ಮುಂಬೈ: ಕೊಡಗಿನ ಬೆಡಗಿ ಸೌತ್ ಇಂಡಿಯಾ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ಕೂದಲೆಳೆ ಅಂತರದಲ್ಲಿ ಭಾರಿ ಗಂಡಾಂತರವೊಂದರಿಂದ ಪಾರಾಗಿದ್ದಾರೆ.
ನಟಿ ಶ್ರದ್ಧಾ ದಾಸ್ ಅವರೊಂದಿಗೆ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ. ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಪ್ರಾಣಾಪಾಯದಿಂದ ಸ್ಪಲ್ಪದರಲ್ಲಿ ಪಾರಾದುದಾಗಿ ಹೇಳಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾದಾಸ್ ಅವರುಗಳು ಮುಂಬೈ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು. ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಕೂಡಲೇ ವಿಮಾನ ನಿಲ್ದಾಣವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ. ತಮ್ಮ ಹಾಗೂ ಶ್ರದ್ಧಾದಾಸ್ರ ಕೆಲವು ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.
ತುರ್ತು ಭೂಸ್ಪರ್ಷದ ವೇಳೆ ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಹಾಗೂ ಶ್ರದ್ಧಾ ತಮ್ಮ ಕಾಲುಗಳಿಂದ ಎದುರಿನ ಸೀಟ್ನ ಹಿಂಬದಿಯನ್ನು ಜೋರಾಗಿ ಒತ್ತಿ ಹಿಡಿದುಕೊಂಡಿದ್ದಾರೆ. ಈ ಚಿತ್ರವನ್ನು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇಂದು ಹೀಗೆ ಮಾಡಿ ನಾವು ಪ್ರಾಣಾಪಾಯದಿಂದ ಪಾರಾದೆವು’ ಎಂದಿದ್ದಾರೆ ರಶ್ಮಿಕಾ.
ರಶ್ಮಿಕಾ ಅವರು ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಗೆ ನೂರಾರು ಜನ ಪ್ರತಿಕ್ರಿಯೆ ನೀಡಿದ್ದು ಇಬ್ಬರೂ ನೂರು ಕಾಲ ಆರೋಗ್ಯವಾಗಿ ಸುಖದಿಂದ ಇರಿ ಎಂದು ಹಾರೈಸಿದ್ದಾರೆ.