ಇದೀಗ ಇದು ಹೆಚ್ಚಿನ ಚರ್ಚೆಯಲ್ಲಿರುವ ಸಂಗತಿ..ಸಾಫ್ಟವೇರ್ ವಲಯದಲ್ಲಿ ಇದು ವ್ಯಾಪಕ ಚರ್ಚೆಯಲ್ಲಿದೆ. ಇದರ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ.
* ಒಬ್ಬನೇ ಉದ್ಯೋಗಿಯು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಲು ಅವಕಾಶವಿಲ್ಲ. ಹೀಗೆ ಮಾಡಿರುವುದು ಬೆಳಕಿಗೆ ಬಂದರೆ ಅಂಥ ಉದ್ಯೋಗಿಯನ್ನು ವಜಾ ಮಾಡಬಹುದು ಎಂದು ದೇಶದ ಪ್ರಮುಖ ಐಟಿ ಕಂಪನಿ ಇನ್ಫೊಸಿಸ್ ಹೇಳಿದೆ.
* ವಿಪ್ರೋ (Wipro) ಅಧ್ಯಕ್ಷ ರಿಶದ್ ಪ್ರೇಮ್ಜಿ (Rishd Premji) ಅವರು ‘ಮೂನ್ಲೈಟ್ ಎನ್ನುವುದು ಮೋಸ’ ಎಂದಿದ್ದಾರೆ.
* ಇದರ ಬೆನ್ನಲ್ಲೇ ಮೋಹನ್ದಾಸ್ ಪೈ ‘ಮೂನ್ಲೈಟ್ ಮಾಡುವುದನ್ನು ಮೋಸ ಎಂದು ಕರೆಯುವುದು ಸರಿಯಲ್ಲ. ಯಾವುದೇ ಉದ್ಯೋಗಿಯು ದಿನದ ಒಂದು ನಿರ್ದಿಷ್ಟ ಅವಧಿಯಲ್ಲಿ ಕೆಲಸ ಮಾಡಲು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ಈ ಅವಧಿಯ ನಂತರ ಏನು ಮಾಡುತ್ತಾರೆ ಎನ್ನುವುದು ಅವರ ಅವರಿಗೆ ಬಿಟ್ಟ ವಿಷಯ’ ಎಂದು ಹೇಳುತ್ತಾರೆ
*ಕೆಲಸದ ಅವಧಿ ಮುಗಿದ ನಂತರ ಉದ್ಯೋಗಿ ಏನು ಮಾಡುತ್ತಾನೆ ಎನ್ನುವುದನ್ನು ಕಟ್ಟಿಕೊಂಡು ಕಂಪನಿಗಳಿಗೆ ಏನಾಗಬೇಕು’ ಎನ್ನುವುದು ಐಟಿ ಉದ್ಯೋಗಿಗಳ ವಾದವಾಗಿದೆ.
* ಒಬ್ಬ ಉದ್ಯೋಗಿಯು ಕಾರ್ಮಿಕ ಕಾನೂನುಗಳಂತೆ ದಿನಕ್ಕೆ 8 ತಾಸು ಕೆಲಸ ಮಾಡಬೇಕು. ಆದರೆ ಟಾರ್ಗೆಟ್ ಅಥವಾ ಇತರ ಕಾರಣಗಳನ್ನು ಪರೋಕ್ಷವಾಗಿ ಮುಂದಿಟ್ಟು ಅವರನ್ನು 10 ಗಂಟೆಗೂ ಹೆಚ್ಚು ಕಾಲ ದುಡಿಸಲಾಗುತ್ತಿದೆ. ಇದು ಸರಿಯೇ’ ಎಂದು ಇವರು ವಾದ ಆರಂಭಿಸಿದ್ದಾರೆ.
* ಆದರೆ ಇದಕ್ಕೆ ವ್ಯತಿರಿಕ್ತವಾಗಿ ಐಟಿ ಉದ್ಯಮಿಗಳು ದಿನದಲ್ಲಿ 8ರಿಂದ 10 ತಾಸು ದುಡಿದ ಉದ್ಯೋಗಿಯು ನಂತರ ಕುಟುಂಬದೊಂದಿಗೆ ಕಾಲ ಕಳೆಯಬೇಕು, ವಿಶ್ರಾಂತಿ ಪಡೆಯಬೇಕು. ಆಗ ಮಾತ್ರ ಅವನು ಮತ್ತೊಂದು ದಿನದ ಕೆಲಸಕ್ಕೆ ಸಿದ್ಧನಾಗಲು ಸಾಧ್ಯ. ಇಲ್ಲದಿದ್ದರೆ ಮಾರನೇ ದಿನದ ಉತ್ಪಾದಕತೆಯ ಮೇಲೆ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಮೂನ್ಲೈಟ್ ಸಹಿಸಲು ಆಗುವುದಿಲ್ಲ ಎಂದು ವಾದಿಸುತ್ತಾರೆ.
* ಕಾರ್ಮಿಕ ಕಾನೂನು ಎನು ಹೇಳುತ್ತದೆ ಎಂದರೆ.
ನಿರ್ದಿಷ್ಟ ಕಂಪನಿಯು ಕೆಲಸವನ್ನು ಕೊಡುವಾಗ ಉದ್ಯೋಗಿಗಳೊಂದಿಗೆ ಮಾಡಿಕೊಳ್ಳುವ ಒಪ್ಪಂದ ಪತ್ರದಲ್ಲಿರುವ ಷರತ್ತುಗಳು ಉದ್ಯೋಗಿಗಳಿಗೆ ಅನ್ವಯವಾಗುತ್ತದೆ. ಅದರಲ್ಲಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಅವಕಾಶವಿಲ್ಲ ಎಂಬ ಷರತ್ತು ಇದ್ದು, ಉದ್ಯೋಗಿ ಅದಕ್ಕೆ ಒಪ್ಪಿಕೊಂಡು ಕೆಲಸಕ್ಕೆ ಸೇರಿದ ನಂತರ ಮೂನ್ಲೈಟ್ ಮಾಡಿದರೆ ಅದು ಅಕ್ರಮ ಎನಿಸಿಕೊಳ್ಳುತ್ತದೆ.
* ಹಾಗಾದರೆ ಈ ಮೂನ್ ಲೈಟ್ ಅಂದರೆ ಏನು ಇದು ಏಕಾಎಕಿ ಉದ್ಬವಿಸಿತಾ..ಅನ್ನೋದು ಪ್ರಶ್ನೆ.
*ಐಟಿ ಉದ್ಯಮದ ಉದ್ಯೋಗಿಯೊಬ್ಬ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಭಾರತದಲ್ಲಿ ಮೂನ್ಲೈಟ್ ಬಗ್ಗೆ ಇದೀಗ ಚರ್ಚೆ ಆರಂಭವಾಗಿದೆ. ಆದರೆ ಇದು ಮೊದಲಿನಿಂದಲೂ ಚಾಲ್ತಿಯಲ್ಲಿದ್ದ ಕ್ರಮವೇ ಆಗಿದೆ. ಅಕ್ರಮ-ಸಕ್ರಮ ಎಂಬ ಚರ್ಚೆಯೂ ಬಹುಕಾಲದಿಂದ ಚಾಲ್ತಿಯಲ್ಲಿತ್ತು
*ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವುದು ಹೀಗೆ ಹಲವು ರೀತಿಯಲ್ಲಿ ಮೂನ್ಲೈಟ್ ಭಾರತೀಯ ಸಮಾಜದಲ್ಲಿ ಮೊದಲಿನಿಂದಲೂ ಅಸ್ತಿತ್ವದಲ್ಲಿತ್ತು.
* ಈಗಿರುವ ಕೆಲಸದಿಂದ ತನಗೆ ಬೇಕಿರುವಷ್ಟು ಸಂಪಾದನೆ ಸಾಧ್ಯವಾಗುತ್ತಿಲ್ಲ ಎಂದಾಗ ಬಿಡುವಿನ ಅವಧಿಯಲ್ಲಿ ಮತ್ತೊಂದು ಕೆಲಸ ಮಾಡಿ ಸಂಪಾದನೆ ಹೆಚ್ಚಿಸಿಕೊಂಡರೆ ತಪ್ಪೇನು? ಲಂಚ ಪಡೆಯುವುದು ಅಥವಾ ಭಿಕ್ಷೆ ಬೇಡುವುದಕ್ಕಿಂತಲೂ ಇದು ಒಳ್ಳೆಯದಲ್ಲವೇ? ಎಷ್ಟು ಕಂಪನಿಗಳು ನಿಗದಿತ ಅವಧಿಗಿಂತಲೂ ಹೆಚ್ಚು ದುಡಿಸಿಕೊಂಡಿದ್ದಕ್ಕೆ ಇನ್ಸೆನ್ಟೀವ್ ಕೊಡುತ್ತಿವೆ’
ಇಷ್ಟೆಲ್ಲದರ ನಡುವೆ ಇಲ್ಲಿರುವುದು ನೈತಿಕತೆಯ ಪ್ರಶ್ನೆ.ತಾನು ಮೂಲದಲ್ಲಿ ಕೆಲಸ ಮಾಡುವ ಸಂಸ್ಥೆಯ ಹಿತಾಸಕ್ತಿ ಕಾಪಾಡುತ್ತಲೆ ಮತ್ತೊಂದು ಕೆಲಸದಲ್ಲಿ ಹೇಗೆ ನ್ಯಾಯ ಸಲ್ಲಿಸಬಹುದು ಎನ್ನುವುದಾಗಿದೆ