ಮೈಕ್ರೋಸಾಫ್ಟ್ ಅಧಿಕೃತವಾಗಿ ತನ್ನ ವೆಬ್ಬ್ರೌಸರ್ ಆಗಿರುವ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನ್ನು ಬಂದ್ ಮಾಡಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ತನ್ನ ಸೇವೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ.
ಹೀಗಾಗಿ ಈ ಅಪ್ಲಿಕೇಶನ್‌ನ್ನು ಓಪನ್ ಮಾಡಲು ಮುಂದಾಗುವವರಿಗೆ ಕಂಪನಿಯು ಮೈಕ್ರೋಸಾಫ್ಟ್ ಎಡ್ಜ್ ಬಳಕೆ ಮಾಡುವಂತೆ ನಿರ್ದೇಶನ ನೀಡುತ್ತಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ 1995ರಲ್ಲಿ ವಿಂಡೋಸ್ 95ಗೆ ಆಡ್ ಆನ್ ಪ್ಯಾಕೇಜ್ ಆಗಿ ಆರಂಭಿಸಲಾಗಿತ್ತು.