ಬೆಂಗಳೂರು – ಕರಾವಳಿಯ ಕೇಸರಿ ಭದ್ರಕೋಟೆಯನ್ನು ಸತತವಾಗಿ ಛಿದ್ರ ಮಾಡುತ್ತಾ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗುತ್ತಿರುವ ಹಿರಿಯ ನಾಯಕ ಯು.ಟಿ. ಖಾದರ್ ಅವರು ಹದಿನಾರನೇ ವಿಧಾನಸಭೆಯ ಅಧ್ಯಕ್ಷರಾಗಲಿದ್ದಾರೆ.
ಈ ಮೂಲಕ ವಿಧಾನಸಭೆಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಖಾದರ್ ಪಾತ್ರರಾಗಲಿದ್ದಾರೆ.
ಕಾನೂನು ಪದವೀಧರರಾಗಿರುವ ಯು.ಟಿ. ಖಾದರ್ ಅವರು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರು. ವಿದ್ಯಾರ್ಥಿ ದಿಸೆಯಲ್ಲೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡ ಅವರು ಎನ್ ಎಸ್ ಯು ಐ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸಿದರು ಯುವ ಕಾಂಗ್ರೆಸ್ ಪದಾಧಿಕಾರಿ ಸೇರಿದಂತೆ ಹಂತ ಹಂತವಾಗಿ ಪಕ್ಷದ ಹುದ್ದೆಗಳನ್ನು ಅಲಂಕರಿಸಿ ಶಾಸಕರಾದರು.
ಅಂದಿನ ಉಳ್ಳಾಲ ಹಾಗೂ ಈಗಿನ ಮಂಗಳೂರು ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಯುಟಿ ಖಾದರ್ ಒಂದು ರೀತಿಯಲ್ಲಿ ಆಜಾತಶತ್ರು ಕರಾವಳಿ ಜಿಲ್ಲೆ ಮಂಗಳೂರು ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ. ಹೀಗಿದ್ದರೂ, ಖಾತ ಮತದಾರರಿಗೆ ಖಾದರ್ ಅವರ ಬಗ್ಗೆ ವಿಶೇಷವಾದ ಮಮತೆ ಹೀಗಾಗಿ ಸತತವಾಗಿ ಅವರನ್ನು ಶಾಸನಸಭಾ ಸದಸ್ಯರನ್ನಾಗಿ ಆಯ್ಕೆ ಮಾಡುತ್ತಿದ್ದಾರೆ.
ಆರೋಗ್ಯ ಶಿಕ್ಷಣ ವಸತಿ ನಗರ ಅಭಿವೃದ್ಧಿ ಇಲಾಖೆ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಖಾದರ್ ಅವರು ನೂತನ ಸರ್ಕಾರದಲ್ಲಿ ಮತ್ತೊಮ್ಮೆ ಮಂತ್ರಿ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು ಕಾಂಗ್ರೆಸ್ ಹೈಕಮಾಂಡ್ ಇವರ ಸೇವೆ ಹಾಗೂ ಅಜಾತಶತ್ರು ಮನೋಭಾವವನ್ನು ಗುರುತಿಸಿ ವಿಧಾನಸಭೆಯ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದೆ.
ಎಲ್ಲರೊಂದಿಗೆ ಸ್ನೇಹಪರವಾದ ನಡವಳಿಕೆ ಕಾನೂನು, ನಿಯಮಗಳ ಆಳವಾದ ಅರಿವು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡದ ದಕ್ಷ ಆಡಳಿತ ವೈಖರಿ ಸೇರಿದಂತೆ ಹಲವಾರು ಅಂಶಗಳು ಖಾದರ್ ಅವರನ್ನು ಈ ಉನ್ನತ ಹುದ್ದೆಗೆ ಕೊಂಡೊಯ್ದಿದಿದೆ.
Previous Articleಹೊಸ ಸರ್ಕಾರ ಕೊಡಲಿದೆಯ BJPಗೆ ಮರ್ಮಾಘಾತ?
Next Article ಜೀವನ ರಿಲೇ ಓಟದಂತೆ-ಸಹದ್ಯೋಗಿಗಳಿಗೆಪ್ರವೀಣ್ ಸೂದ್ ಪತ್ರ
3 ಪ್ರತಿಕ್ರಿಯೆಗಳು
can you buy cheap clomid without rx order generic clomiphene without insurance where buy clomiphene without dr prescription cheap clomid prices generic clomid 100mg can you buy clomid for sale can i get generic clomiphene for sale
This is the kind of delivery I turn up helpful.
The vividness in this tune is exceptional.