ಮೈಸೂರು : ಬಕ್ರೀದ್ ಹಬ್ಬ ಹಿನ್ನಲೆ ದುಬಾರಿ ಬೆಲೆಗೆ ಜೋಡಿ ಟಗರು ಮಾರಾಟವಾದ ಪ್ರಸಂಗ ಮಂಡ್ಯದ ಕ್ಯಾಂತುಗೆರೆ ಗ್ರಾಮದಲ್ಲಿ ನಡೆದಿದೆ. ಸುಮಾರು 1.05 ಲಕ್ಷ ರೂಗಳಿಗೆ ಜೋಡಿ ಟಗರು ಮಾರಾಟವಾಗಿದೆ.
ಗ್ರಾಮದ ರೈತ ಶರತ್ ಬಂಡೂರು ತಳಿಯ ಟಗರು ಸಾಕಿದ್ದರು. ಒಂದುವರೆ ವರ್ಷದಿಂದ ಜೋಡಿ ಟಗರು ಸಾಕಿದ್ದ ರೈತನಿಗೆ ಬಂಪರ್ ಲಾಭ ಬಂದಿದೆ. ದುಬಾರಿ ಬೆಲೆ ಕೊಟ್ಟು ಜೋಡಿ ಟಗರು ಖರೀದಿಸಿದ ಮಂಡ್ಯ ನಗರದ ಮುಬಾರಕ್ ಬಾಬು ಅವರು ಬಂಡೂರು ಟಗರು ಸಾಕಿದ ಮಾಲೀಕನನ್ನು ಅಭಿನಂದಿಸಿದ್ದಾರೆ.
ಗ್ರಾಮದಲ್ಲಿ ಮಾಲೀಕ ಅದ್ದೂರಿಯಾಗಿ ಬಂಡೂರು ಟಗರುಗಳನ್ನ ಬೀಳ್ಕೊಟ್ಟರು.
ಕಳೆದ ವರ್ಷ ಸೂನಗಹಳ್ಳಿಯಲ್ಲಿ ಕೂಡ 1.25 ಲಕ್ಷಕ್ಕೆ ಎರಡೂ ಕುರಿ ಸೇಲ್ ಆಗಿದ್ದವು. ಬಂಡೂರು ತಳಿಯ ಕುರಿಗೆ ಹೆಚ್ಚಿದ ಬೇಡಿಕೆ ಇರುವ ಕಾರಣ ದುಬಾರಿ ಬೆಲೆಗೆ ಮಾರಾಟ ಮಾಡಿ ರೈತರು ಖುಷಿಪಟ್ಟಿದ್ದಾರೆ.