ಬೆಂಗಳೂರು – ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಿನಿಪ್ರಿಯರ ಹಾಟ್ ಫೆವರೀಟ್. ಸಿನಿಮಾ, ಅಭಿನಯ ಚೆನ್ನಾಗಿದ್ದರೂ ಅವರು ಯಾಕೋ ಇತ್ತೀಚೆಗೆ
ಟೀಕೆ, ಟ್ರೋಲ್ಗಳಿಂದಲೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಪರ-ವಿರೋಧದ ಟೀಕೆಗಳಿಗೂ.
ಇದೀಗ ದಕ್ಷಿಣ ಸಿನಿಮಾ ರಂಗದ ಬಗ್ಗೆ ರಶ್ಮಿಕಾ ಹೇಳಿಕೆ ಕೊಟ್ಟಿದ್ದು ದಕ್ಷಿಣ ಭಾರತ ಸಿನಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸದ್ಯದ ಸುದ್ದಿ ಏನೆಂದರೆ ಆಕೆ ಕನ್ನಡವೂ ಸೇರಿ ದಕ್ಷಿಣ ಭಾರತದ ಸಿನಿಮಾಗಳ ಕುರಿತಂತೆ ನೀಡಿದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ ಅದು ಎನು ಅಂತಾ ಹೇಳ್ತೀವಿ ಅದಕ್ಕೂ ಮೊದಲು ನಮ್ಮ ಛಾನಲ್ ಸಬ್ ಸ್ಕ್ರೈಬ್ ಮಾಡಿ, ಷೇರ್ ಮಾಡಿ
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜತೆ ರಶ್ಮಿಕಾ ಮಂದಣ್ಣ ನಟಿಸಿರುವ ʻಮಿಷನ್ ಮಜ್ನುʼ ಸಿನಿಮಾ ಜನವರಿ 19, 2023ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ.ಈ ʻವಿಷನ್ ಮಜ್ನು’ ಸಿನಿಮಾದ ರಬ್ಬಾ ಜಂಡಾ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು ಅದರಲ್ಲಿ ರಶ್ಮಿಕಾ ನೀಡಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಾಂಗ್ ರಿಲೀಸ್ ಸಮಾರಂಭದಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದ ಸಂದರ್ಭದಲ್ಲಿ, ರಶ್ಮಿಕಾ ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳ ಬಗ್ಗೆ ಮಾತನಾಡಿದರು ಹಾಗೆಯೇ ಸೌತ್ ಸಿನಿಮಾ ಬಗೆಗೂ ಹೇಳಿಕೆ ನೀಡಿದ್ರು ಅದು ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಮಾಧ್ಯಮ ಸಂವಾದದಲ್ಲಿ ರಶ್ಮಿಕಾ ಅವರನ್ನು ಬಾಲಿವುಡ್ ಐಕಾನಿಕ್ ರೊಮ್ಯಾಂಟಿಕ್ ಸಾಂಗ್ಗಳಲ್ಲಿ ನಿಮ್ಮನ್ನು ನೀವು ಎಂದಾದರೂ ಕಲ್ಪಿಸಿಕೊಂಡಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ನಟಿ ತಾವು ಮೊದಲಿಂದಲೂ ಬಾಲಿವುಡ್ ರೊಮ್ಯಾಂಟಿಕ್ ಹಾಡಿನ ಬಗ್ಗೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.
ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತದೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಸಾಲಾ ಹಾಗೂ ಐಟಂ ಸಾಂಗ್‌ಗಳಾಗಿರುತ್ತದೆ ‘ ಎಂದು ಹೇಳಿದ್ದರು.
ಈ ಹೇಳಿಕೆ ದಕ್ಷಿಣ ಭಾರತದ ಸಿನಿಪ್ರಿಯರನ್ನು ಕೆರಳಿಸಿದೆ.
ರಶ್ಮಿಕಾ ಅವರ ಈ ಹೇಳಿಕೆಯ ವಿಡಿಯೊ ವೈರಲ್ ಆಗುತ್ತದಂತೆ ಕಮೆಂಟ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ʻʻರಶ್ಮಿಕಾ ನಿಮಗೆ ಎ ಆರ್ ರೆಹಮಾನ್ ಹಾಡುಗಳು, ಇಳಯರಾಜ ಹಾಡುಗಳು ಗೊತ್ತಿಲ್ಲವೇ? ತೆಲುಗು ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಿರುತ್ತದೆ. ಬಾಲಿವುಡ್ ಐಟಂ ಸಾಂಗ್‌ಗಳಲ್ಲಿ ಹೆಚ್ಚು ವಿಕೃತವಿರುತ್ತದೆ ಎನ್ನುವುದನ್ನು ಹೇಳಬೇಕಿತ್ತು.’ ಎಂದು ಟ್ವೀಟ್ ಮಾಡಿದ್ದಾರೆ ಈ ಹೇಳಿಕೆ ಕುರಿತು ಟ್ವೀಟ್ ನಲ್ಲಿ ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ.
Previous Articleಇಂತಹ ಹುಡುಗಿ ಇದ್ದರೆ ಹೇಳಿ ರಾಹುಲ್ ಗಾಂಧಿ ಮದುವೆಯಾಗ್ತಾರಂತೆ
Next Article Football ಶ್ರೇಷ್ಠ Pele ನಿಧನ