ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹಿರಿಯ ಐಪಿಎಸ್ ಡಿ.ರೂಪಾ ಮೌದ್ಗೀಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದಶಿಗೆ ದೂರು ಸಲ್ಲಿಸಲಾಗಿದೆ.
ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ದೂರು ನೀಡಿದ್ದು, ವ್ಯವಸ್ಥಾಪಕ ನಿರ್ದೇಶಕರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪಕ್ಷಪಾತವೆಸಗಿದ್ದಾರೆಂದು ಆರೋಪಿಸಲಾಗಿದೆ. ಐದು ಲಕ್ಷಕ್ಕೂ ಮೇಲ್ಪಟ್ಟ ಟೆಂಡರ್ ನೀಡಬೇಕಾದರೆ ನಿಗಮದ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರಬೇಕು ಎಂಬ ನಿಯಮ ಇದ್ದರೂ ಇದನ್ನು ಪಾಲಿಸದೆ ಒಬ್ಬರೇ ತೀರ್ಮಾನ ಕೈಗೊಂಡು ಆರು ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿದ್ದಾರೆ ಎಂದು ಅರೋಪಿಸಿ ಆರು ಪುಟಗಳ ದೂರು ಸಲ್ಲಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಿ.ರೂಪಾ ಅವರಿಗೆ 76ಕ್ಕೂ ಹೆಚ್ಚು ನೋಟಿಸ್ ನೀಡಿದ್ದರೂ ಯಾವುದಕ್ಕೂ ಉತ್ತರ ನೀಡಿಲ್ಲ. ವಾರದಲ್ಲಿ ಕೇವಲ ಎರಡು ದಿನ ಮಾತ್ರ ಕಚೇರಿಗೆ ಬರುತ್ತಿದ್ದು, ಕಚೇರಿ ಕಡತಗಳನ್ನು ಮನೆಗೆ ತರಿಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.
ಹೈದಾರಾಬಾದ್ ಹೊಸದಾಗಿ ಆರಂಭಿಸಲಾದ ಶೋರೂಂಗೆ ಮಾಡಿದ ವೆಚ್ಚ, ಹಂಪಿಗೆ ಕೇಂದ್ರ ಸರ್ಕಾರದಿಂದ ಬಂದ ಅನುದಾನದ ಬಗ್ಗೆ ನಿಗಮದ ಗಮನಕ್ಕೆ ತಾರದೆ ಟೆಂಡರ್ ನೀಡಿರುವುದು ಸೇರಿದಂತೆ ಸುಮಾರು 19 ಪ್ರಕರಣಗಳನ್ನು ದೂರಿನಲ್ಲಿ ಉಲ್ಲೇಖಿಸಿರುವ ರಾಘವೇಂದ್ರ ಶೆಟ್ಟಿ, ಸುಮಾರು 6 ಕೋಟಿ ರೂ .ನಷ್ಟು ಭ್ರಷ್ಟಾಚಾರ ನಡೆದಿರಬಹುದು. ಈ ಬಗ್ಗೆ ಕಡತ ಕೇಳಿದರೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022
