ನವ ದೆಹಲಿ : ಯಾವುದೇ ಸ್ವಂತ ಹೋಟೆಲ್ ಕಟ್ಟಡವಿಲ್ಲದೆ ನೂರಾರು ಹೋಟೆಲ್ ಗಳ ವ್ಯವಹಾರ ನಡೆಸುತ್ತಿರುವ ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿರುವ ಡಿಎಲ್ ಎಫ್ ನ ಬಹುಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಡಿಎಲ್‌ಎಫ್‌ನ ದಿ ಕ್ರೆಸ್ಟ್ ಸೊಸೈಟಿಯ 20ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದಾರೆ ಎಂದು ವಸತಿ ಸಮುಚ್ಚಯದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
ಮಾಹಿತಿ ಬರುತ್ತಿದ್ದಂತೆ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು ಘಟನಾ ಸ್ಥಳದಲ್ಲಿ ಪರಿಶೀಲನೆ ವೇಳೆ, ಕಟ್ಟಡದ ಮೇಲಿನಿಂದ ಬಿದ್ದ ವ್ಯಕ್ತಿ
ಬಿದ್ದಿದ್ದಾರೆ ಎಂದು ತಿಳಿದು ತಕ್ಷಣವೇ ಅವರನ್ನು
ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದರು. ಮೃತರನ್ನು
ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರ್ವಾಲ್ ಎಂದು ಗುರುತಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಮೇಶ್ ಅಗರವಾಲ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.
ತಮ್ಮ ತಂದೆ ಮೃತಪಟ್ಟಿರುವ ವಿಷಯವನ್ನು ರಿತೇಶ್ ಅಗರ್ವಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ತಮ್ಮ ತಂದೆ ಅಕಾಲಿಕ ಸಾವಿನಿಂದ ನಮ್ಮ ಕುಟುಂಬಕ್ಕೆ ಅಪಾರ ನಷ್ಟವಾಗಿದೆ ಎಂದಿದ್ದಾರೆ.
ನಮ್ಮ ಕಠಿಣ ಸಮಯಗಳಲ್ಲೂ ನನ್ನ ತಂದೆ ತೋರಿದ ಸಹಾನುಭೂತಿ ಮತ್ತು ಆತ್ಮೀಯತೆಯು ನನ್ನನ್ನ ಮುಂದೆ ಕೊಂಡೊಯ್ದಿತು. ಅವರ ಮಾತುಗಳು ನಮ್ಮ ಹೃದಯದಲ್ಲಿ ಆಳವಾಗಿ ಪ್ರತಿಧ್ವನಿಸುತ್ತವೆ. ಈ ದುಃಖದ ಸಮಯದಲ್ಲಿ ಪ್ರತಿಯೊಬ್ಬರೂ ನಮ್ಮ ಖಾಸಗಿತನವನ್ನ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದರ ನಡುವೆ ಬಹುಮಹಡಿ ಕಟ್ಟಡದಿಂದ ಅವರು ಹೇಗೆ ಬಿದ್ದರು ಎನ್ನುವ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ.
Oyo ಸಂಸ್ಥಾಪಕನ ತಂದೆ ಅನುಮಾನಾಸ್ಪದ ಸಾವು #oyo #startup
Previous ArticleBJP ಉನ್ನತ ಸಮಿತಿಗಳ ರಚನೆ-ಹುಸಿಯಾದ ನಿರೀಕ್ಷೆ
Next Article Royal Concorde ಶಾಲೆ ವಿರುದ್ಧ ಕ್ರಿಮಿನಲ್ ಕೇಸ್