ತುಮಕೂರು : ದ್ವೇಶದ ಜ್ವಾಲೆಗೆ ಕಟಾವಿಗೆ ಬಂದಿದ್ದ ಆರು ನೂರು ಬಾಳೆ ಬೆಳೆಯನ್ನು ಕಡಿದು ಹಾಕಿರುವ ಘಟನೆ ಕುಣಿಗಲ್ ನ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯಲಕ್ಷ್ಮಮ್ಮ ಜಗದೀಶ, ಪುಪ್ಪಲತಾ, ಕುಮಾರ್ ಬೆಳೆ ನಾಶ ಮಾಡಿದ್ದಾರೆ ಎಂದು ಅವರ ವಿರುದ್ದ ಕುಣಿಗಲ್ ಪೊಲೀಸ್ ಠಾಣೆಗೆ ಎಸ್.ಕೆ. ರವಿಕುಮಾರ್ ನೀಡಿದ ದೂರು ನೀಡಿದ್ದಾರೆ.
ಗ್ರಾಮದ ಜಯಲಕ್ಷ್ಮಮ್ಮ ಅವರಿಗೆ ಸೇರಿದ 20 ಗುಂಟೆ ಜಮೀನನ್ನು ಎರಡು ವರ್ಷಗಳ ಅವಧಿಗೆ ಎಸ್.ಕೆ.ರವಿಕುಮಾರ್ ಅವರಿಗೆ ಗುತ್ತಿಗೆ ನೀಡಲಾಗಿತ್ತು. ಜಮೀನಲ್ಲಿ ಬಾಳೆ ಬೆಳೆಯನ್ನು ಬೆಳೆದುಕೊಳ್ಳುವುದು, ಜಯಲಕ್ಷ್ಮಮ್ಮ ಅವರಿಗೆ ತೆಂಗಿನ ಸಸಿಗಳನ್ನು ಬೆಳೆಸಿಕೊಡಲು ರವಿಕುಮಾರ್ ಹಾಗು ಜಯಲಕ್ಷ್ಮಮ್ಮ ನಡುವೆ ಮಾತುಕೆತೆ ನಡೆದಿತ್ತು. ಈ ನಡುವೆ ಒಂದು ವರ್ಷ ಯಾವುದೇ ತಂಟೆ ಇಲ್ಲದೆ ರವಿಕುಮಾರ್ ಬೆಳೆ ಬೆಳೆದುಕೊಂಡಿದ್ದರು. ಆದರೆ ಜಯಲಕ್ಷ್ಮಮ್ಮ ಹಾಗೂ ರವಿಕುಮಾರ್ ನಡುವೆ ಹೊಂದಾಣಿಕೆಯಾಗದೇ ಇಬ್ಬರಲ್ಲಿ ವಿರಾಸ ಉಂಟಾಗಿತ್ತು. ರವಿಕುಮಾರ್ ಬೆಳೆದಿದ್ದ 600ಬಾಳೆ ಬೆಳೆ ಕಟಾವಿಗೆ ಬಂದಿತ್ತು. ಜಯಲಕ್ಷ್ಮಮ್ಮ ಹಾಗು ಆತನ ಮಗ ಜಗದೀಶ್ ಮಗಳು ಪುಪ್ಪಲತಾ, ಅಳಿಯಾ ಕುಮಾರ್ ನಾಲ್ಕು ಮಂದಿ ಸೇರಿ ಬಾಳೇ ಬೆಳೆಯನ್ನು ಕಡಿದು ನಾಶ ಮಾಡಿದ್ದಾರೆ ಇದನ್ನು ಪ್ರಶ್ನೆ ಮಾಡಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ರವಿಕುಮಾರ್ ಆರೋಪಿಸಿದ್ದಾರೆ. ಕುಣಿಗಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.