ಮೈಸೂರಿನಲ್ಲಿ ಮತ್ತೆ ಕ್ರೆಡಿಟ್ ವಾರ್ ಶುರುವಾಗಿದ್ದು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಹೆಸರು ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಶುರುವಾಗಿದೆ.
ಮಂಡಕಳ್ಳಿ ವಿಮಾನ ನಿಲ್ದಾಣ ಹೆಸರು ಬದಲಾವಣೆ ವಿಚಾರದಲ್ಲಿ 2015 ಅಕ್ಟೋಬರ್ 9 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಹೀಗಾಗಿ ನಮ್ಮ ಅವಧಿಯಲ್ಲಿ ಹೆಸರು ಬದಲಾವಣೆಗೆ ಶಿಫಾರಸ್ಸು ಮಾಡಲಾಗಿತ್ತು. ಕಾಂಗ್ರೆಸ್ ನಾಯಕರು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೆ ಇತ್ತ ಬಿಜೆಪಿಯವರು ಸಹ ನಾವೇ ಹೆಸರು ಬದಲಾವಣೆ ಮಾಡಿದ್ದೇವೆ ಎನ್ನುತ್ತಿದ್ದಾರೆ.
ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ಶಿಫಾರಸ್ಸಿಗೆ ಪುಷ್ಟಿ ನೀಡುವಂತೆ ಇತಿಹಾಸ ತಜ್ಞ ನಂಜರಾಜೇ ಅರಸ್ ಪತ್ರದ ದಾಖಲೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಹೆಸರು ಬದಲಾಣೆ ವಿಚಾರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಹೆಸರು ಬದಲಾವಣೆಗೆ ಪತ್ರ ಬರೆಯಲಾಗಿತ್ತು. ಬಿಜೆಪಿಯವರು ನೈಜವಾಗಿ ಮಾತನಾಡಬೇಕು. ಸುಳ್ಳುಗಳನ್ನ ಹೇಳಬಾರದು. ಯಾವುದೇ ಪಕ್ಷದವರಾಗಲಿ ಸತ್ಯವನ್ನ ಹೇಳಬೇಕು.
ಸಿದ್ದರಾಮಯ್ಯರ ಸರ್ಕಾರ ಅಂದು ಪತ್ರ ಬರೆದಿದೆ. ಈಗ ನಾವು ಮಾಡಿದ್ದು ಅಂತಾ ಹೇಳ್ತಾರೆ ಬಿಜೆಪಿಯವರು ಹೇಳುತ್ತಿದ್ದಾರೆ. ಜನರ ಸೆಳೆಯುವ ಸಲುವಾಗಿ ಸುಳ್ಳುಗಳನ್ನ ಹೇಳುವ ಕೆಲಸ ಬಿಜೆಪಿಯದ್ದಾಗಿದೆ. ಸ್ಥಳೀಯ ಬಿಜೆಪಿ ನಾಯಕರು ಎಲ್ಲವನ್ನು ನಾವೇ ಮಾಡಿದ್ದು ಎಂದು ಹೇಳುವುದು ಸರಿಯಲ್ಲ. ಹಣೆಯ ಮೇಲೆ ಬೋರ್ಡ್ ಹಾಕಿಕೊಳ್ಳುವ ಕೆಲಸ ಮಾಡೋದು ಸರಿಯಲ್ಲ. ನಿಜವಾಗಿಯೂ ನಾಲ್ವಡಿಯವರ ಹೆಸರು ಬರಬೇಕೆಂದು ಬಯಸಿದ್ದು ಸಿದ್ದರಾಮಯ್ಯನವರು ಎಂದು ಪ್ರೊ. ನಂಜರಾಜೇ ಅರಸ್ ಹೇಳಿದ್ದಾರೆ.
ಮೈಸೂರು ಮಂಡಕಳ್ಳಿ ವಿಮಾನ ನಿಲ್ದಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.