ಬೆಂಗಳೂರು,ಸೆ.2-ದುಬಾರಿ ಬೆಲೆಯ ಕಾರು
ಗಳನ್ನು ಕಳವು ಅವುಗಳಿಗೆ ಹೊಸ ರೂಪ ಕೊಟ್ಟು ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಖದೀಮರನ್ನು ಭರ್ಜರಿ ಬೇಟೆಯಾಡಿ ಬಂಧಿಸಿರುವ ಅಶೋಕನಗರ ಪೊಲೀಸರು 1.5 ಕೋಟಿ ಮೌಲ್ಯದ ಕಾರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೌಲಾ ಅಲಿಯಾಸ್ ಅಯಾಜ್ ಹಾಗೂ ಮಥಿನುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರು ತಿಳಿಸಿದ್ದಾರೆ.
ಬಂಧಿತರಿಂದ 1.5 ಕೋಟಿ ಮೌಲ್ಯದ 5 ಕ್ರೆಟಾ, 2 ಇನ್ನೋವಾ, ಬ್ಯಾಲೆನೋ , ವೋಕ್ಸ್ ವ್ಯಾಗನ್ ಸೇರಿ 9 ದುಬಾರಿ ಬೆಲೆಯ ಕಾರುಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
ಆರೋಪಿಗಳು ಛತ್ತೀಸ್‌ಘಡ್, ದೆಹಲಿ, ಮುಂಬೈ ಸೇರಿದಂತೆ ನಾನಾ ಭಾಗದಿಂದ ಕಾರನ್ನು ಕಳ್ಳತನ ಮಾಡಿ ಬೆಂಗಳೂರಿಗೆ ತರುತ್ತಿದ್ದರು.
ಬಳಿಕ ಕದ್ದ ಕಾರಿನ ಚಾರ್ಸಿ ನಂಬರ್ ಟ್ಯಾಂಪರಿಂಗ್ ಮಾಡಿ ಹೊಸ ರೂಪ ಕೊಟ್ಟು ರಿಜಿಸ್ಟ್ರೇಷನ್ ಮಾಡಿಸಿ ಸೆಕೆಂಡ್ ಹ್ಯಾಡ್ ಕಾರು ಎಂದು ನಂಬಿಸಿ ಮಾರಾಟ ಮಾಡುತ್ತಿದ್ದರು
ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 1.5 ಕೋಟಿ ರೂ ಬೆಲೆ ಬಾಳುವ 9 ಕಾರುಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.
Previous Articleಇದು ಶ್ರೀಗಂಧ ಕಳ್ಳರ ಗ್ಯಾಂಗ್
Next Article ಪಿ ಸಾಯಿನಾಥ್ ರಿಂದ ಮುರುಘಾ ಪ್ರಶಸ್ತಿ ವಾಪಸ್