ಬೆಂಗಳೂರು.ಜ,3 : ದೇಶದಲ್ಲೇ ಅತ್ಯುತ್ತಮ ಸೇವೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ಹಿರಿಯ ನಾಯಕ ರಾಮಲಿಂಗಾರೆಡ್ಡಿ (Ramalinga Reddy) ಇಲಾಖೆಯ ಸಚಿವರಾದ ನಂತರ ಹಲವಾರು ವಿನೂತನ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ಇಲಾಖೆ ಇದೀಗ ಇಡೀ ಒಂದು ವರ್ಷವನ್ನು ಪಯಾಣಿಕ ಸ್ನೇಹಿ ವರ್ಷ ಎಂದು ಘೋಷಿಸಿ,ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.
ನಿಗಮವು 2023 ನೇ ವರ್ಷವನ್ನು ಕಾರ್ಮಿಕ ಕಲ್ಯಾಣ ವರ್ಷ ವೆಂದು ಘೋಷಿಸಿ, ಕಾರ್ಮಿಕ ಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು.ಇವುಗಳಿಗೆ ಇಲಾಖೆಯ ನೌಕರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ,ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸಿದ್ದರು.
ಇದರ ಯಶಸ್ಸಿನಿಂದ ಉತ್ಸಾಹಗೊಂಡ ಸಚಿವರು ಇದೀಗ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಲು ಸೂಚಿಸಿದರು ಈ ಹಿನ್ನೆಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ.ತಮ್ಮಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲೆಂದು ಆಶಿಸುತ್ತೇನೆ ಎಂದು ಕೆ ಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ತಿಳಿಸಿದ್ದಾರೆ.
ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ತಕ್ಷಣವೇ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
• ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ.
• ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ, 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ನಿಕ್ ಬಸ್ಸುಗಳು-500
• ಪುಸ್ತುತ ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕುಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.
• 1000 ವಾಹನಗಳ ಪುನಶ್ವೇತನ ಯೋಜನೆಯ ಗುರಿ ಹೊಂದಲಾಗಿದೆ.
• ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.
ಮಾಹಿತಿ ತಂತ್ರಜ್ಞಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ GFOOT VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.
• ಬಸ್ಸುಗಳ ಸ್ವಚ್ಛತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು ನೀಡುವ ಮೂಲಕ ಇಡೀ ವರ್ಷ ಪ್ರಯಾಣಿಕರ ಹಿತವೇ ಮುಖ್ಯ ಎಂದು ಭಾವಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ತಿಳಿಸಿದ್ದಾರೆ.