ಬೆಂಗಳೂರು,ಸೆ.1-ಶ್ರೀಗಂಧ ಮರಗಳನ್ನು ಸದ್ದಿಲ್ಲದೇ ಕ್ಷಣಾರ್ಧದಲ್ಲಿ ಕಳವು ಮಾಡ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿರುವ ಹೈಗ್ರೌಂಡ್ಸ್ ಪೊಲೀಸರು 3 ಕೋಟಿಗೂ ಅಧಿಕ ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ.
ಗ್ಯಾಂಗ್ ನಲ್ಲಿದ್ದ ತಮಿಳುನಾಡಿನ ತಿರುಪತ್ತೂರು ಮೂಲದ ಗೋವಿಂದಸ್ವಾಮಿ, ಮಾಧು, ವೆಂಕಟೇಶ, ರಾಮಚಂದ್ರ,ವಾಸಿಂ ಬೇಗ್, ರಾಮಚಂದ್ರಪ್ಪ, ನಂಜೇಗೌಡ, ವರದರಾಜು ಬಂಧಿತ ಗ್ಯಾಂಗ್ ನ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 3 ಕೋಟಿ ಮೌಲ್ಯದ 147 ಕೆಜಿ ಗಂಧದ ಎಣ್ಣೆ, 730 ಕೆಜಿ ಗಂಧದ ಮರದ ತುಂಡು ಚೆಕ್ಕೆಗಳನ್ನು ವಶಕ್ಕೆ ಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಾಲ್ಕು ವರ್ಷಗಳಿಂದ ಗ್ಯಾಂಗ್ ನ ಖದೀಮರು ಬೆಂಗಳೂರು ಸದಾಶಿವನಗರ, ಕೆ ಆರ್ ಪುರ,ಜಯನಗರ ,ಆನೇಕಲ್ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದು,ಒಂದು ಸಿಗರೇಟ್ ಸೇದುವಷ್ಟರಲ್ಲಿ ಮಚ್ಚಿನಿಂದ ಒಂದು ಮರವನ್ನು ಕಡಿಯುತ್ತಿದ್ದರು ಎಂದರು.
ಹೈ ಗ್ರೌಂಡ್ಸ್ ನ ಗಾಲ್ಫ್ ಕ್ಲಬ್ ನಲ್ಲಿ ಗಂಧದ ಮರದ ಕಡಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಂಡ ಪೊಲೀಸರು ಖಚಿತವಾದ ಮಾಹಿತಿಯನ್ನು ಆಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವು ಮಾಡಿದ ಶ್ರೀಗಂಧ ಮರದ ತುಂಡುಗಳನ್ನು ತುಮಕೂರು ಗಡಿಭಾಗದಲ್ಲಿ ಮಿಲ್ ನಲ್ಲಿ ಆಯಿಲ್ ಆಗಿ ಪರಿವರ್ತನೆ ಮಾಡುತ್ತಿದ್ದರು.ಕಳ್ಳತನಕ್ಕೂ ಮುನ್ನ ಆರೋಪಿಗಳು ಶ್ರೀಗಂಧ ಮರಗಳು ಇರುವ ಸ್ಥಳಗಳ ಗುರುತು ಮಾಡುತ್ತಿದ್ದ ಗ್ಯಾಂಗ್ ಮೂರು ತಂಡಗಳಾಗಿ ವಿಭಾಗಗೊಂಡು ಕಳ್ಳತನ ಮಾಡುತ್ತಿದ್ದರು ಎಂದರು.
Previous Articleರಾಯಭಾರಿಯಾದ ಕಿಚ್ಚ ಸುದೀಪ್
Next Article Luxury car ಗಳನ್ನು ಕದಿಯುತ್ತಿದ್ದ ಕಳ್ಳರು