ನಟ ಸುದೀಪ್ ಕೇವಲ ಅಭಿನಯ ಮಾತ್ರವಲ್ಲ ಕ್ರಿಕೆಟ್ ಆಡುವುದರಲ್ಲು ಎಕ್ಸ್‌ಪರ್ಟ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಈ ಹಿಂದೆ ಇಡೀ ಭಾರತೀಯ ಸಿನಿಮಾ ರಂಗದ ಸ್ಟಾರ್‌ಗಳನ್ನ ಒಂದು ಕಡೆ ಸೇರಿಸಿ, ಬ್ಯಾಟ್ ಮತ್ತು ಬಾಲ್ ಹಿಡಿಯುವಂತೆ ಮಾಡಿದ್ದವರು ಕನ್ನಡಿಗ ಕಿಚ್ಚ ಸುದೀಪ್. ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಸ್ಟಾರ್ ಆಟಗಾರರನ್ನೂ ಟೂರ್ನಿಗೆ ಕರೆತಂದಿದ್ದರು. ಇದೀಗ ಮತ್ತೆ ಕ್ರಿಕೆಟ್ ವಿಚಾರದಲ್ಲೇ ನಟ ಸುದೀಪ್ ಅವರು ಸುದ್ದಿಯಲ್ಲಿದ್ದಾರೆ. ಅಪ್ಪಟ ಕ್ರಿಕೆಟ್ ಪ್ರೇಮಿಯಾಗಿರುವ ಸುದೀಪ್ ಇಂದು ಬೆಳ್ಳಂ ಬೆಳಿಗ್ಗೆ ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರು. ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ಸುದೀಪ್ ಸದ್ಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ‘ ಚಿತ್ರದ ಬಿಡುಗಡೆಯ ಸನಿಹದಲ್ಲಿದ್ದಾರೆ. ಈ ಸಂಬಂಧ ಚಿತ್ರದ ಪ್ರಮೋಷನ್ ಮತ್ತು ಇತರೇ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೇ ಸುದೀಪ್ ಗೆ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿಯಿದೆ ರಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಅನೇಕ ಬಾರಿ ಕಿಚ್ಚ ತಮ್ಮ ಕ್ರಿಕೆಟ್ ಮೇಲಿನ ಅಭಿಮಾನವನ್ನು ಬಹಿರಂಗ ಪಡಿಸಿದ್ದಾರೆ ಕೂಡ. ಐಪಿಎಲ್ ನ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಬ್ರಾಂಡ್ ಅಂಬಾಸಿಟರ್ ಆಗಿರುವ ಸುದೀಪ್ ಕ್ರಿಕೆಟ್ ಆಡುವುದುರಲ್ಲೂ ನಿಪುಣರು. ಇದೀಗ ಸುದೀಪ್ ಪೊಲೀಸ್ ತಂಡದ ಜೊತೆ ಸ್ನೇಹ ಪೂರ್ವಕ ಪಂದ್ಯ ಆಡುತ್ತಿದ್ದಾರೆ. ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಕೆ.ಪಿ ಶ್ರೀಕಾಂತ್, ಜೆಕೆ, ರಾಜೀವ್ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಬೆಂಗಳೂರಿನ ಬಿಜಿಎಸ್ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಕಿಚ್ಚ ಸುದೀಪ್ ಜರ್ಸಿ ತೊಟ್ಟು ಮೈದಾನದಲ್ಲಿ ಆಟ ಆಡುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಮತ್ತೆ ಮೈದಾನಕ್ಕಿಳಿದು ಬ್ಯಾಟ್ ಬೀಸಿದ ಕಿಚ್ಚ!
Previous Articleತೆಲುಗಿನ ಸ್ಟಾರ್ ನಟನೊಂದಿಗೆ ಪವಿತ್ರಾ ಲೋಕೇಶ್ ವಿವಾಹ?
Next Article ಒಡಿಯಾ ಧಾರಾವಾಹಿ ನಟಿ ರಶ್ಮಿರೇಖಾ ಓಜಾ ಸಾವು!