ಬೆಂಗಳೂರು,ಸೆ.2 – ಮಹಾನಗರಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪಣ ತೊಟ್ಟಿರುವ ಬೆಂಗಳೂರು ಪೊಲೀಸರು ನಿರಂತರ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಗಡಿಪಾರು ಶಿಕ್ಷೆ ನೀಡುತ್ತಿದ್ದಾರೆ.
ಅದರಂತೆ ಕೊಲೆ, ಕೊಲೆಯತ್ನ, ದರೋಡೆ,ಸುಲಿಗೆ ಸೇರಿ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿ ಶಿವರಾಜ ಅಲಿಯಾಸ್ ಕುಳ್ಳ ಶಿವನನ್ನು ಬೆಂಗಳೂರು ನಗರದಿಂದ ಗಡೀಪಾರು ಮಾಡಲಾಗಿದೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿರುವ ಶಿವರಾಜ ಅಲಿಯಾಸ್ ಕುಳ್ಳ ಶಿವನನ್ನು ನಗರದಿಂದ ಗಡೀಪಾರು ಮಾಡಿ ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್. ಡಿ.ಶರಣಪ್ಪ ಅವರು ಆದೇಶ ಹೊರಡಿಸಿದ್ದಾರೆ.
ಕೊಲೆಯತ್ನ, ಕೊಲೆ,ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಳ್ಳ ಶಿವನ ವಿರುದ್ದ ಬ್ಯಾಡರಹಳ್ಳಿ, ತಾವರೆಕೆರೆ, ಮಾದನಾಯಕನಹಳ್ಳಿ, ಕುಂಬಳಗೂಡು ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿಯು ಪದೇ ಪದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದು, ಆತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಅಧಿನಿಯಮದ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿ.ಬಿ.ಎಂ.ಪಿ ವ್ಯಾಪ್ತಿಯ ಪ್ರದೇಶವನ್ನು ಪ್ರವೇಶಿಸದಂತೆ ತುಮಕೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

2 ಪ್ರತಿಕ್ರಿಯೆಗಳು
The excitement never ends at Betano Casino https://betanogame.org/. Claim 100% up to €500 and play live blackjack with real dealers. Sports, slots and more – all here.
Mostbet – o melhor cassino online com 150% de bГґnus + 200 giros de graГ§a – https://mostbetpt.pro/ , O cassino que mais valoriza seus jogadores te espera no Mostbet .