ಗದಗ: ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಡಗರ ಜೋರಾಗಿದೆ. ಹೆಣ್ಮಕ್ಕಳ ಹಬ್ಬವಾಗಿರೋ ನಾಗರ ಪಂಚಮಿ ಹಬ್ಬವನ್ನು ಮೂರು ದಿನಗಳ ಕಾಲ ಅತೀ ಸಂಭ್ರಮಿಸುತ್ತಾರೆ. ಹೊಸ ಹೊಸ ಸೀರೆ ಉಟ್ಟು ನಾಗಪ್ಪನಿಗೆ ಹಾಲು ಎರೆಯವುದು, ಜೋಕಾಲಿ ಆಡುವುದು ಸೇರಿ ಆ ಸಂಭ್ರಮಕ್ಕೆ ಮೇರೆ ಇಲ್ಲದ ಹಬ್ಬವದು. ಆದ್ರೆ ಈ ಹಬ್ಬವನ್ನ ಕೋತಿಯೊಂದು ಜೋಕಾಲಿ ಆಡುವುದರ ಮೂಲಕ ಸಂಭ್ರಮಿಸಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೋತಿ ಜೋಕಾಲಿ ಆಡಿ ಎಲ್ಲರನ್ನ ಹುಬ್ಬೇರಿಸಿದೆ. ಲಕ್ಷ್ಮೇಶ್ವರದ ಎ.ಪಿ.ಎಂ.ಸಿ.ಯಲ್ಲಿ ಯುವತಿಯರು ಕಟ್ಟಿ ಆಡುತ್ತಿದ್ದ ಜೋಕಾಲಿಗೆ ದಾಂಗುಡಿ ಇಟ್ಟ ಕಪಿರಾಯ ತಾನೇ ಜೋಕಾಲಿ ಏರಿ ಜೀಕ ಹೊಡೆದಿದೆ. ಯುವತಿಯರು ನಾಗರ ಕಟ್ಟೆಗೆ ಹಾಲು ಎರೆಯಲು ಹೋಗಿದ್ದರಿಂದ ಅಲ್ಲಿ ಯಾರು ಇಲ್ಲದ ಸಮಯ ನೋಡಿದ ಮಂಗ ಜೋಕಾಲಿಯ ಮೇಲೆ ಕುಳಿತುಕೊಂಡು ಬಿಂದಾಸ್ ಆಗಿ ಜೋಕಾಲಿ ಆಡಿದೆ. ಅದನ್ನು ವಿಡಿಯೋ ಮಾಡಿದ ಹುಡುಗರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ ಜೋಕಾಲಿ ಆಡುತ್ತಿರುವ ಮಂಗನನ್ನು ನೋಡಲು ಜನ ಮುಗಿಬಿದ್ದಿದ್ದರು.
ಜೋಕಾಲಿ ಆಡಿ ಪಂಚಮಿ ಹಬ್ಬವನ್ನು ಸಂಭ್ರಮಿಸಿದ ಮಂಗ
Previous Articleಎನ್ ಟಿ ರಾಮರಾವ್ ಪುತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
Next Article ಆ.4ರವರೆಗೆ ಸಂಜಯ್ ರಾವತ್‌ಗೆ ಇಡಿ ಕಸ್ಟಡಿ