ತುಮಕೂರು : ಅಪಘಾತದ ಬಳಿ ಎರಡು ಬಾರಿ ಎಳನೀರು ತುಂಬಿದ ಲಾರಿ ಹೊತ್ತಿ ಉರಿದ ಘಟನೆ ತುಮಕೂರು ಸಮೀಪ ನಡೆದಿದೆ.
ತುಮಕೂರು ತಾಲ್ಲೂಕಿನ ಗೂಳೂರು ಗ್ರಾಮದಲ್ಲಿ ಮದ್ದೂರಿನಿಂದ ಬರುತ್ತಿದ್ದ ಎಳನೀರು ಹೊತ್ತ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಆಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಅವೈಜ್ಞಾನಿಕ ರಸ್ತೆ ವಿಭಾಜಕದಿಂದಾಗಿ ಇಲ್ಲಿ ತಿಂಗಳಿಗೆ 3-4 ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿನ ವಾಸಿಗಳು ಕೆಶಿಪ್ ಇಲಾಖೆಗೆ ಮನವಿ ಸಲ್ಲಿಸಿದ್ದರು ಯಾವುದೇ ಕ್ರಮಕೈಗೊಂಡಿರದೆ ಇರುವುದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತ ಅಂದರೆ ಮುಂಜಾನೆ ಅಪಘಾತ ಬಳಿಕ ಬೆಂಕಿ ನಂದಿಸಲಾಗಿತ್ತು. ಮತ್ತೆ 6 ಗಂಟೆ ಸುಮಾರಿಗೆ ಮತ್ತೊಮ್ಮೆ ಬೆಂಕಿ ಹೊತ್ತು ಕೊಂಡಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…