ಬೆಂಗಳೂರು – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಜೇಬುಗಳ್ಳರ ಹಾವಳಿ ಕಡಿಮೆಯಾಗಿತ್ತು. ಸರಗಳ್ಳರ ಹಾವಳಿ ಹೆಚ್ಚಿದ್ದ ಬಿಎಂಟಿಸಿ ಬಸ್ಸುಗಳಿಗೆ ಸ್ವಯಂಚಾಲಿತ ಬಾಗಿಲು ಅಳವಡಿಸಲಾಗಿದೆ.ಎಲ್ಲಾ ಬಸ್ಸುಗಳಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದೆ.ಇದರ ಜೊತೆಗೆ ಈ ಹಿಂದಿನಂತೆ ಈ ಬಸ್ಸುಗಳಲ್ಲಿ ಜನ ಸಂದಣಿ ಹೆಚ್ಚಾಗಿರುವುದಿಲ್ಲ. ತ್ವರಿತ ಪ್ರಯಾಣಕ್ಕಾಗಿ ಮೆಟ್ರೋ ಅವಲಂಬಿತರ ಸಂಖ್ಯೆ ಹೆಚ್ಚಾಗಿದೆ. ಮೆಟ್ರೋ ರೈಲು ಗಳಲ್ಲಿ ಭದ್ರತೆ ಹೆಚ್ಚು ಇಲ್ಲಿ ಕೈಚಳಕ ತೋರಲು ಜೇಬುಗಳ್ಳರಿಗೆ ಸಾಧ್ಯವಿಲ್ಲ.
ಹೀಗಾಗಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಜೇಬುಗಳ್ಳರ ಹಾವಳಿ ಕಡಿಮೆಯಾಗಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮತ್ತೆ ಇವರು ಸಕ್ರಿಯವಾಗಿದ್ದಾರೆ.
ಇದೀಗ ಹೈಗ್ರೌಂಡ್ಸ್,ವಿಧಾನಸೌಧ,ಶೇಷಾದ್ರಿಪುರಂ ವೈಯ್ಯಾಲಿಕಾವಲ್ ಮತ್ತು ಸದಾಶಿವನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಪ್ರಕರಣಗಳು ದಾಖಲಾಗುತ್ತಿವೆ.
ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ
ಶಿವಕುಮಾರ್ ಅವರಿಗೆ ಶುಭಾಶಯ ಕೋರಲು ರಾಜ್ಯದ ನಾನಾ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಆಗಮಿಸುತ್ತಿದ್ದಾರೆ
ಈ ಬಗ್ಗೆ ಮಾಹಿತಿ ಪಡೆದಿರುವ ಜೇಬುಗಳ್ಳರು ಇವರ ನಿವಾಸ,ಕಚೇರಿ ಮತ್ತು ಕಾಂಗ್ರೆಸ್ ಕಚೇರಿಯ ಸಮೀಪ ಠಳಾಯಿಸಿ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದಾರೆ.
ಇಲ್ಲಿ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದರೂ ಅವರು ಬಹುತೇಕ ಸಮಯವನ್ನು ಭದ್ರತಾ ವ್ಯವಸ್ಥೆ ಕಡೆ ಗಮನ ಹರಿಸುವುದರಿಂದ ಜೇಬುಗಳ್ಳರ ಕಡೆ ಗಮನ ಹರಿಸಲಾಗುತ್ತಿಲ್ಲ ಇದರ ಪರಿಣಾಮವಾಗಿ ಜೇಬುಗಳ್ಳರ ಕೆಲಸ ಸಲೀಸಾಗಿದೆ.
ಮೊನ್ನೆ ಚಿತ್ರದುರ್ಗದಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತನಿಂದ 2,000 ರೂ.ಗಳನ್ನು ಕದ್ದು ಪರಾರಿಯಾಗಲು ಯತ್ನಿಸಿದ ಚೆನ್ನೈ ಮೂಲದ 52 ವರ್ಷದ ಭಾಸ್ಕರ್ ಆರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಭಾಸ್ಕರ್, ತಾನು ಶಿವಕುಮಾರ್ ಅವರ ಅಭಿಮಾನಿ ಅವರಿಗೆ ಶುಭಾಶಯಗಳನ್ನು ತಿಳಿಸಲು ಭೇಟಿ ನೀಡಿದ್ದಾಗಿ ತಿಳಿಸಿದ್ದ.
ಬುಧವಾರ ಜೆ.ಪಿ.ನಗರದ ನಿವಾಸಿ 39 ವರ್ಷದ ಕಿರಣ್ ಎಚ್.ವಿ, ಡಿಕೆ ಶಿವಕುಮಾರ್ ಅವರಿಗೆ ಶುಭಾಶಯ ಕೋರಲು ಬಂದಿದ್ದರು. ಸಚಿವರನ್ನು ಭೇಟಿಯಾಗಲು ಸಾಕಷ್ಟು ಮಂದಿ ಕಾದು ಕುಳಿತಿದ್ದರಿಂದ ಕಿರಣ್ ಅವರು ಗೃಹ ಕಚೇರಿಯ ಹೊರಗೆ ಕಾದು ಕುಳಿತಿದ್ದರು. ಮಧ್ಯಾಹ್ನ 1.15ರ ಸುಮಾರಿಗೆ ಜನಜಂಗುಳಿಯ ನಡುವೆ ನಿಂತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಕಿರಣ್ ಅವರ ಪ್ಯಾಂಟ್ ಜೇಬಿನಲ್ಲಿದ್ದ 40 ಸಾವಿರ ರೂ. ಕದ್ದಿದ್ದ. 15 ನಿಮಿಷಗಳ ನಂತರ ಕಳ್ಳತನ ನಡೆದಿರುವುದು ಬಯಲಾಗಿತ್ತು
ಇದೇ ರೀತಿಯಲ್ಲಿ ಪ್ರತಿನಿತ್ಯ ಜೇಬುಗಳ್ಳರ ಕೈಚಳಕ ಕುರಿತು ಪೊಲೀಸರಿಗೆ ಒಂದಲ್ಲಾ ಒಂದು ದೂರು ಇದ್ದೇ ಇರುತ್ತದೆ
Previous Articleಯುವಕರ ಹುಚ್ಚಾಟ- ತಪ್ಪಿದ ಅನಾಹುತ
Next Article ಮಂತ್ರಿ ಬೈರತಿ ಸುರೇಶ್ ಸುದ್ದಿಯಲ್ಲಿದ್ದಾರೆ ಯಾಕೆ ಗೊತ್ತಾ?