ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಸಮೂಹ ಸಾರಿಗೆ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ.ಈ ನಿಟ್ಟಿನಲ್ಲಿ ಮೆಟ್ರೋ ಬಹು ಜನಪ್ರಿಯ ಸಾರಿಗೆ ಮಾಧ್ಯಮವಾಗಿದೆ. ಆದರೆ ಕೊನೆಯ ಹಂತದ ಪ್ರಯಾಣಿಕರಿಗೆ ಮೆಟ್ರೊ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ.
ಈ ನಿಟ್ಟಿನಲ್ಲಿ ಕೊನೆಯ ಹಂತದ ಪ್ರಯಾಣಿಕರಿಗೂ ಮೆಟ್ರೋ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗಗಳನ್ನು ನವೆಂಬರ್ 27 ರಿಂದ ಪರಿಚಯಿಸಲಿದೆ.
ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ನಾಲ್ಕು ನೂತನ ಮೆಟ್ರೋ ಪೀಡರ್ ಮಾರ್ಗಗಳಲ್ಲಿ 7 ಬಸ್ಸುಗಳ ಸೌಲಭ್ಯ ಕಲ್ಪಿಸಲಿದೆ.ಈ ಮೂಲಕ ಕೊನೆಯ ಹಂತದ ಪ್ರಯಾಣಿಕ ಮೆಟ್ರೋ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡುತ್ತದೆ.
ಮೆಟ್ರೋ ಫೀಡರ್-18 ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಲಾಲ್‌ಬಾಗ್ ಮುಖ್ಯ ರಸ್ತೆ, ಮಹಿಳಾ ಸೇವಾ ಸಮಾಜ, ಕೆ.ಆರ್.ಮಾರುಕಟ್ಟೆ, ಕಾರ್ಪೋರೇಷನ್ ಮೂಲಕ ಶಾಂತಿನಗರ ಟಿಟಿಎಂಸಿಗೆ ಮರಳಲಿದೆ. ಹಾಗೆಯೇ
ಮೆಟ್ರೋ ಫೀಡರ್-18 ಎ ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಪೂರ್ಣಿಮಾ ಚಿತ್ರಮಂದಿರ, ಕೆ.ಆರ್.ಮಾರುಕಟ್ಟೆ, ಮಹಿಳಾ ಸೇವಾ ಸಮಾಜ, ಲಾಲ್‌ಬಾಗ್ ಮುಖ್ಯ ರಸ್ತೆ ಮೂಲಕ ಶಾಂತಿನಗರ ಟಿಟಿಎಂಸಿ ಬಂದು ಸೇರಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಮೆಟ್ರೋ ಫೀಡರ್-1ಎಫ್ ಬಸ್ ಗಳು ಎಸ್.ವಿ ಮೆಟ್ರೋ ನಿಲ್ದಾಣದಿಂದ ಹೊರಟು, ಬಿ.ಇ.ಎಂ.ಎಲ್ ಗೇಟ್, ಮಲ್ಲೇಶ್ ಪಾಳ್ಯ, ಬಸವನಗರ, ರಮೇಶ್ ನಗರ ತಲುಪಲಿವೆ.
ಮೆಟ್ರೋ ಫೀಡರ್-13 ಬಸ್ ಗಳು ವಿಜಯನಗರ ಮೆಟ್ರೊ ನಿಲ್ದಾಣದಿಂದ ಹೊರಟು, ವಿಜಯನಗರ ಮೆಟ್ರೋ ನಿಲ್ದಾಣ, ಬಸವೇಶ್ವರ ನಗರ ಬಸ್ ನಿಲ್ದಾಣ, ಕಮಲನಗರ ಮಾರ್ಕೆಟ್, ಶಂಕರ್ ನಾಗ್ ಬಸ್ ನಿಲ್ದಾಣ ತಲುಪಲಿವೆ. ಈ ಮಾರ್ಗಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಬಸ್ ಸೌಲಭ್ಯವಿರಲಿದೆ.
ಮಾರ್ಗಗಳ ವೇಳಾಪಟ್ಟಿ ವಿವರ
ಮಾರ್ಗ ಸಂಖ್ಯೆ: ಎಂಎಫ್-18ಶಾಂತಿನಗರ ಬಸ್ ನಿಲ್ದಾಣ ಬಿಡುವ ವೇಳೆ6:20, 6:50, 7:25, 08:05, 08:40, 09:25, 10:30, 11:15, 12:00, 12:35, 13:10, 13:45, 14:20, 15:00, 15:35, 16:45, 17:25, 18:10, 18:55, 19:40, 20:25, 21:05ಮಾರ್ಗ ಸಂಖ್ಯೆ: ಎಂಎಫ್-18ಎಶಾಂತಿನಗರ ಬಸ್ ನಿಲ್ದಾಣ ಬಿಡುವ ವೇಳೆ6:35, 7:10, 7:45, 8:25, 9:00, 9:45, 10:55, 11:40, 12:20, 12:55, 13:30, 14:05, 14:45, 15:50, 16:30, 17:45, 18:30, 19:15, 20:00, 20:40
ಮಾರ್ಗ ಸಂಖ್ಯೆ: ಎಂಎಫ್-1ಎಫ್
ಬಿಡುವ ವೇಳೆಎಸ್.ವಿ ಮೆಟ್ರೊ ನಿಲ್ದಾಣ ರಮೇಶ್ ನಗರ5:55, 6:10, 6:30, 6:55, 7:20, 7:40, 8:05, 08:25, 8:45, 09:10, 09:35, 09:55, 10:20, 11:10, 11:30, 11:55, 12:20, 12:40, 13:30, 13:50, 14:10, 14:40, 15:00, 15:25, 15:45, 16:05, 16:30, 17:20, 17:40, 18:05, 18:30, 18:50, 19:15, 19:40, 20:00, 20:25, 22:00 5:30, 6:25, 6:45, 07:05, 07:30, 7:55, 8:15, 8:40, 9:00, 9:20, 9:45, 10:15, 10:45, 11:20, 11:45, 12:05, 12:30, 12:55, 13:15, 14:05, 14:25, 14:50, 15:15, 15:35, 16:00, 16:30, 17:05, 17:30, 17:55, 18:15, 18:40, 19:05, 19:25, 19:50, 20:20, 20:40, 21:05
ಮಾರ್ಗ ಸಂಖ್ಯೆ: ಎಂಎಫ್-13
ಬಿಡುವ ವೇಳೆವಿಜಯನಗರ ಮೆಟ್ರೊ ನಿಲ್ದಾಣ ಶಂಕರ್ ನಾಗ್ ಬಸ್ ನಿಲ್ದಾಣ08:15, 08:40, 09:05, 09:30, 09:55, 10:20, 11:10, 11:35, 12:25, 12:50, 13:15, 13:40, 14:05, 14:30, 15:20, 15:45, 16:35, 17:00, 17:25, 17:50, 18:15, 18:40 08:40, 09:05, 09:30, 09:55, 10:45, 11:10, 11:35, 12:00, 12:50, 13:15, 13:40, 14:05, 14:55, 15:20, 16:10, 16:35, 17:00, 17:25, 17:50, 18:15, 18:40, 19:05


3 ಪ್ರತಿಕ್ರಿಯೆಗಳು
Muuta pienet panokset isoiksi voitoiksi Betanolla. Nappaa €500 tervetuliaisbonus https://betanogame.org/fi/ ja nauti suurimmasta pelivalikoimasta verkossa. Live-kasino ja urheiluvedonlyönti samassa sovelluksessa.
Entre no Mostbet e aproveite um comeГ§o de jogador VIP – https://mostbetpt.pro/ , Descubra o Mostbet: bГґnus de 125% + 250 rodadas grГЎtis para novos jogadores .
paprasti pyragu receptai https://pyragaireceptai.lt