ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ಸಮಾಜವಿಜ್ಞಾನ ಪಾಠದಲ್ಲಿ ಮರುಸೇರ್ಪಡೆಗೊಳಿಸಲಾಗಿದೆ. ಆದರೆ, ಈ ಹಿಂದೆ ಪಠ್ಯಪುಸ್ತಕದ ಬಗ್ಗೆ ಬಿಜೆಪಿಗರು ಸುಳ್ಳು ಹೇಳಿಕೆ ನೀಡಿದ್ದರು. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗು ಸುನೀಲ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದ್ದಾರೆ. ನಾರಾಯಣ ಗುರು ಪಠ್ಯ ತೆಗೆದ ವಿಚಾರಕ್ಕೆ ವಿವಾದವಾದಾಗ ಬಿಜೆಪಿಗರು ಸುಳ್ಳು ಹೇಳಿದ್ದರು. ನಾರಾಯಣ ಗುರು ಪಠ್ಯ ಸಮಾಜ-ವಿಜ್ಞಾನ ಪುಸ್ತಕದಿಂದ ಪಠ್ಯವನ್ನು ತೆಗೆದಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಹೇಳಿದ್ದರು. ಆದ್ರೆ ಇದೀಗ ಶಿಕ್ಷಣ ಸಚಿವರು ಸಮಾಜ ಪಠ್ಯದಲ್ಲಿ ಸೇರಿಸಿದ್ದೇವೆ ಎಂದಿದ್ದಾರೆ. ಹಾಗಾದ್ರೆ ಸುಳ್ಳು ಹೇಳಿಕೆ ನೀಡಿದ ಸಚಿವರು ಕ್ಷಮೆಯಾಚನೆ ಮಾಡಬೇಕು ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದ್ದಾರೆ.
ಪಠ್ಯ ಕೈಬಿಟ್ಟ ವಿಚಾರ-ಸಚಿವ ಕೋಟ, ಸುನೀಲ್ ಕ್ಷಮೆಯಾಚಿಸಲಿ-ಮಿಥುನ್ ರೈ
Previous Articleಮಾಜಿ ಕಾರ್ಪೊರೇಟರ್ ಪತಿ ಅಂತ್ಯ..!!
Next Article ತುಂಬಿ ಹರಿಯುತ್ತಿರುವ ಕಪಿಲೆಯಲ್ಲಿ ಈಜುವ ಸಾಹಸ:ಯುವಕ ನಾಪತ್ತೆ