ಉಡುಪಿ,ಜೂ.30- ಅಪಹರಣ ನಾಟಕವಾಡಿ, ಮನೆಯವರಿಂದಲೇ ಹಣಕ್ಕೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಯುವಕನನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರುಣ್ ನಾಯಕ್ ವಂಚಕ ಯುವಕನೊಬ್ಬ ನನ್ನನ್ನು ಅಪಹರಿಸಲಾಗಿದೆ ಎಂದು ಪಾಲಕರನ್ನೇ ಯಾಮಾರಿಸಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.
ನನ್ನನ್ನು ಅಪಹರಿದ್ದಾರೆ ಐದು ಲಕ್ಷ ಕೊಡಿ ಎಂದು ಅಮ್ಮನಿಗೆ ವರುಣ್ ನಾಯಕ್ ಕರೆ ಮಾಡಿದ್ದ. ಇದರಿಂದ ಗಾಬರಿಗೊಂಡ ಪಾಲಕರು ಉಡುಪಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಅಪಹರಣ ಕೇಸ್ ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಿ ಕಾರ್ಯಾಚರಣೆಗೆ ಇಳಿದಿತ್ತು. ಲೊಕೇಶನ್ ಪತ್ತೆ ಹಚ್ಚಿದಾಗ ಯುವಕ ಗೋವಾದಲ್ಲಿ ಇರುವುದು ತಿಳಿದುಬಂದಿತ್ತು. ತಕ್ಷಣ ಲೊಕೇಶನ್ ಬೆನ್ನತ್ತಿ ಗೋವಾಗೆ ತೆರಳಿದ ಪೊಲೀಸರ ತಂಡಕ್ಕೆ ಶಾಕ್ ಎದುರಾಗಿತ್ತು. ಏಕೆಂದರೆ, ಅಪಹರಣ ಆಗಿದ್ದೇನೆಂದು ಹೇಳಿಕೊಂಡಿದ್ದ ಚರಣ್, ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದ.
ಗೋವಾದ ಕ್ಯಾಸಿನೋದಲ್ಲಿ ಆಟವಾಡುತ್ತಿದ್ದ ಚರಣ್ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ, ಪಾಲಕರ ಬಳಿಯಿದ್ದ ಹಣವನ್ನು ದೋಚಲು ಅಪಹರಣದ ನಾಟಕ ಆಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಪಾಲಕರ ಹಣ ಎಗರಿಸುವ ಸಂಚು ಹಾಗೂ ಪೊಲೀಸರ ಸಮಯ ವ್ಯರ್ಥ ಮಾಡಿದ್ದಕ್ಕೆ ಕೇಸ್ ದಾಖಲಿಸಲಾಗಿದ್ದು, ವಂಚಕ ಯುವಕನನ್ನು 15 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಅಪಹರಣ ನಾಟಕವಾಡಿ ಹೆತ್ತವರಿಗೇ ಬೇಡಿಕೆ ಇಟ್ಟ ಖತರ್ನಾಕ್ ಮಗ!
Previous Articleಚಾಮುಂಡಿ ಭಕ್ತರಿಗೆ ನೀಡಲು ಹಾರ್ಲಿಕ್ಸ್ ಮೈಸೂರು ಪಾಕ್ ರೆಡಿ..!
Next Article ನಾನು ಬಡವ ನನ್ನ ಕತ್ತು ಸೀಳಬೇಡಿ..!!