ನವದೆಹಲಿ-
‘ಕೆಲವು ಶಕ್ತಿಗಳು ದೇಶವನ್ನು ಒಡೆಯಲು ಹಲವು ಕಾರಣಗಳನ್ನು ಹುಡುಕುತ್ತಿವೆ. ನಾನಾ ವಿಷಯಗಳನ್ನು ಹೊರ ತೆಗೆಯುವ ಮೂಲಕ ಭಾರತ ಮಾತೆಯ ಮಕ್ಕಳ ನಡುವಿನಲ್ಲಿ ಬಿರುಕು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ. NCC ರ್ಯಾಲಿಯಲ್ಲಿ ಮಾತನಾಡಿದ ಅವರು
‘BBC ಸಾಕ್ಷ್ಯಚಿತ್ರದಂತೆ ಒಂದಲ್ಲ ಒಂದು ನೆಪ ಹುಡುಕಲಾಗುತ್ತಿದೆ. ಆದರೆ ಅಂತಹ ಪ್ರಯತ್ನಗಳ ಹೊರತಾಗಿಯೂ, ಭಾರತದ ಜನರಲ್ಲಿ ಎಂದಿಗೂ ಬಿರುಕು ಉಂಟಾಗುವುದಿಲ್ಲ’ ಎಂದು ಗುಡುಗಿದರು. ‘ಭಾರತಕ್ಕೆ ಸಾಮರ್ಥ್ಯವಿದೆ ಮತ್ತು ಭಾರತಕ್ಕೆ ಭವ್ಯತೆಯನ್ನು ನೀಡಲು ಇದು ಏಕೈಕ ಮಾರ್ಗವಾಗಿದೆ. ನಾವು ಹಾಗೆಯೇ ಬದುಕಬೇಕು. ಆ ದಾರಿಯಲ್ಲಿ ಬರುವ ಅಡೆತಡೆಗಳನ್ನು ಎದುರಿಸಬೇಕು. ಮತ್ತು ದೇಶಕ್ಕಾಗಿ ಬದುಕುವ ಮೂಲಕ ಸಮೃದ್ಧ ಭಾರತವನ್ನು ನಮ್ಮ ಕಣ್ಣ ಮುಂದೆ ಕಾಣಬೇಕು. ಯುವಜನತೆ ನಮ್ಮ ಪಡೆಗಳು, ನಮ್ಮ ಭದ್ರತಾ ಪಡೆಗಳನ್ನು ಸೇರಲು ಬಯಸುತ್ತಾರೆ’ ಎಂದು ಹೇಳಿದರು.
‘NCC ಯಲ್ಲೂ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕಳೆದ ದಶಕದಿಂದ, NCC ಯಲ್ಲಿ ಹುಡುಗಿಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಪರೇಡ್ ಕೂಡ ಹೆಣ್ಣುಮಗಳ ನೇತೃತ್ವದಲ್ಲಿ ನಡೆಯಿತು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪುಣೆಯ NDA ನಲ್ಲಿ ಮಹಿಳಾ ಕೆಡೆಟ್‍ಗಳ ಮೊದಲ ಬ್ಯಾಚ್‍ನ ತರಬೇತಿ ಪ್ರಾರಂಭವಾಗಿದೆ. ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೂ ನಮ್ಮ ಸರ್ಕಾರ ಅನುಮತಿ ನೀಡಿದೆ. ಇಂದು ಸೈನಿಕ ಶಾಲೆಗಳಲ್ಲಿ ಸುಮಾರು 1500 ವಿದ್ಯಾರ್ಥಿನಿಯರು ಕಲಿಯಲು ಆರಂಭಿಸಿರುವುದು ನನಗೆ ಸಂತಸ ತಂದಿದೆ’ ಎಂದು ಹೇಳಿದರು.
3 ಪ್ರತಿಕ್ರಿಯೆಗಳು
Интеграция мультимедийных систем Интеграция мультимедийных систем .
гадать онлайн бесплатно индийский пасьянс indiyskiy-pasyans-online.ru .
принудительный вывод из запоя ростов https://vyvod-iz-zapoya-rostov111.ru/ .