ಬೆಂಗಳೂರು,ಜು.19– ನಕಲಿ ಇನ್ ಸ್ಟಾಗ್ರಾಮ್ ಖಾತೆ ತೆರೆದು ಕಾವೇರಿ ಹಾಗು ಕೊಡವ ಜನಾಂಗವನ್ನು ಅವಹೇಳನ ಮಾಡಿ ಜಿಲ್ಲಾದ್ಯಂತ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶ ಸೃಷ್ಟಿಸಿದ್ದ ದುಷ್ಕರ್ಮಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಜಿಲ್ಲಾ ಪೊಲೀಸರ ಕಾರ್ಯವನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್ ಅವರು ಶ್ಲಾಘಿಸಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ 25ಸಾವಿರ ರೂ ಬಹುಮಾನ ಘೋಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೊಡವ ಜನಾಂಗವನ್ನು ಅವಹೇಳನ ಮಾಡಿದ್ದ ವಿರಾಜಪೇಟೆ ತಾಲೂಕಿನ ಕೆ.ಸಿ.ದಿವಿನ್ ದೇವಯ್ಯ (29) ಎಂಬ ಕೊಡವ ಯುವಕನನ್ನು ಎರಡು ದಿನಗಳ ಹಿಂದೆ ಜಿಲ್ಲಾ ಪೊಲೀಸರು ಬಂಧಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಕೊಡವ ಸಮಾಜದ ಮಹಿಳೆಯರನ್ನು ಅವಹೇಳನ ಮಾಡಿ ಅಪರಿಚಿತ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ನಂತರ ಇದಕ್ಕೆ ಸಂಬಂಧವಿಲ್ಲದ ಅಮಾಯಕ ಮುಸ್ಲಿಮ್ ಯುವಕನ ಫೋಟೋ ಎಡಿಟ್ ಮಾಡಿ ವ್ಯಾಪಕವಾಗಿ ಹರಡಿ ಆತನಿಗೆ ಮಾನಸಿಕ ಕಿರುಕುಳ ನೀಡಲಾಗಿತ್ತು. ಈ ಮಧ್ಯೆ ಸಂಘಪರಿವಾರ ಜಿಲ್ಲಾ ಬಂದ್ ಕರೆ ನೀಡಿತ್ತು.
Previous Articleಕೇರಳದಲ್ಲಿ Monkeypox ಪತ್ತೆ :ಕರ್ನಾಟಕ ಗಡಿಭಾಗದಲ್ಲಿ ಕಟ್ಟೆಚ್ಚರ
Next Article ಕೈ ಹಿಡಿದ ಪತ್ನಿ ATM ಅಲ್ಲ…!