ನವದೆಹಲಿ,ಅ.5-ಸೈಬರ್ ಅಪರಾಧ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸೈಬರ್ ಅಪರಾಧಿಗಳ ವಿರುದ್ಧ ದೇಶಾದ್ಯಂತ 105 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
‘ಆಪರೇಷನ್ ಚಕ್ರ’ ಹೆಸರಿನಲ್ಲಿ ನಡೆದ ಈ ದಾಳಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು ಸಹಯೋಗ ನೀಡಿದ್ದು ದಾಳಿ ಮುಂದುವರೆದಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಾಲ್ಕು ಸ್ಥಳಗಳು, ದೆಹಲಿಯಲ್ಲಿ ಐದು, ಚಂಡೀಗಢದಲ್ಲಿ ಮೂರು ಮತ್ತು ಪಂಜಾಬ್, ಕರ್ನಾಟಕ ಮತ್ತು ಅಸ್ಸಾಂನಲ್ಲಿ ತಲಾ ಎರಡು ಸ್ಥಳಗಳಲ್ಲಿ ಕಾರ್ಯಾಚರಣ ನಡೆಸಲಾಗಿದೆ ಎಂದು ವರದಿಯಾಗಿದೆ. ಇದನ್ನು ಹೊರತುಪಡಿಸಿ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಅಮೆರಿಕದ ಪ್ರಜೆಗಳನ್ನು ಗುರಿಯಾಗಿಸಿಕೊಂಡ ಎರಡು ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆದಿದೆ.
ದಾಳಿಯ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳು, 1.5 ಕೋಟಿ ರೂ. ನಗದು ಮತ್ತು 1.5 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸಿಬಿಐ ತಂಡವು 87 ಕಡೆಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು 18 ಕಡೆಗಳಲ್ಲಿ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ರಾಜಸ್ಥಾನದ ಒಂದೇ ಒಂದು ಸ್ಥಳದಿಂದ ಸಿಬಿಐ 1.5 ಕೋಟಿ ನಗದು ಮತ್ತು ಒಂದೂವರೆ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾರ್ಕ್ ವೆಬ್‌ನಲ್ಲಿನ ಹಣಕಾಸಿನ ವಹಿವಾಟುಗಳು ಮತ್ತು ಸೈಬರ್‌ಕ್ರೈಮ್ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿರುವ ಬೃಹತ್ ಡಿಜಿಟಲ್ ಪುರಾವೆಗಳನ್ನು ಸಹ ಸಂಸ್ಥೆ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಇದರ ಜೊತೆ ಅಮೆರಿಕಾ ಪ್ರಜೆಗಳನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದ್ದ, ಪುಣೆ ಹಾಗೂ ಅಹ್ಮದಾಬಾದ್‌ನ ಎರಡು ಕಾಲ್‌ಸೆಂಟರ್‌ಗಳ ಮೇಲೆಯೂ ದಾಳಿ ನಡೆದಿದೆ.
ರಾಜಸ್ಥಾನದ ದಾಳಿ ನಡೆದ ಸ್ಥಳವೊಂದರಲ್ಲಿ ಸಿಬಿಐ ಅಧಿಕಾರಿಗಳಿಗೆ 1.5 ಕೋಟಿ ನಗದು ಹಾಗೂ ಒಂದೂವರೆ ಕೆಜಿ ಚಿನ್ನ ಸಿಕ್ಕಿದೆ ಎಂದು ವರದಿ ಆಗಿದೆ. ಇಂಟರ್‌ಪೋಲ್ ಎಫ್‌ಬಿಐ ರಾಯಲ್ ಕೆನಡಿಯನ್ ಮೌಂಟೇನ್ ಪೊಲೀಸ್ ಮತ್ತು ಆಸ್ಟ್ರೇಲಿಯನ್ ಫೆಡರಲ್ ಪೊಲೀಸರ ಬಳಿಯಿಂದ ಸಿಕ್ಕಿದ ಸೈಬರ್ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.