ಹುಬ್ಬಳ್ಳಿ: ಮಾಜಿ ಸಿಎಂ ಬಿಎಸ್ ವೈ ರಾಜಕೀಯದಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡಿರುವ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತಾನಾಡಿ ಅವರಿಗೆ ಇನ್ನು ರಾಜಕಾರಣ ಮಾಡೊ ಶಕ್ತಿ ಇದೆ ಅವರಿಂದ ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತ್ತು ಏಕಾಏಕಿ ಈಗ ಅವರು ನಿವೃತ್ತಿಯಾಗಿದ್ದು ನನಗೆ ಬಹಳ ಬೇಸರವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಬೆಂಗೇರಿ ಖಾದಿ ಉದ್ಯೋಗ್ರಾಮಕ್ಕೆ ಭೇಟಿ ನೀಡಿ ನಂತರ ಮಾತಾನಾಡಿ ಬಿ.ಎಸ್. ಯಡಿಯೂರಪ್ಪ ಅವರು ಆಪರೇಷನ್ ಕಮಲ ಮಾಡಿ ಪಕ್ಷ ಅಧಿಕಾರಕ್ಕೆ ತಂದಿದ್ದು ಅವರಲ್ಲಿ ಇನ್ನು ಶಕ್ತಿ ಇದ್ದರು ಬಿಜೆಪಿಯವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಸಿದರು, ಅಲ್ಲದೇ ಹೈಕಮಾಂಡ್ ಅವರಿಗೆ ಸಾಕಷ್ಟು ನೋವು ನೀಡಿದೆ. ಅದೆಲ್ಲಾ ನುಂಗಿಕೊಂಡು ಪಾರ್ಟಿ ಪರವಾಗೇ ಮಾತನಾಡ್ತಾರೆ.
ಇವತ್ತು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಆದರೆ ಅದರಿಂದ ನಮ್ಮ ಪಕ್ಷಕ್ಕೆ ನಷ್ಟ ಇಲ್ಲ ಎಂದು ತಿಳಿಸಿದರು.