ನವದೆಹಲಿ – ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ರಾಮ ರಾಜ್ಯ ನಿರ್ಮಾಣ ಸನಿಹದಲ್ಲೇ ಇದೆ ಪ್ರಧಾನಿ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದ ಈ ಕಾಲ ಭಾರತದ ಪಾಲಿನ ಅಮೃತಕಾಲ ಎಂದು ಬಿಂಬಿಸಲಾಗುತ್ತಿದೆ.ಅದರಲ್ಲೂ ಭಾರತ ವಿಶ್ವ ಗುರುವಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ ಎಂದು ಬಣ್ಣಿಸಲಾಗುತ್ತಿದೆ.ಶಾಂತಿ ಪ್ರಿಯ ಈ ದೇಶ ಜಗತ್ತಿನ ಬಹು ಸಂಖ್ಯಾತರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಡೀ ಜಗತ್ತು ಮೋದಿ ಅವರ ಆಳ್ವಿಕೆಯಲ್ಲಿ ಭಾರತದತ್ತ ನೋಡುತ್ತಿದೆ ಎಂದು ದೊಡ್ಡ ಮಟ್ಟದ ಪ್ರಚಾರ ಮಾಡಲಾಗುತ್ತಿದೆ.
ಆದರೆ ವಾಸ್ತವ ಸಂಗತಿಯನ್ನು ಕೇಂದ್ರ ಸರ್ಕಾರವೇ ಜನರ ಮುಂದೆ ತೆರೆದಿಟ್ಟಿದೆ.
ಮೊನ್ನೆ ತಾನೇ ಮುಕ್ತಾಯವಾದ ಸಂಸತ್ ಅಧಿವೇಶನದಲ್ಲಿ ಭಾರತದ ಅಮೃತಕಾಲದ ಕುರಿತಾಗಿ ನೀಡಿರುವ ಮಾಹಿತಿ ಅಚ್ಚರಿ ಮೂಡಿಸಿದೆ.
ಇದನ್ನು ತಿಳಿಯಲು ಈ ಸುದ್ದಿ ನೋಡಿ ಅದಕ್ಕಿಂತ ಮೊದಲು ನಮ ಚಾನಲ್ ಸಬ್ ಸ್ಕ್ರೈಬ್ ಮಾಡಿ ಷೇರ್ ಮಾಡೋದನ್ನು ಮರೆಯಬೇಡಿ.
ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ, ಪರಸ್ಪರ ಅಪ ನಂಬಿಕೆಯ ವಾತಾವರಣ ಉಂಟಾಗುತ್ತಿದೆ.ಪ್ರಶ್ನೆ ಮಾಡುವರನ್ನು ಪ್ರಗತಿ ವಿರೋಧಿಗಳು,ದೇಶದ ಬಗ್ಗೆ ಗೌರವ, ಪ್ರೀತಿ ಭಕ್ತಿ ಇಲ್ಲದವರು ಎಂದು ಮೂದಲಿಸಲಾಗುತ್ತಿದೆ.ಜೊತೆಗೆ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ..ಇಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಜೀವನ ಸೌಲಭ್ಯಗಳಿವೆ ಎಂದು ಬಿಂಬಿಸಲಾಗುತ್ತಿದೆ.
ಆದರೆ ಕೇಂದ್ರ ಸಚಿವ ಮುರುಳೀಧರನ್ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ವಾಸ್ತವ ಸಂಗತಿಯನ್ನು ವಿವರಿಸಿದ್ದಾರೆ.
ಭಾರತೀಯರು ಉತ್ತಮ ಜೀವನಕ್ಕಾಗಿ ಪ್ರಪಂಚದ ಹೆಚ್ಚಿನ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ.ಅದು ಭಾರತೀಯ ಪೌರತ್ವ ತ್ಯಜಿಸಿ ಮತ್ತೊಂದು ರಾಷ್ಟ್ರದ ಪ್ರಜೆಗಳಾಗುತ್ತಿದ್ದಾರೆ. ಅಂದಹಾಗೆ ಇವರಾರೂ ಅನಿವಾಸಿ ಭಾರತೀಯರಾಗಲೂ ಇಚ್ಚಿಸುತ್ತಿಲ್ಲ . ದ್ವಿರಾಷ್ಟ್ರ ಪೌರತ್ವ ಅವರಿಗೆ ಬೇಡ ಹೀಗಾಗಿ ಭಾರತದ ಪೌರತ್ವ ತ್ಯಜಿಸಿ ತಾವು ಬಯಸುವ ದೇಶದ ಪ್ರಜೆಗಳಾಗುತ್ತಿದ್ದಾರೆ.
ಈ ರೀತಿಯಲ್ಲಿ ಭಾರತೀಯ ಪೌರತ್ವ ತ್ಯಜಿಸಿ ಹೋಗುತ್ತಿರುವರು ಅತ್ಯಂತ ಶ್ರೀಮಂತರು, ವಾಣಿಜ್ಯೋದ್ಯಮಿಗಳು.ಭಾರತದಲ್ಲಿ ಏನು ಬೇಕಾದರೂ ಕೊಳ್ಳುವ ಶಕ್ತಿ ಹೊಂದಿರುವರು. ಆದರೂ ಅವರು ದೇಶ ತೊರೆಯುತ್ತುದ್ದಾರೆ ಎನ್ನುವುದು ತೀರ ಕಳವಳಕಾರಿ ಸಂಗತಿಯಲ್ಲವೇ.
ಕಳೆದ 2014 ರಿಂದ ಈ ವಲಸೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದೆ.
ಈ ರೀತಿಯಲ್ಲಿ ವಲಸೆ ಹೋಗುತ್ತಿರುವರ ಪೈಕಿ ಉದ್ಯೋಗ, ವ್ಯಾಪಾರ ವಹಿವಾಟಿನ ಕಾರಣಕ್ಕೆ ಹೋಗುವರ ಸಂಖ್ಯೆ ಅತ್ಯಂತ ಕಡಿಮೆ.ಬಹುತೇಕರು ಹೋಗುತ್ತಿರುವುದು ನೆಮ್ಮದಿ ಹಾಗೂ ಶಾಂತಿಯುತ ಜೀವನಕ್ಕಾಗಿ.
ವಿಶ್ವಸಂಸ್ಥೆಯ ವಿಶ್ವ ವಲಸೆ ವರದಿಯ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಲಸಿಗರನ್ನು ಹೊಂದಿದೆ. 2021ರ ವೇಳೆಗೆ 1.20 ಕೋಟಿ ಭಾರತೀಯರು ವಿದೇಶದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಮತ್ತು ದೇಶದ ಪೌರತ್ವವನ್ನು ತೊರೆದಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಈ ಪ್ರಮಾಣ ಅತ್ಯಧಿಕವಾಗಿದೆ
ಅಂದಹಾಗೆ ಭಾರತದ 1955 ರ ಪೌರತ್ವ ಕಾಯ್ದೆಯ ಸೆಕ್ಷನ್ 8 ರ ನಿಬಂಧನೆಗಳ ಅಡಿಯಲ್ಲಿ ಭಾರತದ ಪೌರತ್ವವನ್ನು ತ್ಯಜಿಸಬಹುದಾಗಿದೆ.ಇನ್ನು ಸಂಸತ್ತಿನಲ್ಲಿ ಕೇಂದ್ರ ಸಚಿವ ಮುರುಳೀಧರನ್ ನೀಡಿರುವ ಉತ್ತರದ ಪ್ರಕಾರ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹನ್ನೆರಡು ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 30, 2021ರವರೆಗೆ ಒಟ್ಟು 8,81,254 ಮಂದಿ ಭಾರತೀಯರು ಪೌರತ್ವ ತ್ಯಜಿಸಿದ್ದು, ಈ ಸಂಖ್ಯೆ 2019ರಲ್ಲಿ ಹೆಚ್ಚಿದೆ ಎಂದು ಹೇಳಿದ್ದಾರೆ.
2015ರಲ್ಲಿ ಒಟ್ಟು 1,31,489 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದರು. ತದನಂತರ 2016ರಲ್ಲಿ 1,41,603ಕ್ಕೆ ಏರಿತು. 2017ರಲ್ಲಿ 1,33,049, 2018ರಲ್ಲಿ, ಈ ಸಂಖ್ಯೆ 1,34,561ಕ್ಕೆ ಏರಿತ್ತು. 2019ರಲ್ಲಿ ಅವರ ಸಂಖ್ಯೆ 1,44,017ಕ್ಕೆ ಏರಿತು ಮತ್ತು 2020ರಲ್ಲಿ ಅದು 85,242ಕ್ಕೆ ಇಳಿಯಿತು. 2021ರಲ್ಲಿ ಮತ್ತೆ 1,63,287 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದರು ಎಂಬ ಅಂಕಿ ಅಂಶವನ್ನು ಅವರು ತಿಳಿಸಿದ್ದಾರೆ.
ಭಾರತೀಯ ಪೌರತ್ವ ತೊರೆಯುತ್ತಿರುವರ ನೆಚ್ಚಿನ ತಾಣಗಳು ಪಾಶ್ಚಿಮಾತ್ಯ ರಾಷ್ಟ್ರಗಳಾಗಿವೆ.ಇದರಲ್ಲಿ
78 ಸಾವಿರ ಅಮೇರಿಕಾದ ಪೌರತ್ವ ಸ್ವೀಕರಿಸಿದರೆ, ಆಸ್ಟ್ರೇಲಿಯಾದ ಪೌರತ್ವವನ್ನು 23 ಸಾವಿರದ 533 ಮಂದಿ ಪಡೆದಿದ್ದಾರೆ, ಕೆನಡಾದ ಪೌರತ್ವವನ್ನು 21ಸಾವಿರದ597 ಮಂದಿ ಸ್ವೀಕರಿಸಿದರೆ,14 ಸಾವಿರದ 637 ಜನರು ಬ್ರಿಟನ್ ಪೌರತ್ವ ಪಡೆದಿದ್ದು ಇಟಲಿಯ ಪೌರತ್ವವನ್ನು 5,ಸಾವಿರದ 986 ಜನ ಸ್ವೀಕರಿಸಿದ್ದಾರೆ
ಸಿರಿವಂತರೆನಿಸಿಕೊಂವರು,ಮನಸ್ಸು ಮಾಡಿದರೆ ಭಾರತದಲ್ಲಿ ಏನು ಬೇಕಾದರೂ ಖರೀದಿಸುವ ಶಕ್ತಿಯುಳ್ಳ ಇವರು ಕೇವಲ ನೆಮ್ಮದಿ ಮತ್ತು ಶಾಂತಿಯುತ ಬದುಕಿಗಾಗಿ ದೇಶ ತ್ಯಜಿಸುತ್ತಿದ್ದಾರೆ ಎನ್ನುವುದು ಕಟು ವಾಸ್ತವ. ಹಾಗಾದರೆ ಭಾರತದಲ್ಲಿ ಅಮೃತ ಕಾಲ ಯಾರಿಗಾಗಿ ಬಂದಿದೆ.ಭಾರತ ಯಾವ ರಂಗದಲ್ಲಿ ವಿಶ್ವ ಗುರುವಾಗುತ್ತಿದೆ ಎನ್ನುವುದು ಪ್ರಮುಖ ಪ್ರಶ್ನೆ ಅಲ್ಲವೆ.
2017ರಲ್ಲಿ 1,33,049
2018ರಲ್ಲಿ 1,34,561
2019ರಲ್ಲಿ 1,44,017
2020ರಲ್ಲಿ 85,248
2021ರಲ್ಲಿ 1,63,287