ಬೆಂಗಳೂರು – ದೇಶಾದ್ಯಂತ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ನಡೆದಿರುವ ಬೆನ್ನಲ್ಲೇ ಟಿವಿ ವಾಹಿನಿಗಳ ರೇಟಿಂಗ್ ಪಾಯಿಂಟ್ ಪ್ರಕಟಗೊಂಡಿದ್ದು, ಪಬ್ಲಿಕ್ ಟಿವಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅಷ್ಟೇ ಅಲ್ಲ ಸುದ್ದಿ ವಾಹಿನಿಗಳ ರೇಟಿಂಗ್ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ.
ಚುನಾವಣೆ ಎನ್ನುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಂದು ರೀತಿಯಲ್ಲಿ ಹಬ್ಬ. ಇದನ್ನು ಎಲ್ಲರೂ ಹಬ್ಬದ ರೀತಿಯಲ್ಲೇ ಸಂಭ್ರಮಿಸುತ್ತಾರೆ. ಅದೇ ರೀತಿಯಲ್ಲಿ ರಾಜಕೀಯ ವಿದ್ಯಮಾನಗಳು ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿರುತ್ತವೆ.
ರಾಜಕೀಯ ವಿದ್ಯಮಾನಗಳ ಬಗ್ಗೆ ಜನಸಾಮಾನ್ಯರಿಗೆ ಎಲ್ಲಿಲ್ಲದ ಆಸಕ್ತಿ ಈ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಲು ಅವರು ಸುದ್ದಿ ವಾಹಿನಿಗಳು ಮತ್ತು ವೃತ್ತ ಪತ್ರಿಕೆಗಳನ್ನು ಅವಲಂಬಿಸಿರುತ್ತಾರೆ. ಹೀಗಾಗಿ ಚುನಾವಣೆಯ ಸಮಯದಲ್ಲಿ ವೃತ್ತ ಪತ್ರಿಕೆಗಳ ಪ್ರಸರಣ ಸಂಖ್ಯೆ ದಿಡೀರ್ ಹೆಚ್ಚಳಗೊಂಡರೆ ಸುದ್ದಿ ವಾಹಿನಿಗಳ ನೋಡುಗರ ಪ್ರಮಾಣ ಕೂಡ ಹೆಚ್ಚಳವಾಗುತ್ತದೆ.
ಚುನಾವಣಾ ಸಮಯದಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ ಪಾಯಿಂಟ್ ಗಮನಾರ್ಹ ರೀತಿಯಲ್ಲಿ ಹೆಚ್ಚಳಗೊಳ್ಳುತ್ತದೆ. ಕೆಲವು ಸಮಯದಲ್ಲಂತೂ ರೇಟಿಂಗ್ ಪಾಯಿಂಟ್ ಪಟ್ಟಿಯಲ್ಲಿ ಮನರಂಜನಾ ವಾಹಿನಿಗಳಿಗಿಂತ ಸುದ್ದಿ ವಾಹಿನಿಗಳೇ ಅಗ್ರಸ್ಥಾನದಲ್ಲಿ ಇರುತ್ತವೆ.
ಆದರೆ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಚುನಾವಣೆ ಸಮಯದಲ್ಲಿ ಸುದ್ದಿ ವಾಹಿನಿಗಳ ರೇಟಿಂಗ್ ಪಾಯಿಂಟ್ ಗಮನಾರ್ಹ ರೀತಿಯಲ್ಲಿ ಹೆಚ್ಚಳವಾಗಿಲ್ಲ. ಕಳೆದ ಕೆಲವಾರು ತಿಂಗಳುಗಳಿಂದ ಯಾವ ಪ್ರಮಾಣದಲ್ಲಿ ಇದೆಯೋ ಅದೇ ಪ್ರಮಾಣದಲ್ಲಿ ರೇಟಿಂಗ್ ಪಾಯಿಂಟ್ ಇದೆ.
ಈ ವಾರ ಬಾರ್ಕ್ ಬಿಡುಗಡೆ ಮಾಡಿರುವ ಟಿವಿ ರೇಟಿಂಗ್ ಪಾಯಿಂಟ್ ಪಟ್ಟಿಯಲ್ಲಿ ಕೆಲವು ಅಚ್ಚರಿ ಅಂಕಿ ಅಂಶಗಳು ಪ್ರಕಟಗೊಂಡಿವೆ.
ಇದರ ಪ್ರಕಾರ ಈ ವಾರ ರಾಜ್ಯದ ಎಲ್ಲಾ ಸುದ್ದಿ ವಾಹಿನಿಗಳ ಒಟ್ಟಾರೆ ರೇಟಿಂಗ್ ಪಾಯಿಂಟ್ 228 ಇದ್ದು ಎಂದಿನಂತೆ ಟಿವಿ 9 ಒಟ್ಟಾರೆ 79 ಪಾಯಿಂಟ್ ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ ಇಲ್ಲಿವರೆಗೆ ಸದಾ ಎರಡನೇ ಸ್ಥಾನದಲ್ಲಿ ಇರುತ್ತಿದ್ದ ಪಬ್ಲಿಕ್ ಟಿವಿ ಇದೆ ಮೊದಲ ಬಾರಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಸದಾ ಮೂರನೇ ಸ್ಥಾನದಲ್ಲಿ ಇರುತ್ತಿದ್ದ ಸುವರ್ಣ ನ್ಯೂಸ್ ವಾಹಿನಿ ಈ ಬಾರಿ 41 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. 39 ಪಾಯಿಂಟ್ ಗಳಿಸಿರುವ ಪಬ್ಲಿಕ್ ಟಿವಿ ಮೂರನೇ ಸ್ಥಾನದಲ್ಲಿದೆ ನಂತರದಲ್ಲಿ ಟಿವಿ 18, ನ್ಯೂಸ್ ಫಸ್ಟ್ ಮೊದಲಾದ ಚಾನೆಲ್ ಗಳಿವೆ
ಮೂರನೇ ಸ್ಥಾನಕ್ಕೆ ಕುಸಿದ Public TV ರೇಟಿಂಗ್
Previous Articleಫಿನ್ಲೆಂಡ್ ನ ಪ್ರಧಾನಿ ವಿವಾಹ ವಿಚ್ಛೇದನ
Next Article ಸೋಲು ಗೆಲುವಿನ ಬೆಟ್ಟಿಂಗ್ ಲೆಕ್ಕಾಚಾರ