ಬೆಂಗಳೂರು: ರಾಜ್ಯದಲ್ಲಿ ಇದೀಗ ಯಾರ್ಯಾರೋ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಆ ಹುದ್ದೆ ಎಂದರೆ ಎಲ್ಲರಿಗೂ ಹಗುರವಾಗಿ ಹೋಗಿದೆ’ ಎಂದು ಮಾಜಿ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ವಿಪಕ್ಷನಾಯಕ ಸಿದ್ದರಾಮಯ್ಯ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾ ಮಹದೇವಪ್ಪ, ಅವರ ಈ ಹೇಳಿಕೆ ಕಾಂಗ್ರೆಸ್ ನಲ್ಲಿ ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಹುದ್ದೆಯ ಗೌರವ ಬೇರೆಯೇ ಇದೆ. ಇದಕ್ಕೆ ಹೋರಾಟ, ಸಾಮಾಜಿಕ ಬದ್ಧತೆ, ರಾಜಕೀಯ ಜೀವನದ ಅನುಭವ ಎಲ್ಲವೂ ಬೇಕು’ ಎಂದು ಹೇಳಿದರು.
‘ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಯ ಚರ್ಚೆಗಳಿದ್ದರೂ ಅದನ್ನು ಹಗುರವಾಗಿ ಯಾರೂ ಕಾಣುತ್ತಿಲ್ಲ. ಬೇರೆ ಪಕ್ಷಗಳಲ್ಲಿ ಆ ಹುದ್ದೆಯ ಬಗ್ಗೆ ಬಹಳ ಹಗುರವಾಗಿ ಮಾತನಾಡಲಾಗುತ್ತಿದೆ. ಎಲ್ಲದಕ್ಕೂ ಮೊದಲು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು 130 ಸೀಟುಗಳನ್ನು ಪಡೆಯಬೇಕು. ನಂತರ ಶಾಸಕರು ಮತ್ತು ಹೈಕಮಾಂಡ್ನವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ತೀರ್ಮಾನಿಸುತ್ತಾರೆ’ ಎಂದರು.
‘ಪಕ್ಷ ಅವಕಾಶ ನೀಡಿದರೆ ಈಬಜವಾಬ್ದಾರಿ ನಿರ್ವಹಿಸಲು ನಾನೂ ಸಿದ್ಧವಿದ್ದೇನೆ’ ಲೋಕೋಪಯೋಗಿ, ಆರೋಗ್ಯ ಖಾತೆ ಸೇರಿದಂತೆ ಹಲವು ಜವಾಬ್ದಾರಿ ನಿರ್ವಹಿಸಿದ್ದೇನೆ. ನನಗೂ ಸಾಕಷ್ಟು ಅನುಭವವಿದೆ. ಅವಕಾಶ ಸಿಕ್ಕರೆ ನಿಭಾಯಿಸುತ್ತೇನೆ’ ಎಂದು ತಿಳಿಸಿದರು.
‘ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮವನ್ನಷ್ಟೆ ನಾವು ಮಾಡುತ್ತಿದ್ದೇವೆ. ‘ಸಿದ್ದರಾಮೋತ್ಸವ’ ಎಂದು ನಾವ್ಯಾರೂ ಕರೆದಿಲ್ಲ. ಕೆಲವು ಮಾಧ್ಯಮದವರು ಹಾಗೂ ಯಾರೋ ಅಭಿಮಾನಿಗಳು ಸಿದ್ದರಾಮೋತ್ಸವ ಎಂದು ಹೆಸರಿಸಿದ್ದಾರೆ. ದೊರೆ, ರಾಜ ಎಂಬಿತ್ಯಾದಿ ಪದಗಳನ್ನು ಪ್ರಜಾಪ್ರಭುತ್ವದಲ್ಲಿ ಬಳಸಬಾರದು. ಬಳಸಬೇಡಿ ಎಂದು ಹೇಳಬೇಕಾದವರೆ ಬಳಸಿದರೆ ನಾವೇನು ಮಾಡುವುದು?’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ಅಮೃತ ಮಹೋತ್ಸವವನ್ನು ಮುಖ್ಯಮಂತ್ರಿ ಹುದ್ದೆ ಕೇಳುವುದಕ್ಕೆ ಮಾಡುತ್ತಿಲ್ಲ. ಹುಟ್ಟುಹಬ್ಬ ಅಥವಾ ಸಮಾರಂಭಗಳ ಮೂಲಕ ಆ ಹುದ್ದೆ ಕೇಳಲಾಗುವುದಿಲ್ಲ. ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ತಮ್ಮ ದುರಾಡಳಿತವನ್ನು ಮುಚ್ಚಿಕೊಳ್ಳಲು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಯಾರು ಯಾರೋ ಸಿಎಂ ಹುದ್ದೆ ಕೇಳುತ್ತಿದ್ದಾರೆ..?
Previous Articleಬಿಜೆಪಿಯಿಂದ 30 ಕೋಟಿ ಆಫರ್..!
Next Article ಜೀವಂತವಾಗಿರುವಾಗಲೆ ಸುಡಲು ಜಿಎಸ್ಟಿ..!