ತುಮಕೂರು : ಮನೆಯಿಂದ ಕಾಣೆಯಾಗಿದ್ದ ಮುದ್ದು ಗಿಣಿ ಮಾಲೀಕರ ಮನೆ ಸೇರಿದೆ. ಇದೇ ತಿಂಗಳ 16 ರಂದು ಮನೆಯಿಂದ ನಾಪತ್ತೆಯಾಗಿತ್ತು ಆಫ್ರಿಕನ್ ಗಿಣಿ. ಇದರ ಪತ್ತೆಗಾಗಿ ತುಮಕೂರು ಹಾಗು ಸುತ್ತಮುತ್ತ ಬ್ಯಾನರ್, ಪತ್ರಿಕೆ ಜಾಹೀರಾತು, ಪಾಂಪ್ಲೆಟ್ ಹಂಚಿ ಗಿಣಿಗಾಗಿ ಗೋಗರೆದಿದ್ದರು. ಆಟೋದಲ್ಲಿ ಧ್ವನಿ ವರ್ಧಕದ ಮೂಲಕ ಜನತೆಯಲ್ಲಿ ಗಿಣಿ ಸಿಕ್ಕಲ್ಲಿ ಮರಳಿಸುವಂತೆ ಮನವಿ ಮಾಡಿದ್ದರು. ಹುಡುಕಿಕೊಟ್ಟವರಿಗೆ 50 ಸಾವಿರ ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದರು. ಮೊದಲಿಗೆ 50 ಸಾವಿರ ಬಹುಮಾನ ಪ್ರಕಟಿಸಿದ್ದ ಮಾಲೀಕರು ಕಳೆದ ಎರಡು ದಿನಗಳಿಂದ ಬಹುಮಾನದ ಮೊತ್ತ ಏರಿಸಿ ಇಂದು ಹುಡುಕಿ ಕೊಟ್ಟವರಿಗೆ 85 ಸಾವಿರ ಬಹುಮಾನ ನೀಡಿದ್ದಾರೆ. ಬಂಡೆ ಪಾಳ್ಯದ ತೋಟದ ಮನೆಯಲ್ಲಿ ಈ ಗಿಳಿ ಪತ್ತೆಯಾಗಿದೆ. ಗಿಳಿ ಇಲ್ಲದೆ ಕಂಗಾಲಾಗಿದ್ದ ತುಮಕೂರಿನ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಾಪತ್ತೆಯಾಗಿದ್ದ ಆಫ್ರಿಕನ್ ಗಿಳಿ ಮರಳಿ ಗೂಡಿಗೆ
Previous Articleಡಿನೋಟಿಫಿಕೇಷನ್ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಬಿಎಸ್‌ವೈಗೆ ಬಿಗ್ ರಿಲೀಫ್
Next Article ತುಂಡು ಬಟ್ಟೆ ತೊಟ್ಟು ವಿಮಾನವೇರಿದ ನಟಿ ಊರ್ವಶಿ