ನವದೆಹಲಿ: ಕೇಂದ್ರದಲ್ಲಿ ಕಳೆದ ಒಂಬತ್ತೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ.ಸರ್ಕಾರ ಉದ್ಯಮಪತಿಗಳ ಪರವಾದ ಸರ್ಕಾರ ಎಂಬ ಆರೋಪ ಇತ್ತೀಚೆಗೆ ದೊಡ್ಡ ರೀತಿಯಲ್ಲಿ ಸುದ್ದಿ ಮಾಡುತ್ತಿದೆ.ಅದರೆ,ಈ ಆರೋಪ ರಾಜಕೀಯ ಪ್ರೇರಿತ ಎಂದು ಸರ್ಕಾರದ ಪ್ರತಿನಿಧಿಗಳು ತಳ್ಳಿ ಹಾಕುತ್ತಿದ್ದಾರೆ.
ಇದರ ನಡುವೆ ಲೋಕಸಭೆಯ ಕಲಾಪದಲ್ಲಿ ಸರ್ಕಾರವೇ ನೀಡಿರುವ ಉತ್ತರ ಪ್ರತಿಪಕ್ಷಗಳ ಆರೋಪ ಸುಳ್ಳಲ್ಲ ಹಾಗೂ ರಾಜಕೀಯ ಪ್ರೇರಿತವಲ್ಲ ಎಂದು ಸಾಬೀತು ಪಡಿಸಿದೆ.
ಬೆಳೆಹಾನಿ,ಕೋವಿಡ್ ಸೇರಿದಂತೆ ಹಲವು ಕಾರಣದಿಂದ ಸಂಕಷ್ಟದ ಸುಳಿಗೆ ಸಿಲುಕಿದ ಕೃಷಿಕ ಸಮುದಾಯ ಬೆಳೆ ಸಾಲ ಮನ್ನಾಕ್ಕೆ ಮಾಡಿದ ಮನವಿಗಳಿಗೆ ಮಾನ್ಯತೆ ನೀಡದ ಸರ್ಕಾರ ಚಕ್ರಬಡ್ಡಿ ಸಮೇತ ಬೆಳೆ ಸಾಲ ವಸೂಲಿ ಮಾಡಿದೆ.ಈ ಸಾಲ ತೀರಿಸಲು ಸಾಧ್ಯವಾಗದ ಅನೇಕ ಅನ್ನದಾತರು ಪ್ರಾಣ ಕಳೆದುಕೊಂಡ ದಾರುಣ ನಿದರ್ಶನ ನಮ್ಮ ಕಣ್ಣ ಮುಂದಿದೆ.
ಇಂತಹ ವಿದ್ಯಮಾನಗಳ ನಡುವೆ ಕತಿಳಿಸಿದ್ದಾರೆ. ಬರೋಬ್ಬರಿ 10.6 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ ಅದು ಯಾರಿಗೆ ಸೇರಿದ್ದು ಎಂದರೆ ಎಲ್ಲಾ ಉದ್ಯಮಿಪತಿಗಳದ್ದು ಅದು ಯಾವ ಅವಧಿಯದ್ದು ಗೊತ್ತಾ..
ಕೇವಲ ಕಳೆದ ಐದು ವರ್ಷಗಳ ಕಾಲಾವಧಿಯಲ್ಲಿ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು 10.6 ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಿವೆ ಈ ಮಾಹಿತಿಯನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಅವರು ಲೋಕಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಸಣ್ಣ ಮತ್ತು ದೊಡ್ಡ ಉದ್ಯಮಗಳನ್ನು ಹೊಂದಿರುವ ಸುಮಾರು 2,300 ವಾಣಿಜ್ಯೋದ್ಯಮಿಗಳು ಮಾಡಿರುವ ಕನಿಷ್ಠ 5 ಕೋಟಿ ರೂಪಾಯಿಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದು, ಅದನ್ನು ಮನ್ನಾ ಮಾಡಲಾಗಿದೆ.
ಅದೂ ಕೂಡ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಆಧರಿಸಿ ಅನುಮೋದಿತ ಬ್ಯಾಂಕ್ ಬೋರ್ಡ್ ನೀತಿಗಳಿಗೆ ಅನುಗುಣವಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ವಸೂಲಾಗದ ಸಾಲ ಎಂಬ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.ಆದರೆ ಈ ಸಾಲಗಾರರು ಯಾರು ಎಂಬ ಹೆಸರುಗಳ ಪಟ್ಟಿಯನ್ನು ಅವರು ನೀಡಿಲ್ಲ.
2 ಪ್ರತಿಕ್ರಿಯೆಗಳು
электрический карниз https://provorota.su/ .
¡Hola aventureros de la fortuna !
Una oferta exclusiva para jugadores de EspaГ±a.
Puedes comenzar a girar desde tu mГіvil o tableta sin problemas https://25girosgratissindeposito.xyz con solo registrarte.
¡Que tengas magníficas ganancias sorprendentes !