ಗದಗ: ಇಷ್ಟು ವರ್ಷಗಳೇ ಕಳೆದರೂ ಇನ್ನೂ ರೈತ ವಿರೋಧಿ ಕಾನೂನುಗಳೇ ಹೆಚ್ಚಾಗುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಭಾಸ್ಕರ್ ರಾವ್ ಕಿಡಿಕಾರಿದ್ದಾರೆ.
ಅವರು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ರೈತರ ತಂಟೆಗೆ ಬಂದರೆ ಸರಕಾರವೇ ಬಿದ್ದೋಗುತ್ತದೆ ಅಂತ ಎಚ್ಚರಿಕೆ ನೀಡಿದರು.
ಶೇ.63 ದಷ್ಟು ರೈತರೇ ಆಗಿದ್ದರೂ ಸಹ ರೈತರ ಪರ ಯಾವುದೇ ಕಾನೂನು ಸರಿಯಾಗಿ ರಚನೆಯಾಗ್ತಿಲ್ಲ. ರೈತರ ಕಲ್ಯಾಣ ಯೋಜನೆ ಮಾಡಲು ಸಾಕಷ್ಟು ಕೋಟಿಗಟ್ಟಲೆ ಹಣ ಇದ್ದರೂ ಸಹ ಯಾವ ಸರಕಾರ ಸಹ ಆಸಕ್ತಿ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರೇ ಇಷ್ಟು ದಿನ ಲಾಠಿ ಏಟು ತಿಂದಿದ್ದು ಸಾಕು ನೀವು ನೇರವಾಗಿ ಅಧಿಕಾರಕ್ಕೆ ಬನ್ನಿ ಎಂದು ರೈತರನ್ನು ಉದ್ದೇಶಿಸಿ ಹೇಳಿದರು.