ಉಡುಪಿ: ಮೀನಿನ ಗಾಳಕ್ಕೆ ಬೃಹತ್ ಗಾತ್ರದ ಎರಡು ಮೀನುಗಳು ಉಡುಪಿಯ ಮಲ್ಪೆಯಲ್ಲಿ ಸಿಕ್ಕಿಹಾಕಿಕೊಂಡಿದೆ. ಕೇಬಲ್ ಆಪರೇಟರ್ ವೃತ್ತಿ ಮಾಡಿಕೊಂಡಿರುವ ನಾಗೇಶ್ ಉದ್ಯಾವರ ಅವರು, ದೋಣಿಯಲ್ಲಿ ಹೋಗಿ ಹವ್ಯಾಸವಾಗಿ ಮೀನಿಗೆ ಗಾಳ ಹಾಕುತ್ತಿರುತ್ತಾರೆ. ಅದರಂತೆ ಇಂದು ಮೀನಿಗೆ ಗಾಳ ಹಾಕಿದಾಗ ಬೃಹತ್ ಗಾತ್ರದ ಎರಡು ಮೀನುಗಳು ಗಾಳಕ್ಕೆ ಬಿದ್ದಿವೆ. 25 ಕೆ.ಜಿ ತೂಕದ ಮುರು ಮೀನು, ಹಾಗು 15 ಕೆ.ಜಿ ತೂಕದ ಕೊಕ್ಕರ್ ಮೀನು ಇದಾಗಿದ್ದು, ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಳಬಾಳುವ ಮೀನು ಇದಾಗಿದೆ.
ಒಂದೇ ದಿನ ಗಾಳಕ್ಕೆ ಬಿತ್ತು ಎರಡು ಆಳೆತ್ತರದ ಮೀನುಗಳು!
Previous Articleಸರ್ಕಾರಿ ನೌಕರರೇ ಹುಷಾರ್..!
Next Article ಗುಜರಾತ್‌ನಲ್ಲಿ ಮದ್ಯ ಸೇವಿಸಿದ ಹತ್ತು ಜನ ಸಾವು