ಬೆಂಗಳೂರು,ಅ.5-ಹಿಂದೂ ಯುವಕನಿಗೆ ಬಲವಂತವಾಗಿ ‘ಕತ್ನಾ’ ಮಾಡಿಸಿದ ಆರೋಪಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ದೂರನ್ನು ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ..
ವರ್ಗಾವಣೆ ಮಾಡಲಾದ ದೂರಿನ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡ
ಬನಶಂಕರಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಶಬ್ಬೀರ್, ಹತಾವುರ್ ರೆಹಮಾನ್ ಬಂಧಿತ ಆರೋಪಿಗಳು. ನಾಪತ್ತೆಯಾದ ಮಸೀದಿ ಅಧ್ಯಕ್ಷ ನಯಾಜ್ ಪಾಷಾಗೆ ಶೋಧ ಕಾರ್ಯ ನಡೆಯುತ್ತಿದೆ.
ಮೂದಲು ಹುಬ್ಬಳ್ಳಿಯ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು..
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶ್ರೀಧರನನ್ನು ಬಲವಂತವಾಗಿ ಮತಾಂತರ ಮಾಡಿರುವುದು ಬೆಂಗಳೂರಿನಲ್ಲಿ. ಈ ಹಿನ್ನೆಲೆಯಲ್ಲಿ ಅಲ್ಲಿನ ಬನಶಂಕರಿ ಪೊಲೀಸ್ ಠಾಣೆಗೆ ಪ್ರಕರಣ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಪ್ರಕರಣದಕ್ಕೆ ಸಂಬಂಧಿಸಿ ಎಸಿಪಿ ನೇತೃತ್ವದ ತಂಡವೊಂದು ಬೆಂಗಳೂರಿಗೆ ತೆರಳಿ, ಕೆಲವಷ್ಟು ಮಾಹಿತಿ ಸಂಗ್ರಹಿಸಿದೆ ಎಂದು ಹುಬ್ಬಳ್ಳಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ:
ಶ್ರೀಧರ್ ತನಗೆ ಹಣಕಾಸಿನ ತೊಂದರೆ ಎದುರಾಗಿದೆ ಎಂಬ ಬಗ್ಗೆ ಮೊದಲ ಆರೋಪಿ ಅತ್ತಾವರ ರೆಹಮಾನ್ ಬಳಿ ಹೇಳಿಕೊಂಡಿದ್ದ. ನಂತರ ಆತ ಶ್ರೀಧರ್ ಎಸ್ಸಿ ಎಸ್ಟಿ ಎಂದು ತಿಳಿದು ಎರಡನೇ ಆರೋಪಿ ಅಜಿಸಾಬ್ ನನ್ನು ಬನಶಂಕರಿಯ ಮಸೀದಿಗೆ ಕರೆದುಕೊಂಡು ಹೋಗಿ ಪರಿಚಯಿಸಿದ್ದ. ಈ ವೇಳೆ ಅಜಿಸಾಬ್ ಹಿಂದೂ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿ ಇವರನ್ನೆಲ್ಲಾ ದೇವರಾ? ಎಂದು ದೇವರನ್ನು ನಿಂದಿಸಿದ್ದನಂತೆ. ನಂತರ ಇಸ್ಲಾಂ ಧರ್ಮದ ಬಗ್ಗೆ ಭೋದನೆ ಮಾಡಿ ಆ ಧರ್ಮದ ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದನಂತೆ. ಬಳಿಕ ಅವನ ಮೊಬೈಲನ್ನ ಪಡೆದು ಒಂದು ವಾರಗಳ ಕಾಲ ಅಕ್ರಮ ಬಂಧನದಲ್ಲಿಟ್ಟಿದ್ದರಂತೆ. ಇದೆಲ್ಲ ಆದ ಮೇಲೆ ಬಲವಂತವಾಗಿ ಕತ್ನಾ ಮಾಡಿಸಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದಾರೆ.
ಸದ್ಯ ಈ ಸಂಬಂಧ ಹುಬ್ಬಳ್ಳಿಯಲ್ಲಿ ದಾಖಲಾಗಿದ್ದ ದೂರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಸದ್ಯ ಬನಶಂಕರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ದೂರಿನ ವಿವರ:
ಶ್ರೀಧರ್ನನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದು ಆತನಿಗೆ ಕತ್ನಾ ಮಾಡಲಾಗಿದೆಯಂತೆ. ಬಲವಂತವಾಗಿ ಇಸ್ಲಾಂ ಧರ್ಮದಂತೆ ‘ಕತ್ನಾ’ಮಾಡಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ 12 ಮಂದಿ ವಿರುದ್ಧ ದೂರು ದಾಖಲಾಗಿದೆ.
ಇಸ್ಲಾಂ ಧರ್ಮದ ಭೋದನೆ ಮಾಡಿ, ಮರ್ಮಾಂಗದ ‘ಕತ್ನಾ’ಮಾಡಿದಲ್ಲದೆ ದನದ ಮಾಂಸವನ್ನ ಬಲವಂತವಾಗಿ ತಿನ್ನಿಸಿದ್ದಾರೆ ಎನ್ನಲಾಗಿದೆ. ಶ್ರೀಧರನಿಗೆ ಮೊಹಮ್ಮದ್ ಸಲ್ಮಾನ್ ಎಂದು ನಾಮಕರಣ ಮಾಡಿ ಖಾಲಿ ಬಾಂಡ್ ಪೇಪರ್ ಮೇಲೆ ಬರೆಸಿಕೊಂಡಿದ್ದಾರಂತೆ.
ಅಕ್ರಮ ಬಂಧನ:
ಬನಶಂಕರಿಯ ಮಸೀದಿಗೆ ಕರೆ ತಂದು ಅಕ್ರಮವಾಗಿ ಗೃಹಬಂಧನದಲ್ಲಿಟ್ಟಿದ್ದಾರೆಂದು ಶ್ರೀಧರ್ ಆರೋಪಿಸಿದ್ದಾರೆ. ಈ ವೇಳೆ ಶ್ರೀಧರ್ ಪ್ರತಿಭಟಿಸಿದಾಗ ಪರವಾನಿಗೆ ಇರುವ ಗನ್ ಇಟ್ಟು ಭಯೋತ್ಪಾದಕನಂತೆ ಬಿಂಬಿಸಿ ವಿಡಿಯೋ ಮಾಡಿಕೊಂಡಿದ್ದಾರಂತೆ. ನಂತರ ಮತಾಂತರದ ಬಗ್ಗೆ ಬರೆಸಿಕೊಂಡಿದ್ದಾರೆ. ಇದರ ಬಗ್ಗೆ ಏನಾದರು ಹೊರಗಡೆ ತಿಳಿದರೆ ಭಯೋತ್ಪಾದಕನಂತೆ ಬಿಂಬಿಸಿದ ವಿಡಿಯೋವನ್ನ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಹಾಗು ವರ್ಷಕ್ಕೆ ಮೂರು ಜನರನ್ನ ಕರೆ ತಂದು ಮತಾಂತರ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಅನೇಕ ರೀತಿಯಲ್ಲಿ ಕಿರುಕುಳ ನೀಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.