ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ದೇಶದ ಪ್ರಮುಖ ರಾಷ್ಟೀಯ ದಿನವಾದ ಬೆಸ್ತಿಲ್ ಡೇ ಗೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ನರೇಂದ್ರ ಮೋದಿಯವರು ಆಹ್ವಾನವನ್ನು ಸ್ವೀಕರಿಸಿ ಫ್ರಾನ್ಸ್ ದೇಶಕ್ಕೆ ತೆರಳಿ ಅಲ್ಲಿ ಆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಫ್ರಾನ್ಸ್ ಮತ್ತು ಭಾರತದ ಉತ್ತಮ ಸಂಬಂಧದ ಬಗ್ಗೆ ಪುನರುಚ್ಚರಿಸಿದರು. ಫ್ರಾನ್ಸ್ ನಲ್ಲಿ ಬೆಸ್ತಿಲ್ ಡೇ ಅನ್ನು ದೇಶದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಂಭ್ರಮಿಸುವ ದಿನವನ್ನಾಗಿ ಆಚರಿಸಲಾಗುತ್ತದೆ ಮಾತ್ರವಲ್ಲದೆ ದೇಶದಲ್ಲಿದ್ದ ಪೌರಾಣಿಕ ಮೌಲ್ಯಗಳನ್ನು ಧಿಕ್ಕರಿಸಿ ಆಧುನಿಕ ಮಾನವೀಯ ಮೌಲ್ಯಗಳನ್ನು ಜನ ಸ್ವೀಕರಿಸಿದ ದಿನವನ್ನಾಗಿಯೂ ಕೂಡ ಈ ದಿನವನ್ನು ಆಚರಿಸಲಾಗುತ್ತದೆ.
ಆದರೆ ಬಲಪಂಥೀಯ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಮೋದಿಯವರು ಇಂಥಾ ವಿಶೇಷ ದಿನದ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದು ದುರದೃಷ್ಟಕರ ಎಂದು ಫ್ರಾನ್ಸ್ ದೇಶದ ಅನೇಕ ರಾಜಕೀಯ ನಾಯಕರುಗಳು ಮತ್ತು ಬುದ್ದಿಜೀವಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗೇ ಅನೇಕರು ಮೋದಿಯವರನ್ನು ಆಹ್ವಾನಿಸಿದಕ್ಕಾಗಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದೆ. ಪತ್ರಿಕಾ ಸ್ವಾತಂತ್ರ್ಯ ದಮನವಾಗುತ್ತಿದೆ. ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ ಇಂಥಾ ದೇಶದ ಪ್ರಧಾನಿಯವರನ್ನು ಬೆಸ್ತಿಲ್ ಡೇ ಅಂಥ ಮಹತ್ವಪೂರ್ಣ ದಿನಕ್ಕೆ ಅತಿಥಿಯಾಗಿ ಕರೆಯಬಾರದಾಗಿತ್ತು ಎಂದು ಅನೇಕ ಕಡೆಗಳಿಂದ ಅಧ್ಯಕ್ಷರ ವಿರುದ್ಧ ಟೀಕೆ ವ್ಯಕ್ತವಾಗಿದೆ. ಈ ವಿಷಯ ವಿಶ್ವದ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗಿದೆ.
1 ಟಿಪ್ಪಣಿ
Мультимедийный интегратор Мультимедийный интегратор .