ಕಲಬುರಗಿ,ಜು.5-ಪಿಎಸ್ಐ ನೇಮಕಾತಿ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಕೈಗೊಂಡ ಸಿಐಡಿ ಅಧಿಕಾರಿಗಳು ದಿವ್ಯಾ ಹಾಗರಗಿ ಒಡೆತನದ ಶಾಲೆಗೆ ಸಂಬಂಧಿಸಿದಂತೆ ಆರೋಪ ಪಟ್ಟಿ (ಚಾರ್ಜ್‌ಶೀಟ್)ಯನ್ನು ಸಿಐಡಿ ಕೋರ್ಟ್ಗೆ ಸಲ್ಲಿಸಿದ್ದಾರೆ.
ಸುದೀರ್ಘ ತನಿಖೆ ಕೈಗೊಂಡು ಸುಮಾರು 2 ಸಾವಿರ ಪುಟಗಳುಳ್ಳ ಚಾರ್ಜ್‌ಶೀಟ್ ನ್ನು ಇಂದು ಸಿಐಡಿ ಅಧಿಕಾರಿಗಳು ಕಲಬುರಗಿಯ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಎಸ್ಐ ಪರೀಕ್ಷೆ ಅಕ್ರಮ ಸಂಬಂಧ ಈಗಾಗಲೇ ಅಕ್ರಮದ ಕೇಂದ್ರಸ್ಥಾನ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿ, ಆಕೆಯ ಪತಿ ರಾಜೇಶ್ ಹಾಗು ಹಿರಿಯ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೇರಿ ಒಟ್ಟು 34 ಜನರನ್ನು ಸಿಐಡಿ ಬಂಧಿಸಿ ಜೈಲಿಗೆ ತಳ್ಳಿದ್ದಾರೆ.
ಬಂಧಿತ ಆರೋಪಿಗಳನ್ನ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದ ಸಿಐಡಿ ತಂಡ ಆರೋಪಿಗಳ ವಿರುದ್ಧ ಸಿದ್ಧಪಡಿಸಿದ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
Previous Articleಸರಳ ವಾಸ್ತು ಜ್ಯೋತಿಷಿ ಚಂದ್ರಶೇಖರ್ ಇನ್ನಿಲ್ಲ
Next Article ಎಂ.ಲಕ್ಷ್ಮಣ್ ಪೊಲೀಸರ ವಶಕ್ಕೆ…