ಪವಿತ್ರಾ ಲೋಕೇಶ್, ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗು ಸ್ಪುರದ್ರೂಪಿ ನಟಿ. ಮೈಸೂರು ಲೋಕೇಶ್ ಪುತ್ರಿ ಪವಿತ್ರಾ ಅವರ ಮತ್ತೊಂದು ಮದುವೆ ಆಗೋ ವಿಚಾರ ಸ್ಯಾಂಡಲ್ವುಡ್ ಹಾಗು ಟಾಲಿವುಡ್ ಚಿತ್ರರಂಗದಲ್ಲಿ ಹಾಟ್ ಫೇವರಿಟ್ ಚರ್ಚೆ ವಿಷಯವಾಗಿದೆ. ಅದೂ ತೆಲುಗಿನ ಖ್ಯಾತ ನಟ ವಿಜಯ ನಿರ್ಮಲಾ ಅವರ ಪುತ್ರ, ಹಿರಿಯ ನಟ ನರೇಶ್ ಜೊತೆ ಪವಿತ್ರಾ ಎರಡನೇ ಬಾರಿ ವಿವಾಹವಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಾಗಲೇ ನರೇಶ್ ಮೂರು ವಿವಾಹವಾಗಿದ್ದು ಇದು ಅವರ ನಾಲ್ಕನೇ ಮದುವೆಯಾಗಲಿದೆ. ಈ ಬಗ್ಗೆ ತೆಲುಗಿನ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ತನ್ನ 16 ನೇ ವಯಸ್ಸಿನಲ್ಲಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಪವಿತ್ರಾ 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2006ರಲ್ಲೀ ತೆರೆಕಂಡ ಕನ್ನಡದ ಚಿತ್ರವಾದ ನಾಯಿ ನೆರಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅವರ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಸುಚೇಂದ್ರ ಪ್ರಸಾದ್ ಅವರ ಜೊತೆ ವಿವಾಹವಾಗಿ ಎರಡು ಮಕ್ಕಳನ್ನು ಹೊಂದಿದ್ದ ನಟ ಕೆಲವು ವರ್ಷಗಳ ಹಿಂದೆ ಅವರಿಂದ ದೂರವಾಗಿದ್ದರು. ಇದೀಗ ತೆಲುಗಿನ ಪ್ರಸಿದ್ದ ನಟ ಮಹೇಶ್ ಬಾಬುಗೆ ಸೋದರ ಸಂಬಂಧಿಯಾಗಿರುವ ನರೇಶ್ ಜತೆ ನಟಿ ಹಸೆಮಣೆ ಏರುತ್ತಿದ್ದಾರೆಂದು ಸುದ್ದಿಗಳು ಕೇಳಿಬಂದಿದೆ. ಇನ್ನೂ ಕೆಲ ಮಾಧ್ಯಮಗಳು ಈ ಇಬ್ಬರೂ ಇದಾಗಲೇ ಮದುವೆ ಆಗಿದ್ದಾರೆಂದು ವರದಿ ಮಾಡಿವೆ, ನಟಿ ಪವಿತ್ರಾ ಲೋಕೇಶ್ ಹಾಗು ನಟರಾದ ನರೇಶ್ ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಇಬ್ಬರ ಮದುವೆ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆ, ಲಿವಿಂಗ್ ಟುಗೆದರ್ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಪವಿತ್ರಾ ಲೋಕೇಶ್ ಹಾಗು ನರೇಶ್ ಇದುವರೆಗೆ ತಮ್ಮ ಮದುವೆ ವಿಚಾರದ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ.
ತೆಲುಗಿನ ಸ್ಟಾರ್ ನಟನೊಂದಿಗೆ ಪವಿತ್ರಾ ಲೋಕೇಶ್ ವಿವಾಹ?
Previous ArticleShopping ಮಾಡುವಾಗ Arrest
Next Article ಮತ್ತೆ ಮೈದಾನಕ್ಕಿಳಿದು ಬ್ಯಾಟ್ ಬೀಸಿದ ಕಿಚ್ಚ!