ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿಯ ಒಡಲು ಸಂಪೂರ್ಣ ಭರ್ತಿಯಾಗಿದೆ. ಈ ನಡುವೆ ಕೆ.ಆರ್.ಎಸ್ ಡ್ಯಾಂ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.ಇದರಿಂದಾಗಿ ಜನರಿಗೆ ಪ್ರವಾಹ ಭೀತಿಯ ಆತಂಕ ಎದುರಾಗಿದೆ. ಸದ್ಯ KRS ನಿಂದ 75 ಸಾವಿರ ಹಾಗು ಗೊರೂರುನಿಂದ 18 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಹೀಗಾಗಿ ಡ್ಯಾಂ ಕೆಳಭಾಗದ ಕಾವೇರಿ ಮತ್ತು ಹೇಮಾವತಿ ನದಿ ಪಾತ್ರದಲ್ಲಿ ಪ್ರವಾಹಭೀತಿ ಉಂಟಾಗಿದೆ. ಹೆಚ್ಚಿನ ನೀರು ಬಿಡುಗಡೆಯಿಂದ ಉಕ್ಕಿ ಎರಡು ನದಿಗಳು ಉಕ್ಕಿ ಹರಿಯುತ್ತಿವೆ.
ಪ್ರವಾಹದಿಂದ ಪ್ರಮುಖ ಪ್ರವಾಸಿ ತಾಣಗಳಾದ ಬಲಮುರಿ, ರಂಗನತಿಟ್ಟು ಜಲಾವೃತವಾಗಿವೆ. ಮುಳುಗಡೆಯ ಹಂತದಲ್ಲಿ ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ಈ ನಡುವೆ ಶ್ರೀರಂಗಪಟ್ಟಣ ತಾಲೂಕಿನ ಬಳಿಯ ಗೌತಮ ಕ್ಷೇತ್ರ ಜಲಾವೃತವಾಗಿದ್ದು, ನಡುಗಡ್ಡೆಯಲ್ಲಿ ಆಶ್ರಮದ ಸ್ವಾಮೀಜಿ ಮತ್ತು ಶಿಷ್ಯ ವೃಂದ ಸಿಲುಕಿದ್ದಾರೆ.