು.

    ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ‌, ರಮೇಶ್ ಜಾರಕಿಹೊಳಿ ಸೇರಿ ಈ ಸಂಚು ರೂಪಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ. ಸರ್ಕಾರಿ ಕಾಮಗಾರಿಗಳಲ್ಲಿ ಸಂಗ್ರಹಿಸಿರುವ ಶೇ. 40 ರಷ್ಟು ಕಮೀಷನ್ ನಲ್ಲಿ ಮತದಾರರಿಗೆ ಆಮಿಷವೊಡ್ಡಲು ಮುಂದಾಗಿದ್ದಾರೆ’ ಎಂದು ದೂರಿದರು.’ಅತ್ಯಂತ ಭ್ರಷ್ಟ ಸರ್ಕಾರ ಇದು, ಎಲ್ಲದರಲ್ಲೂ ದುಡ್ಡು ಹೊಡೆದಿದ್ದಾರೆ. ಎಲ್ಲ ಕಚೇರಿಯನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಗಮನಿಸದೆ ಮತ್ತೆ ಅಧಿಕಾರ ಹಿಡಿಯಲು 30 ಸಾವಿರ ಕೋಟಿ ಹಣವನ್ನ ಈ ಚುನಾವಣೆಯಲ್ಲಿ ಬಿಜೆಪಿ ಖರ್ಚು ಮಾಡುತ್ತಿದೆ. 5 ಕೋಟಿ‌ ಮತದಾರರಿಗೆ ದುಡ್ಡು ನೀಡಲು ಹೊರಟಿದೆ. ಇದನ್ನು ರಮೇಶ್ ಜಾರಕಿಹೊಳಿಯೇ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರ ಗಮನಕ್ಕೆ ತಂದಿದ್ದೇವೆ’ ಎಂದು ಹೇಳಿದರು.

    ‘ರಾಜ್ಯದಲ್ಲಿ ಮುಕ್ತ ಹಾಗೂ ಸ್ವತಂತ್ರವಾಗಿ ಚುನಾವಣೆ ನಡೆಯಬೇಕು. ಆದರೆ ಈ ರೀತಿಯಲ್ಲಿ ಆಮಿಷ ಒಡ್ಡಿದ್ರೆ ಸ್ವತಂತ್ರವಾಗಿ ಚುನಾವಣೆ ನಡೆಯಲ್ಲ, ಪ್ರಜಾಪ್ರಭುತ್ವ ಉಳಿಯಲ್ಲ. ಸ್ವತಂತ್ರ ಚುನಾವಣೆ ಆಗಬೇಕು. ಆಮಿಷ ಒಡ್ಡುವುದು ಕಾನೂನು ಬಾಹಿರ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಕೊಡ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

    BJP cm bommai Congress Government m Politics ಕಾಂಗ್ರೆಸ್ ಕಾನೂನು ಚುನಾವಣೆ ಬೊಮ್ಮಾಯಿ ರಾಜಕೀಯ ಲಂಚ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous ArticleHalf helmet ಧರಿಸಿದರೆ ದಂಡ ಬೀಳೋದು ಗ್ಯಾರಂಟಿ.
    Next Article ಮೀರ್ ಸಾದಿಕ್ ಗಳಿಂದ ರಕ್ಷಣೆಗಾಗಿ Court stay.
    vartha chakra
    • Website

    Related Posts

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಕಾಮುಕ ಯೋಗಗುರು ಅರೆಸ್ಟ್.

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಇವರಿಗೆ ಬೆಂಗಳೂರು ಬೇಡವಂತೆ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Nomermuddy ರಲ್ಲಿ ನಾಗಮಂಗಲ ಗಲಭೆಯ ನಷ್ಟ ಎಷ್ಟು ಗೊತ್ತೆ.
    • dizainerskie kashpo_hkEt ರಲ್ಲಿ ಸೌತೆ ಕಾಯಿ ತಿನ್ನಿಸಿದ್ದಕ್ಕೆ ಹೀಗಾ ಮಾಡೋದು
    • dizainerskie kashpo_ilEt ರಲ್ಲಿ ವಲಸಿಗರ ನಡುವೆ ಜಿದ್ದಾಜಿದ್ದಿನ ಪೈಪೋಟಿ (ಚಿತ್ರದುರ್ಗ ಲೋಕಸಭಾ ಕ್ಷೇತ್ರ) | Chitradurga
    Latest Kannada News

    ಬಂಗ್ಲೆ ಗುಡ್ಡ ರಹಸ್ಯದ ಬೆನ್ನು ಹತ್ತಿದ ಪೊಲೀಸ್.

    ಸೆಪ್ಟೆಂಬರ್ 18, 2025

    ಕಾಮುಕ ಯೋಗಗುರು ಅರೆಸ್ಟ್.

    ಸೆಪ್ಟೆಂಬರ್ 18, 2025

    ಡಿ.ಕೆ. ಶಿವಕುಮಾರ್ ಕೊಟ್ಟ ಟಾರ್ಗೆಟ್.

    ಸೆಪ್ಟೆಂಬರ್ 18, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    9ನೇ ಕ್ಲಾಸ್ ವಿದ್ಯಾರ್ಥಿ ಬ್ಯಾಗಿನಲ್ಲಿ ಕಾಂಡೊಮ್, ಸಿಗರೇಟ್, ಆಲ್ಕೋಹಾಲ್ #varthachakra#medicalcheckup #parents
    Subscribe