ಬೆಂಗಳೂರು,ಅ.7-
ಗರ್ಭಿಣಿಯರೇ ಈ ವಂಚಕರ ಟಾರ್ಗೆಟ್. ಇವರ ನಯವಾದ ಮಾತು ಕೇಳಿ ಗರ್ಭಿಣಿಯರು ಕೊಂಚ ಯಾಮಾರಿದರೂ ಸಾಕು ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣ ಕ್ಷಣಮಾತ್ರದಲ್ಲಿ ಮಂಗಮಾಯ.
ಇಂತಹದೊಂದು ಜಾಲ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದೆ ಪೊಲೀಸ್ ಇಲಾಖೆಗೂ ಕೂಡ ಈ ಕುರಿತಾಗಿ ಹಾಲು ದೂರುಗಳು ಬಂದಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹಾರಿಸುವಂತೆ ಸಲಹೆ ಮಾಡಿದೆ.
ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಮತ್ತು ಔಷಧೋಪಾಚಾರ ಒದಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಪೋಷಣ್ ಎಂಬ ಯೋಜನೆಯನ್ನು ರೂಪಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಹಂಚಿಕೆಯಲ್ಲಿ ಮಾಡಲಾಗಿರುವ ಈ ಯೋಜನೆ ಅಭಿಯಾನದ ರೂಪದಲ್ಲಿ ಜಾರಿಗೊಳಿಸಲಾಗುತ್ತಿದೆ
ವಂಚಕರು ಇದೀಗ ಪೋಷಣ್ ಅಭಿಯಾನದ ಹೆಸರು ಹೇಳಿ ಬಾಣಂತಿಯರ ಅಕೌಂಟ್‌ಗೆ ಕನ್ನ ಹಾಕಲಾಗುತ್ತಿದ್ದಾರೆ.
ಗರ್ಭಿಣಿ ಮತ್ತು ಬಾಣಂತಿಯರ ಮೊಬೈಲ್ ಗೆ ಕರೆ ಮಾಡುವ ವಂಚಕರು ಅಧಿಕಾರಿಗಳ ಹೆಸರು ಹೇಳಿ ನಿಮ್ಮ ನಂಬರ್ ಗೆ ಫೋನ್ ಬರುತ್ತೆ ನಿಮ್ಮ ಹೆಸರು, ನಿಮ್ಮ ಏರಿಯಾ ಅಂಗನವಾಡಿ ಹೆಸರು ಹೇಳಿ. ಸರ್ಕಾರದಿಂದ ನಿಮ್ಮ ಅಕೌಂಟ್ ಗೆ 7,500 ಹಣ ಜಮಾವಣೆ ಮಾಡಲಾಗುತ್ತೆ ಎಂದು ಹೇಳುತ್ತಾರೆ.
ಇದಾದ ಕೆಲವೇ ಹೊತ್ತಿನಲ್ಲಿ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ರೂಪಿಸಿರುವ ಪೋಷಣ್ ಅಭಿಯಾನ ಯೋಜನೆ ಅಡಿಯಲ್ಲಿ ನಿಮಗೆ ಆರ್ಥಿಕ ನೆರವು ನೀಡಲಾಗುತ್ತಿದೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ 7,500 ರೂಪಾಯಿ ಜಮಾ ಮಾಡಲಾಗುವುದು ಎಂದು ಹೇಳುವ ವಂಚಕರು ಫೋನ್ ಫೇ ಅಥವಾ ಗೂಗಲ್ ಫೇ ಓಪನ್ ಮಾಡಿಸಿ ಲಿಂಕ್ ಕಳುಹಿಸುತ್ತಾರೆ. ಹೀಗೆ ಕಳುಹಿಸಿದ ಲಿಂಕ್ ಓಪನ್ ಮಾಡಿಸುತ್ತಾರೆ. ಆನಂತರ ಬರುವ ಓಟಿಪಿ ಪಡೆದುಕೊಂಡು ಗರ್ಭಿಣಿ ಮತ್ತು ಬಾಣಂತಿಯರ ಅಕೌಂಟಿನಲ್ಲಿರುವ ಸಂಪೂರ್ಣ ಹಣ ವರ್ಗಾವಣೆ ಮಾಡಿಕೊಂಡು ಫೋನ್ ಸ್ವಿಚ್ ಆಫ್ ಮಾಡುತ್ತಾರೆ.
ಈ ಸಂಬಂಧ ರಾಜ್ಯಾದ್ಯಂತ ಇಲ್ಲಿಯವರೆಗೆ 84,000ಕ್ಕೂ ಅಧಿಕ ಮಹಿಳೆಯರಿಗೆ ವಂಚಿಸಿರುವ ಕುರಿತಂತೆ ದೂರುಗಳು ದಾಖಲಾಗಿವೆ.
ಈ ಖದೀಮರು
ಗರ್ಭಿಣಿಯರು, ಬಾಣಂತಿಯರು, ಆರು ವರ್ಷದ ಒಳಗಿನ ಮಕ್ಕಳ ದಾಖಲೆ ಇರುವ ಪೋಷಣ ಟ್ರ್ಯಾಕರ್ ಆ್ಯಪ್ ಹ್ಯಾಕ್ ಮಾಡಿ ಡಾಟಾ ಸಂಗ್ರಹ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಆ್ಯಪ್ ನಲ್ಲಿ ಗರ್ಭಿಣಿ, ಬಾಣಂತಿಯರ ಹೆಸರು, ವಿಳಾಸ, ಊರು ಮತ್ತು ಫೋನ್ ನಂಬರ್ ಇರುತ್ತೆ. ಈ ಮಾಹಿತಿ ಸಂಗ್ರಹಿಸುತ್ತಿರುವ ಸೈಬರ್ ವಂಚಕರು ಅದನ್ನು ಬಳಸಿ ಅಮಾಯಕರಿಗೆ ವಂಚನೆ ಮಾಡುತ್ತಿದ್ದಾರೆ.
ಈ ಕುರಿತಾದ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಿವು ಮೂಡಿಸುವ ಪೊಲೀಸ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಪ್ರಮುಖವಾಗಿ ಅಂಗನವಾಡಿ ಶಿಕ್ಷಕಿಯರು ಗರ್ಭಿಣಿ ಹಾಗೂ ಬಾಣಂತಿಯರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗಿ ಹಾಗೂ ವಾಟ್ಸಪ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಪೋಷಣ್ ಯೋಜನೆ ಹೆಸರು ಹೇಳಿ ಅಧಿಕಾರಿಗಳು ಎಂದು ಕರೆ ಮಾಡುತ್ತಾರೆ. ನಿಮ್ಮ ಅಕೌಂಟ್ ಗೆ 7,500 ಹಣ ಹೋಗುತ್ತೆ ಅಂತಾ ಹೇಳ್ತಾರೆ. ಬಾಣಂತಿಯರಿಗೆ ಹಣ ಬಂದಿದೆ ಎಂದು ನಂಬಿಸುತ್ತಾರೆ. ಗೂಗಲ್ ಪೇ ಓಪನ್ ಮಾಡಿ ಎಂದು ಹೇಳಿ. ಒಂದು ಲಿಂಕ್ ಕಳುಹಿಸುತ್ತೇನೆ ಅದನ್ನ ಓಪನ್ ಮಾಡಿ ಎನ್ನುತ್ತಾರೆ. ಯಾವುದೇ ಕಾರಣಕ್ಕೂ ಇಂತಹ ಕರೆಗಳಿಗೆ ಪ್ರತಿಕ್ರಿಯೆ ನೀಡಬೇಡಿ ಯಾವುದಾದರೂ ಯೋಜನೆ ಇದ್ದರೆ ನಾವೇ ನೇರವಾಗಿ ನಿಮ್ಮ ಬಳಿ ಬಂದು ದಾಖಲಾತಿಗಳನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.
Previous Articleಬಿಗ್ ಬಾಸ್ ಫೇಕ್ ಲಾಯರ್, ಚಾನಲ್ ವಿರುದ್ಧ ವಕೀಲರ ಸಂಘ ನೋಟಿಸ್
Next Article ಮೈಸೂರು ದಸರಾ ವೀಕ್ಷಣೆಗೆ ಟಿಕೆಟ್ ಬುಕಿಂಗ್