Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ನಂಟು ಬಯಲು | Rameshwaram Cafe Blast
    Trending

    ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ನಂಟು ಬಯಲು | Rameshwaram Cafe Blast

    vartha chakraBy vartha chakraಮಾರ್ಚ್ 5, 2024ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಬೆಂಗಳೂರು, ಮಾ.5 – ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್‌ಫೀಲ್ಡ್‌‌ ಸಮೀಪದ ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದೆ.
    ಸ್ಪೋಟದ ಕುರಿತಂತೆ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿರುವ ತಂಡ ಖಚಿತ ಮಾಹಿತಿಯನ್ನು ಆದರಿಸಿ ಚೆನ್ನೈನ ಸಿದ್ದಾಯಳ್ ಪೇಟೆ ಮತ್ತು ಬಿಡಾರಿಯಾರ್ ಟೆಂಪಲ್ ಬಳಿ ಕೆಲವು ಮನೆಗಳ ಮೇಲೆ ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದಿದೆ.
    ವಶಕ್ಕೆ ಪಡೆದಿರುವ ಇವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಇವರಲ್ಲಿ ನಾಲ್ವರು ಆರ್.ಟಿ ನಗರದ ಕುಖ್ಯಾತ ಭಯೋತ್ಪಾದಕ ನಜೀರ್‌ ಎಂಬಾತನ ಜತೆ ಸಂಪರ್ಕ ಹೊಂದಿದವರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎನ್ ಐ ಎ ಮೂಲಗಳು ತಿಳಿಸಿವೆ.

    ಬೆಂಗಳೂರು ಸೇರಿದಂತೆ ಹಲವಡೆ ವಿದ್ವಂಸಕ ಕೃತ್ಯಕ್ಕೆ ಸಂಚು ಸಂಚುರೂಪಿಸಿ ಹಲವರನ್ನು ತಯಾರುಗೊಳಿಸಿದ ಆರೋಪದ ಮೇಲೆ ಬಂಧಿತನಾಗಿರುವ ನಜೀರ್‌ ಒಬ್ಬ ಕುಖ್ಯಾತ ಭಯೋತ್ಪಾದಕನಾಗಿದ್ದು, ಜೈಲಿನಲ್ಲೇ ಹಲವರನ್ನು ತನ್ನ ದುಷ್ಕೃತ್ಯದ ಜಾಲಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾನೆ. ಜೈಲಿನಲ್ಲಿರುವ ಈತನನ್ನು ಭೇಟಿಯಾದ ಕೆಲವರ ವಿವರಗಳನ್ನು ಸಂಗ್ರಹಿಸಿದ ಎನ್ಐಎ ತಂಡ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕಾರೈ ಏರಿಯಾ ಬಳಿ ಇರುವ ಷಂಶುದ್ದೀನ್‌ ಎಂಬಾತನ ಮನೆ ಮೇಲೆ ದಾಳಿ ಮಾಡಿ ಆತನನ್ನು ವಶಕ್ಕೆ ಪಡೆದಿದೆ. ಈತ ನೀಡಿದ ಮಾಹಿತಿ ಆದರಿಸಿ ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆದಿದ್ದು ರಾಮೇಶ್ವರಂ ಕೆಫೆ ಸ್ಪೋಟ ಕುರಿತಂತೆ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

    ಯುವಕರ ಬ್ರೇನ್‌ ವಾಷ್‌:
    ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಭಯೋತ್ಪಾದಕ ನಜೀರ್
    ಕ್ರಿಮಿನಲ್‌ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರುವ ಮುಸ್ಲಿಂ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡು ಅವರ ಬ್ರೇನ್‌ ವಾಷ್‌ ಮಾಡಿ ಅವರು ಜೈಲಿನಿಂದ ಬಿಡುಗಡೆಯಾದ ಬಳಿಕ ಉಗ್ರ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ
    ಒಂದು ವರ್ಷದ ಹಿಂದೆ ಆರ್ ಟಿ ನಗರದ ಸುಲ್ತಾನ್ ಪಾಳ್ಯದ ಮನೆಯೊಂದರಲ್ಲಿ ಲೈವ್ ಗ್ರನೇಡ್ , ಪಿಸ್ತೂಲ್ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು,ಅಂದು ಸೈಯದ್ ಸೊಹೇಲ್‌, ಜಾಹಿದ್, ಮುದಾಸಿರ್, ಉಮರ್, ಫೈಜಲ್ ಎಂಬುವರನ್ನು ಗ್ರನೇಡ್, ಪಿಸ್ತೂಲ್, ಜೀವಂತ ಗುಂಡುಗಳ ಜೊತೆಗೆ ಬಂಧನ ಮಾಡಲಾಗಿತ್ತು. ಬಳಿಕ ಏಳು ಪಿಸ್ತೂಲ್, ನಲವತ್ತೈದು ಜೀವಂತ ಗುಂಡುಗಳು, ಹದಿನೈದು ಮೊಬೈಲ್, 20ಕ್ಕೂ ಹೆಚ್ಚು ಸಿಮ್ ಕಾರ್ಡ್, ಒಂದು ಡ್ಯಾಗರ್ ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣವನ್ನು ಮುಂದಿನ ತನಿಖೆಗಾಗಿ ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು.

    ಆ ಬಳಿಕ ಈ ಎಲ್ಲಾ ಘಟನೆಗಳ ಸೂತ್ರದಾರ ನಜೀರ್ ಎನ್ಐಎ ತಂಡಕ್ಕೆ ಸಿಕ್ಕಿಬಿದ್ದ.
    ಕಳೆದ ಫೆ.1ರ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣದಲ್ಲೂ ನಜೀರ್‌ನಿಂದ ಪ್ರೇರಿತರಾದ ದುಷ್ಟರೇ ಭಾಗಿಯಾಗಿದ್ದಾರೆ ಎಂಬ ಸಣ್ಣ ಸಂಶಯವಿದೆ. ಅದರ ಭಾಗವಾಗಿಯೇ ಈಗ ನಜೀರ್‌ ಜತೆ ಸಂಬಂಧ ಹೊಂದಿರುವ ವ್ಯಕ್ತಿಗಳ ವಿಚಾರಣೆ ನಡೆಯಲಿದೆ. ಪರಪ್ಪನ ಅಗ್ರಹಾರದಲ್ಲಿರುವ ನಜೀರ್‌ನನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

    m war ಉಗ್ರ
    Share. Facebook Twitter Pinterest LinkedIn Tumblr Email WhatsApp
    Previous Articleಯತೀಂದ್ರ ಸಿದ್ದರಾಮಯ್ಯ ಯಾಕೆ ಹೀಗೆ ಹೇಳಿದರು | Yathindra Siddaramaiah
    Next Article ನಾಸಿರ್ ಹುಸೇನ್ ಗೆ ಉರುಳಾಗಲಿರುವ ಪಾಕಿಸ್ತಾನ ಜಿಂದಾಬಾದ್ | Naseer Hussain
    vartha chakra
    • Website

    Related Posts

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಡಿಸೆಂಬರ್ 22, 2025

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ಡಿಸೆಂಬರ್ 22, 2025

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    ಡಿಸೆಂಬರ್ 21, 2025

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • RobertVer ರಲ್ಲಿ ಸೋತ ಕಾಂಗ್ರೆಸ್ ನಾಯಕರಿಗೆ ಪಾಠ.
    • rylonnie shtori na plastikovie okna s elektroprivodom_udSn ರಲ್ಲಿ ರೇಣುಕಾಚಾರ್ಯ ಅವರಿಗೆ ಬೇಸರವಾಗಿದೆಯಂತೆ | MP Renukacharya
    • elektrokarniz kypit_njsl ರಲ್ಲಿ ರೇಣುಕಾಚಾರ್ಯ ಅವರಿಗೆ ಬೇಸರವಾಗಿದೆಯಂತೆ | MP Renukacharya
    Latest Kannada News

    ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

    ಡಿಸೆಂಬರ್ 22, 2025

    ಯೂಟ್ಯೂಬ್ ನಲ್ಲಿ ಪೋಲಿ ವಿಡಿಯೋಗಳ ಹಾವಳಿ

    ಡಿಸೆಂಬರ್ 22, 2025

    ನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ

    ಡಿಸೆಂಬರ್ 22, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ನಾಯಕತ್ವದ ಬಗ್ಗೆ ಖರ್ಗೆ ಕೊಟ್ಟ ಅಪ್ಡೇಟ್.#varthachakra #mallikarjunkharge #siddaramaiah #dkshivakumar
    Subscribe