ಬ್ರಿಟನ್ ರಾಷ್ಟ್ರದ ದೇಶ ಭಾಗಗಳಾದ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಅರ್ಧಕ್ಕಿಂತ ಕಡಿಮೆ ಜನರು ತಮ್ಮನ್ನು ತಾವು ಕ್ರಿಶ್ಚಿಯನ್ ಎಂದು ಪರಿಗಣಿಸುತ್ತಾರೆ ಎಂಬುದು ಇತ್ತೀಚಿನ ಜನಗಣತಿಯ ಪ್ರಕಾರ ತಿಳಿದುಬಂದಿದೆ. ಇದೇ ಮೊದಲ ಬಾರಿಗೆ ಇಂಗ್ಲೆಂಡ್ ದೇಶದ ಅಧಿಕೃತ ಧರ್ಮವಾದ ಕ್ರಿಶ್ಚಿಯಾನಿಟಿಯನ್ನು ಅಲ್ಪಸಂಖ್ಯಾತರು ಅನುಸರಿಸುತ್ತಾರೆ ಎಂಬ ಆಶ್ಚರ್ಯಕರ ಮಾಹಿತಿ ಹೊರಬಿದ್ದಿದೆ. ಕಳೆದ ಜನಗಣತಿಯ ನಂತರದ ದಶಕದಲ್ಲಿ ಬ್ರಿಟನ್ ಕಡಿಮೆ ಧಾರ್ಮಿಕವಾಗಿದೆ – ಮತ್ತು ಬಿಳಿಯರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ದಾಖಲಿಸಲಾಗಿದೆ – ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಮಂಗಳವಾರ ಬಿಡುಗಡೆ ಮಾಡಿದ 2021 ರ ಜನಗಣತಿಯ ಅಂಕಿಅಂಶಗಳು ಈ ವಿಷಯವನ್ನು ಜನರ ಮುಂದಿಟ್ಟಿದೆ.
2021 ರ ಜನಗಣತಿಯ ದಿನದಂದು ಇಂಗ್ಲೆಂಡ್ ಮತ್ತು ವೇಲ್ಸ್‌ನ ಸುಮಾರು 46.2% ಜನಸಂಖ್ಯೆಯಷ್ಟು ಜನರು ಮಾತ್ರ ತಮ್ಮನ್ನು ತಾವು ಕ್ರಿಶ್ಚಿಯನ್ ಎಂದು ಕರೆದುಕೊಂಡಿದ್ದಾರೆ. ಇದು ಒಂದು ದಶಕದ ಹಿಂದಿನ 59.3% ರಿಂದ ಬಹಳ ಇಳಿಕೆಯಾಗಿದೆ. ಮುಸ್ಲಿಂ ಜನಸಂಖ್ಯೆಯು ಜನಸಂಖ್ಯೆಯ 4.9% ರಿಂದ 6.5% ಕ್ಕೆ ಏರಿದ್ದು ಹಿಂದೂಗಳು ಶೇಖಡ 1.7% ರಷ್ಟಿದ್ದಾರೆ ಎಂದು ತಿಳಿದುಬಂದಿದೆ.
ಬ್ರಿಟನ್ ನಲ್ಲಿ ಸೆಕ್ಯುಲರಿಸಂ ಪ್ರಚಾರಕರು ಈ ಬದಲಾವಣೆಯು ಬ್ರಿಟಿಷ್ ಸಮಾಜದಲ್ಲಿ ಧರ್ಮವು ಬೇರೂರಿರುವ ರೀತಿಯಲ್ಲಿ ಮರುಚಿಂತನೆಯನ್ನು ಪ್ರಚೋದಿಸಬೇಕು ಎಂದು ಹೇಳಿದ್ದಾರೆ. U.K. ರಾಜ್ಯ-ಧನಸಹಾಯದ ಚರ್ಚ್ ಆಫ್ ಇಂಗ್ಲೆಂಡ್ ಶಾಲೆಗಳನ್ನು ಹೊಂದಿದೆ, ಆಂಗ್ಲಿಕನ್ ಬಿಷಪ್‌ಗಳು ಸಂಸತ್ತಿನ ಮೇಲಿನ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ರಾಜನು “ಧರ್ಮದ ರಕ್ಷಕ” ಮತ್ತು ಚರ್ಚ್‌ನ ಸರ್ವೋಚ್ಚ ಗವರ್ನರ್ ಎಂದೆಲ್ಲ ಇದೆ.
ಮಾನವತಾವಾದಿಗಳ U.K. ಚಾರಿಟಿಯ ಮುಖ್ಯ ಕಾರ್ಯನಿರ್ವಾಹಕ ಆಂಡ್ರ್ಯೂ ಕಾಪ್ಸನ್, “ಧರ್ಮೇತರರ ಅಚ್ಚರಿಯ ಬೆಳವಣಿಗೆಯು” U.K ಅನ್ನು ಖಂಡಿತವಾಗಿಯೂ ‘ವಿಶ್ವದ ಕನಿಷ್ಠ ಧಾರ್ಮಿಕ ರಾಷ್ಟ್ರಗಳಲ್ಲಿ ಒಂದು’ ಎನ್ನುವಂತೆ ಮಾಡಿದೆ ಎಂದಿದ್ದಾರೆ. ಮುಸ್ಲಿಮರ ಬೆಳವಣಿಗೆ ಇಂದ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚಾಗಿದೆ ಎಂದು ಇನ್ನು ಕೆಲವರು ಸುಳ್ಳು ಮಹಿತ್ಯನ್ನು ಈ ಸಂದರ್ಭದಲ್ಲಿ ಹಬ್ಬಿಸುತ್ತಿದ್ದಾರೆ.