Facebook Twitter Instagram
    Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Criminal ಗಳ ಮೇಲೆ ಕಣ್ಣು- ದೇಶದ ಹಲವೆಡೆ NIA ದಾಳಿ
    ರಾಷ್ಟ್ರೀಯ

    Criminal ಗಳ ಮೇಲೆ ಕಣ್ಣು- ದೇಶದ ಹಲವೆಡೆ NIA ದಾಳಿ

    vartha chakraBy vartha chakraಫೆಬ್ರವರಿ 21, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ನವದೆಹಲಿ,ಫೆ.21-

    ಭಯೋತ್ಪಾದನೆ ಚಟುವಟಿಕೆ ಹಾಗೂ ಗೂಂಡಾಗಿರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

    ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ, ಛಂಡೀಗಢ ಮತ್ತು ಮಧ್ಯಪ್ರದೇಶಗಳಲ್ಲಿ ಗೂಂಡಾಗಿರಿ, ದರೋಡೆಕೋರರ ಉಪಟಳ ಹೆಚ್ಚಾದ ಬಗ್ಗೆ ದೂರುಗಳು ದಾಖಲಾಗಿದ್ದು,ಇದರ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಪಿಲಿಭಿತ್, ಪ್ರತಾಪ್‌ಗಢ ಮತ್ತು ಮತ್ತಿತರ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಪಂಜಾಬ್​ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.

    ಕಳೆದ ವರ್ಷದ ನವೆಂಬರ್‌ನಲ್ಲಿ ಪಂಜಾಬ್‌ನ ರೂಪನಗರ (Rupnagar, Punjab) ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಈ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಬಂಧಿಸಲಾಗಿತ್ತು. ಗ್ಯಾಂಗ್​ಸ್ಟರ್​ಗಳ ವಿರುದ್ಧ ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

    ವಾರದ ಹಿಂದಷ್ಟೇ ಸಿರ್ಸಾ (Sirsa) ಮೂಲದ ಲಾಜಿಸ್ಟಿಕ್ಸ್ ಪೂರೈಕೆದಾರ ಮತ್ತು ಕುಖ್ಯಾತ ರೌಡಿಯೊಬ್ಬನನ್ನು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ದೇಶ ಸೇರಿದಂತೆ ವಿದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಕ್ರಿಮಿನಲ್ ಗ್ಯಾಂಗ್‌ಸ್ಟರ್‌ಗಳನ್ನು NIA ಗುರುತಿಸಿದೆ. ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ ಬಳಿಕ ಹರಿಯಾಣ (Haryana) ಮತ್ತು ಪಂಜಾಬ್‌ (Punjab) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ, ಕ್ರಿಮಿನಲ್ ಗ್ಯಾಂಗ್​ಸ್ಟರ್​ಗಳನ್ನು ಬೇರುಸಹಿತ ಕಿತ್ತುಹಾಕುವ ಕ್ರಮ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

    ಕಳೆದ ವರ್ಷ ನವೆಂಬರ್‌ನಲ್ಲಿ NIA ಪಂಜಾಬ್‌ನ ತರನ್​ತರನ್​, ಫಜಿಲ್ಕಾ, ಲೂಧಿಯಾನ, ಮೊಹಾಲಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವ್ಯಾಪಕ ದಾಳಿ ನಡೆಸಿತ್ತು. ಆ ಸಮಯದಲ್ಲಿ ರಾಜಸ್ಥಾನ (Rajasthan) ಮತ್ತು ದೆಹಲಿ (Delhi) ಯ ಭಾಗಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕ್ರಿಮಿನಲ್ ಚಟುವಟಿಕೆ, ಭಯೋತ್ಪಾದಕ ಜಾಲವನ್ನು ಮಟ್ಟಹಾಕಲು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.

    ದಕ್ಷಿಣ ಭಾರತದಲ್ಲಿ ನಡೆದಿದ್ದ ದಾಳಿ:

    ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ NIA ದಾಳಿ ಮಾಡಿತ್ತು. ಕೇರಳಧ ಕೊಯಮತ್ತೂರು ಕಾರ್​ ಬಾಂಬ್ (Coimbatore car blast) ​, ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ (Mangalore cooker bomb blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಿಂಚಿನ ದಾಳಿ ನಡೆಸಿತ್ತು.

    2022 ರ ಅಕ್ಟೋಬರ್​ 23 ರಂದು ತಮಿಳುನಾಡಿನ ಕೊಯಮತ್ತೂರು, ನವೆಂಬರ್​ 19 ರಂದು ಕರ್ನಾಟಕದ ಮಂಗಳೂರಿನಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದವು. ಇವೆರಡೂ ಪ್ರಕರಣಗಳ ಹಿಂದೆ ಉಗ್ರರ ಕೈವಾಡ ಶಂಕೆಯ ಮೇಲೆ NIA ಈ ದಾಳಿ ನಡೆಸಿತ್ತು.

    ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ಸುಮಾರು 45 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ.

    #delhi #punjab Coimbatore car blast cooker bomb blast haryana Lawrence Bishnoi m mangalore mangalore cooker blast mi NIA Sidhu Moose Wala ಉಗ್ರ ಕೊಲೆ
    Share. Facebook Twitter Pinterest LinkedIn Tumblr Email
    Previous Articleಮನೆಗೆ ಬರಲು ನಿರಾಕರಿಸಿದ ಪತ್ನಿ- ಮಕ್ಕಳ ಮೇಲೆ acid ಹಾಕಿದ
    Next Article ಸೋಷಿಯಲ್ ಮೀಡಿಯಾದಲ್ಲಿ Roopa – Sindhuri ಗೆ ಪ್ರಶ್ನೆ
    vartha chakra
    • Website

    Related Posts

    ರಾಹುಲ್ ಗಾಂಧಿ Disqualified

    ಮಾರ್ಚ್ 24, 2023

    Kumaraswamy ಸೇರು- Bhavani Revanna ಸವ್ವಾ ಸೇರು!

    ಮಾರ್ಚ್ 22, 2023

    ಆರೋಗ್ಯ ನೌಕರರ ಮೇಲೆ ESMA ಬ್ರಹ್ಮಾಸ್ರ್ತ

    ಮಾರ್ಚ್ 19, 2023

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕ್ರೀಡೆ
    • ಚುನಾವಣೆ
    • ಚುನಾವಣೆ 2023
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಮಾಜ
    • ಸಮೂಹ ಶಕ್ತಿ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    Kabza ಸಿನೆಮ ನಿಜವಾದ Collection ಎಷ್ಟು ಗೊತ್ತಾ? #kabza #shriyasaran #kiccha

    Ultraviolet ಕಿರಣಗಳಿವೆ ಎಚ್ಚರ! #bangalore #skincancer

    ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!

    ರಾಹುಲ್ ಗಾಂಧಿ Disqualified

    About
    About

    We're social, connect with us:

    Facebook Twitter YouTube
    Software Training
    Recent Posts
    • Kabza ಸಿನೆಮ ನಿಜವಾದ Collection ಎಷ್ಟು ಗೊತ್ತಾ? #kabza #shriyasaran #kiccha ಮಾರ್ಚ್ 26, 2023
    • Ultraviolet ಕಿರಣಗಳಿವೆ ಎಚ್ಚರ! #bangalore #skincancer ಮಾರ್ಚ್ 25, 2023
    • ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ! ಮಾರ್ಚ್ 24, 2023
    • ರಾಹುಲ್ ಗಾಂಧಿ Disqualified ಮಾರ್ಚ್ 24, 2023
    • ಅಖಾಡದಲ್ಲಿ ಝಣ ಝಣ ಕಾಂಚಾಣ! #karnatakaelections2023 #bangalore ಮಾರ್ಚ್ 23, 2023
    • ಉಮೇಶ್ ಕತ್ತಿ ಸೋದರನಿಗೆ Congress ಗಾಳ ಮಾರ್ಚ್ 23, 2023
    • Kumaraswamy ಸೇರು- Bhavani Revanna ಸವ್ವಾ ಸೇರು! ಮಾರ್ಚ್ 22, 2023
    • BJP ಸೇರಿದ ರೋಷನ್ ಬೇಗ್! #bjp #karnataka #congressparty #elections ಮಾರ್ಚ್ 21, 2023
    • ರಸ್ತೆಯಲ್ಲಿ ಬೆತ್ತಲಾಗಿ ಓಡಿದ ಸಿನಿಮಾ ನಟಿ ಮಾರ್ಚ್ 21, 2023
    • Electionಗೆ ಮುನ್ನವೇ DK ವ್ಯೂಹ ಛಿದ್ರ ಮಾರ್ಚ್ 21, 2023
    Popular Posts

    Kabza ಸಿನೆಮ ನಿಜವಾದ Collection ಎಷ್ಟು ಗೊತ್ತಾ? #kabza #shriyasaran #kiccha

    ಮಾರ್ಚ್ 26, 2023

    Ultraviolet ಕಿರಣಗಳಿವೆ ಎಚ್ಚರ! #bangalore #skincancer

    ಮಾರ್ಚ್ 25, 2023

    ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ!

    ಮಾರ್ಚ್ 24, 2023
    Copyright © 2023 Vartha Chakra
    • ಸುದ್ದಿ
    • ಬೆಂಗಳೂರು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ರಾಜಕೀಯ
      • ಚುನಾವಣೆ 2023
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • ಅಪರಾಧ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    DK ಮಾಡಿದ ಪ್ರತಿಜ್ಞೆ #dk #dkshivakumar #ramanagara #jds #mysore #congressparty #belgaum #sandalwood
    Subscribe