ಬೆಂಗಳೂರು: ಎರಡು ದಿನಗಳ ಪ್ರವಾಸಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿದರು.
ವಾಯುಪಡೆಯ ವಿಶೇಷ ವಿಮಾನದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೈಸೂರು ಪೇಟ, ರೇಷ್ಮೆ ಶಾಲು, ಹಾರ ಹಾಕಿ ಬರಮಾಡಿಕೊಂಡರು.
ಸೋಮವಾರ ಸಂಜೆ ನಡೆಯಲಿರುವ ನಗರದ ಮಿಲಿಟರಿ ಶಾಲೆಯ ಪ್ಲಾಟಿನಂ ಮಹೋತ್ಸವದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳುವರು. ಕನಕಪುರ ರಸ್ತೆಯ ವಸಂತಪುರ ಸಮೀಪದ ವೈಕುಂಠ ಬೆಟ್ಟದಲ್ಲಿ ಇಸ್ಕಾನ್ ನಿರ್ಮಿಸಿರುವ ರಾಜಾಧಿರಾಜ ಗೋವಿಂದ ದೇವಾಲಯವನ್ನು ಮಂಗಳವಾರ ಉದ್ಘಾಟಿಸುವರು.
ಬೆಂಗಳೂರಿಗೆ ಬಂದಿಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್
Previous Articleಅಭಿವೃದ್ಧಿ ಕಾಮಗಾರಿ ವಿಳಂಬ: ಶಾಸಕನನ್ನೇ ಒತ್ತೆಯಾಳಾಗಿರಿಸಿದ ಗ್ರಾಮಸ್ಥರು!
Next Article ಅನುಷ್ಕಾ ಶೆಟ್ಟಿ ಸೋದರನ ಕೊಲೆಗೆ ಸ್ಕೆಚ್!