Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home»ರಾಜ್ಯ»ಹಳೇ ಗಂಡನ ಪಾದವೇ ಗತಿ!
    ರಾಜ್ಯ

    ಹಳೇ ಗಂಡನ ಪಾದವೇ ಗತಿ!

    vartha chakraBy vartha chakraಮೇ 25, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಬೆಂಗಳೂರು – ರಾಜಕೀಯದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಬಂದು ಸಾಕಷ್ಟು ಪ್ರಯೋಗಗಳನ್ನು ಮಾಡಿ ವಿಫಲವಾಗಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಹಳೆ ಗಂಡನ ಪಾದವೇ‌ ಗತಿ
    ಎಂದು ಬಣ್ಣದ ಬದುಕಿತ್ತ ಮುಖ ಮಾಡಿದ್ದಾರೆ.
    ಸಿನಿಮಾ ನಟನಾಗಬೇಕೆಂದು ವಿಶೇಷ ಕಾಳಜಿ ವಹಿಸಿ ವಿದೇಶಕ್ಕೆ ತೆರಳಿ ನಟನಾ ತರಬೇತಿಯನ್ನು ಪಡೆದುಕೊಂಡು ಬಂದ ನಿಖಿಲ್ ಕುಮಾರಸ್ವಾಮಿ, ಇಲ್ಲಿಯೂ ಕೂಡ ಸಿನಿಮಾ ನಿರ್ಮಾಣ ನಟನೆ ನಿರ್ದೇಶನ ಸೇರಿದಂತೆ ಹಲವು ವಿಷಯಗಳಲ್ಲಿ ತರಬೇತಿ ಪಡೆದುಕೊಂಡು ಒಂದೆರಡು ಸಿನಿಮಾದಲ್ಲಿ ನಟಿಸಿದರು ಕೂಡ.
    ಇದರ ಬೆನ್ನಲ್ಲೇ ಅವರು ಸಿನಿಮಾ ರಂಗದಿಂದ ವಿಮುಖರಾಗಿ ರಾಜಕೀಯದತ್ತ ಆಸಕ್ತಿ ಬೆಳಸಿಕೊಂಡರು. ಬಣ್ಣದ ಬದುಕಿನಲ್ಲಿ ಸಿಕ್ಕಿದ ಅಲ್ಪಸ್ವಲ್ಪ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ತಾವು ಒಬ್ಬ ದೊಡ್ಡ ಸಿನಿಮಾ ನಟ ಎಂದು ಹೇಳಿಕೊಂಡು ರಾಜಕಾರಣದಲ್ಲಿ ಯಶಸ್ಸು ಗಳಿಸುವ ಪ್ರಯತ್ನ ನಡೆಸಿದರು
    ತಮ್ಮ ತಾತ ಮಾಜಿ ಪ್ರಧಾನಿ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಎಂಬ ಭದ್ರಕೋಟೆ ಇವೆಲ್ಲವನ್ನು ಇಟ್ಟುಕೊಂಡು ರಾಜಕೀಯದಲ್ಲಿ ಸಾಧನೆ ಮಾಡಬೇಕೆಂದು ಬಂದ ನಿಖಿಲ್ ಕುಮಾರಸ್ವಾಮಿ ಮೊದಲಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯ ಸೋಲು ಕಂಡರು.
    ಆದರೂ ಧೃತಿಗೆಡದೇ ಪಕ್ಷ ಸಂಘಟನೆಯಲ್ಲಿ ತೊಡಗಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
    ಇದರಿಂದ ಮತ್ತಷ್ಟು ಉತ್ಸಾಹದಿಂದ ನಿಖಿಲ್ ಕುಮಾರಸ್ವಾಮಿ ಪಕ್ಷ ಪಕ್ಷ ಸಂಘಟನೆಯಲ್ಲಿ ತೊಡಗಿದರು ತಮ್ಮದೇ ಆದ ಪಡೆಯನ್ನು ಕಟ್ಟಿಕೊಂಡು ರಾಜ್ಯದಲ್ಲಿ ಪ್ರವಾಸ ಕೈಗೊಂಡರು.
    ಸಿನಿಮಾ ನಟ ಎಂಬ ಹೆಗ್ಗಳಿಕೆಯೊಂದಿಗೆ ರಾಜ್ಯಾದ್ಯಂತ ಜೆಡಿಎಸ್ ಸಂಘಟನೆಯಲ್ಲಿ ತೊಡಗಿದ ನಿಖಿಲ್ ಕುಮಾರಸ್ವಾಮಿ ವಿಧಾನಸಭಾ ಚುನಾವಣೆ ಸ್ಪರ್ಧಿಸುವ ತೀರ್ಮಾನ ಕೈಗೊಂಡರು.
    ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳದ ಭದ್ರ ಕೋಟೆ ಎಂದು ಪರಿಗಣಿಸಲಾದ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಇಲ್ಲಿಯವರೆಗೆ ಆಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅನಿತಾ ಕುಮಾರಸ್ವಾಮಿ ಅವರು ತಮ್ಮ ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿದರೆ ರಾಮನಗರ ಪಕ್ಕದಲ್ಲಿರುವ ಚನ್ನಪಟ್ಟಣ ಕ್ಷೇತ್ರದಿಂದ ಕುಮಾರಸ್ವಾಮಿ ಕಣಕ್ಕಿಳಿದರು. ಇದರಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಅತ್ಯಂತ ಸುಲಭವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು.
    ಆದರೆ ಮತದಾರ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ಬರೋಬ್ಬರಿ ಎರಡು ದಶಕಗಳ ಕಾಲ ಈ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಜೆಡಿಎಸ್ ಮತ್ತು ದೇವೇಗೌಡರ ಕುಟುಂಬವನ್ನು ಸಾರಾಸಗಟಾಗಿ ತಿರಸ್ಕರಿಸಿದ.
    ಇದರಿಂದ ಆಘಾತಕ್ಕೊಳಗಾಗಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಅಷ್ಟೇ ಅಲ್ಲ ಇನ್ನು ಮುಂದೆ ತಾವು ರಾಜಕೀಯ ಬಿಟ್ಟು ಸಿನಿಮಾ ಪ್ರಪಂಚದಲ್ಲಿ ಸಕ್ರಿಯವಾಗುವುದಾಗಿ ಹೇಳಿದ್ದಾರೆ.

    ಚುನಾವಣೆ ರಾಜಕೀಯ ಸಿನಿಮ
    Share. Facebook Twitter Pinterest LinkedIn Tumblr Email
    Previous Articleಎಂ.ಬಿ.ಪಾಟೀಲ್ ಅವರನ್ನು ಗುರಾಯಿಸಿದ ಸುರೇಶ್ | Vidhana Soudha
    Next Article ರಾಜ್ಯ ವಕ್ಫ್ ಮಂಡಳಿ ನೇಮಕದ ಅಚ್ಚರಿ
    vartha chakra
    • Website

    Related Posts

    ವೇದಿಕೆಯ ಮೇಲೆ ಮುಗ್ಗರಿಸಿ ಬಿದ್ದ ಅಮೇರಿಕಾ ಅಧ್ಯಕ್ಷ

    ಜೂನ್ 2, 2023

    ಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George

    ಜೂನ್ 1, 2023

    ಜನರ ನಡುವೆ ಕೆಲಸ ಮಾಡಲು ‘ಸಮೂಹಶಕ್ತಿ’ ಸಂಕಲ್ಪ | Samooha Shakti

    ಜೂನ್ 1, 2023

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ವೇದಿಕೆಯ ಮೇಲೆ ಮುಗ್ಗರಿಸಿ ಬಿದ್ದ ಅಮೇರಿಕಾ ಅಧ್ಯಕ್ಷ

    ಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George

    ಜನರ ನಡುವೆ ಕೆಲಸ ಮಾಡಲು ‘ಸಮೂಹಶಕ್ತಿ’ ಸಂಕಲ್ಪ | Samooha Shakti

    ಪ್ರಗತಿಯ ಚಿತ್ರಣ ಬದಲಿಸುವ ಇಂಧನ ಇಲಾಖೆ | Dept Of Power

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • coronatoto.com ರಲ್ಲಿ ರಶ್ಮಿಕಾ – ವಿಜಯ್ ದೇವರಕೊಂಡ ಇನ್ನು ದೂರ ದೂರ? | Rashmika Mandanna | Vijay Devarakonda
    • top online casinos ರಲ್ಲಿ ಅಣ್ಣಾಮಲೈ ಹತ್ತಿರ ಸಿಕ್ಕಿದ್ದು 2 ಜೊತೆ ಬಟ್ಟೆ 2 ಲೀಟರ್ ನೀರು | K Annamalai | BJP
    • top rated online casino usa ರಲ್ಲಿ ಅಣ್ಣಾಮಲೈ ಹತ್ತಿರ ಸಿಕ್ಕಿದ್ದು 2 ಜೊತೆ ಬಟ್ಟೆ 2 ಲೀಟರ್ ನೀರು | K Annamalai | BJP
    Latest Kannada News

    ವೇದಿಕೆಯ ಮೇಲೆ ಮುಗ್ಗರಿಸಿ ಬಿದ್ದ ಅಮೇರಿಕಾ ಅಧ್ಯಕ್ಷ

    ಜೂನ್ 2, 2023

    ಬೆಸ್ಕಾಂ ಅಧಿಕಾರಿಗಳ ಮೈಚಳಿ ಬಿಡಿಸಿದ ಕೆ.ಜೆ. ಜಾರ್ಜ್ | KJ George

    ಜೂನ್ 1, 2023

    ಜನರ ನಡುವೆ ಕೆಲಸ ಮಾಡಲು ‘ಸಮೂಹಶಕ್ತಿ’ ಸಂಕಲ್ಪ | Samooha Shakti

    ಜೂನ್ 1, 2023
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    UT Khader
    UT Khader ಇನ್ನು ವಿಧಾನಸಭಾಧ್ಯಕ್ಷ #karnataka #mangalore #kudla #byari #kannada #kannadnews
    Subscribe