ಬೆಂಗಳೂರು – ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿನ ಕೆಲವು ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ.
ಕಾಂತಾರಾ, KGF, ಚಾರ್ಲಿಯಂತಹ ಸಿನಿಮಾಗಳು ತನ್ನ ಕಥೆ ಹಾಗೂ ಮೇಕಿಂಗ್ ನಿಂದ ಗಮನ ಸೆಳೆದದ್ದು ಇದೀಗ ಹಳೆಯ ಸುದ್ದಿ.ಇದೀಗ ಅದೇ ಸಾಲಿನಲ್ಲಿ ಸುದ್ದಿ ಮಾಡಲು ಹೊರಟಿದ್ದು ಕಬ್ಜ.
KGF, RRR, ಕಾಂತಾರ ಚಿತ್ರಗಳಂತೆ ವರ್ಲ್ಡ್ ವೈಡ್ ಬಿಡುಗಡೆಯಾಗಿ ಸಾವಿರ ಕೋಟಿ ಕ್ಲಬ್ ಸೇರುವ ಮಹದಾಸೆಯೊಂದಿಗೆ ಚಿತ್ರ ನಿರ್ಮಾಣ ಮಾಡಿ ಗಮನ ಸೆಳೆದವರು ನಿರ್ಮಾಪಕ ಕಮ್ ನಿರ್ದೇಶಕ ಆರ್ ಚಂದ್ರು.
ಸಾವಿರ ಕೋಟಿ ಕ್ಲಬ್ ಸೇರುವ ಮಹತ್ವಾಕಾಂಕ್ಷೆಯೊಂದಿಗೆ ಪ್ಲಾನ್ ಮಾಡಿ ಮಾರ್ಕೆಟಿಂಗ್ ಮಾಡಿದ ಆರ್.ಚಂದ್ರು ಸಿನಿಮಾ ಕಥೆಯಲ್ಲಿ ರಿಯಲ್ ಸ್ಟಾರ್ ಉಪ್ಪಿ ಯೊಂದಿಗೆ ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅವರ ಸಮ್ಮಿಲನ ಮಾಡಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಹೆಸರಾಂತ ನಟಿ ಶ್ರಿಯಾ ಸರನ್ ಕರೆ ತಂದು ಕಥೆಯ ಮೆರಗನ್ನು ಹೆಚ್ಚಿಸಿಕೊಂಡಿದ್ದಾರೆ. ಮೊದಲಿನಿಂದಲೂ ಸಿನಿಮಾದಷ್ಟೇ ಮಾರ್ಕೆಟಿಂಗ್ ನಲ್ಲೂ ನೈಪುಣ್ಯತೆಯನ್ನು ಹೊಂದಿರುವ ಆರ್ ಚಂದ್ರು, ಬಿಡುಗಡೆಗೋ ಮುಂಚೆ ಸೇಫ್ ಆಗಿದ್ದಾರೆ ಎನ್ನಲಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬದ ದಿನವೇ ವಿಶೇಷ ಆಕರ್ಷಣೆ ಜೊತೆ ಸಿನಿಮಾ ಬಿಡುಗಡೆ ಮಾಡಿದ ಆರ್.ಚಂದ್ರು ಪರಭಾಷೆಯ ಯಾವುದೇ ಬಿಗ್ ಬಜೆಟ್ ಸಿನಿಮಾ ಇಲ್ಲದಿರುವುದು ತಮಗೆ ಅನುಕೂಲ ಎಂದು ಭಾವಿಸಿದರು. ಮಹತ್ವಾಕಾಂಕ್ಷೆಯೊಂದಿಗೆ ಸುಮಾರು 120 ಕೋಟಿಗಿಂತಲೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾಗಿರುವ ಪ್ಯಾನ್ ಇಂಡಿಯಾ ಚಿತ್ರ ಕಬ್ಜಾ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ಸುಮಾರು 50 ದೇಶಗಳನ್ನು ಒಳಗೊಂಡಂತೆ 4000 ಚಿತ್ರಮಂದಿರಗಳಲ್ಲಿ ತೆರೆ ಕಂಡಿತು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಮನೆತನದ ಆಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಸ್ಥಾಪನೆಗೊಳ್ಳುವ ಸಮಯ. ಆಗ ಮತ್ತೆ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲೇ ಹಿಡಿದಿಟ್ಟುಕೊಳ್ಳುವ ಹಪಾಹಪಿ ರಾಜರುಗಳದ್ದಾದರೆ, ಹೊಸದಾಗಿ ಜಾರಿಯಾದ ಪ್ರಜಾಪ್ರಭುತ್ವವನ್ನೆ ತನ್ನ ಅಂಕೆಯಲ್ಲಿಟ್ಟುಕೊಂಡು ಆಡಿಸಬೇಕೆಂಬ ಭೂಗತ ಲೋಕದ ಬಯಕೆ ಮತ್ತೊಂದು ಕಡೆಇಬ್ಬರ ನಡುವಿನ ಘರ್ಷಣೆ ತಾರಕಕ್ಕೇರಿ ಶ್ರೀಮಂತ ಕೋಟೆ ಅಮರಾಪುರ ವನ್ನು ಯಾರು ಕಬ್ಜ ಮಾಡುತ್ತಾರೆ ಅನ್ನೋದು ಸ್ಟೋರಿ.
ಮಾರ್ಕೆಟಿಂಗ್ ತಂತ್ರದಿಂದಾಗಿ ಸಿನಿಮಾ ಮೊದಲ ದಿನ ಬಾಕ್ಸಾಫೀಸ್ ನಲ್ಲಿ ಭಾರಿ ಸದ್ದು ಮಾಡಿತು. ಮೊದಲ ದಿನವೇ ಭಾರತಾದ್ಯಂತ 54 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎನ್ನುವುದು
ಚಿತ್ರದ ನಿರ್ದೇಶಕರ ಹೇಳಿಕೆ.
ಮೊದಲ ದಿನ ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಂಡಿದೆ ಎನ್ನುವುದನ್ನು ಒಪ್ಪ ಬಹುದು ಮೊದಲ ದಿನವಷ್ಟೇ ಅಲ್ಲ ಮೊದಲ ಮೂರು ದಿನ ಇಂತಹುದೇ ವಾತಾವರಣವಿತ್ತು ಅದು ರಾಜ್ಯದಲ್ಲಿ ಮಾತ್ರ ಯಾಕೆಂದರೆ ಸಿನಿಮಾದಲ್ಲಿ ಮೂವರು ಸೂಪರ್ ಸ್ಟಾರ್ ನಟರಿದ್ದಾರೆ.ಸಹಜವಾಗಿ ಅವರ ಅಭಿಮಾನಿಗಳು ಸಿನಿಮಾ ಮಂದಿರಗಳಿಗೆ ಲಗ್ಗೆ ಹಾಕಿರುತ್ತಾರೆ.
ಆದರೆ ಮೊದಲ ದಿನವೇ 54 ಕೋಟಿಗೂ ಅಧಿಕ ಹಣ ಸಂಗ್ರಹಿಸಿದೆ ಎಂದು ಒಪ್ಪಲು ಸಾಧ್ಯವಿಲ್ಲ ನೆರೆ ರಾಜ್ಯಗಳಲ್ಲಿ ಸಿನಿಮಾ ಹೇಗಿದೆ ಎಂಬ ವರದಿ ಕೇಳಿ ಥಿಯೇಟರ್ ಗೆ ಬರುವರ ಸಂಖ್ಯೆ ಹೆಚ್ಚು ಕಾಂತಾರಾ ಮತ್ತು ಕೆಜಿಎಫ್ ವಿಷಯದಲ್ಲೂ ಆದದ್ದು ಹೀಗೆ ಮೊದಲ ವಾರದ ನಂತರದಲ್ಲೇ ನೆರೆ ರಾಜ್ಯಗಳಲ್ಲಿ ಈ ಸಿನಿಮಾಗಳು ಸದ್ದು ಮಾಡಿದ್ದು.
ಆದರೆ ಕಬ್ಜ ನೆರೆ ರಾಜ್ಯಗಳಲ್ಲಿ ಸದ್ದು ಮಾಡಲೇ ಇಲ್ಲ ಮೊದಲ ದಿನದ ಮೊದಲ ಶೋ ನಂತರ ಸಿನಿಮಾ ಮಂದಿರಗಳು ಖಾಲಿಯಾಗಿ ಎರಡನೇ ವಾರಕ್ಕೆ ಎತ್ತಂಗಡಿಯಾಗಿದೆ. ಹೀಗಾಗಿ ಮೊದಲ ದಿನವೇ 54 ಕೋಟಿ ರೂಪಾಯಿ ಗೂ ಅಧಿಕ ಮೊತ್ತ ಸಂಗ್ರಹಿಸಿದೆ ಎಂಬ ನಿರ್ಮಾಪಕರ ಹೇಳಿಕೆಯನ್ನು ನಂಬಲಾಗುತ್ತಿಲ್ಲ.
ಗಾಂಧಿನಗರದ ಮೂಲಗಳ ಪ್ರಕಾರ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಈ ಸಿನಿಮಾಗೆ ಅಂತಹ ರೆಸ್ಪಾನ್ಸ್ ಬಂದಿಲ್ಲ ರಿಲೀಸ್ ಗೂ ಮೊದಲು ಮಾಡಿದ ಎಲ್ಲಾ ಕಸರತ್ತುಗಳು ಸಿನಿಮಾ ನೋಡಿದವರ ಬಾಯಲ್ಲಿ ನಗುವ ವಸ್ತುಗಳಾಗಿವೆ. ಮೂವರು ಸ್ಟಾರ್ ಗಳಿರುವ ಕಾರಣದಿಂದ ಅವರ ಅಭಿಮಾನಿ ಮೊದಲ ಮೂರು ದಿನ ಸಿನಿಮಾ ಮಂದಿರಕ್ಕೆ ಬಂದವರು ತಮ್ಮ ನೆಚ್ಚಿನ ನಟನಿಗೆ ಸಿನೆಮಾದಲ್ಲಿ ಸಿಕ್ಕ ಪ್ರಾಶಸ್ತ್ಯ ಕಂಡು ಬೇಸರದಿಂದ ಹೊರ ನಡೆಯುತ್ತಿದ್ದಾನೆ.ಹೀಗಾಗಿ ಇಲ್ಲಿಯವರೆಗಿನ ಸಂಗ್ರಹ ಸುಮಾರು 54 ಕೋಟಿ ರೂಪಾಯಿ ಆಗಿರಬಹುದು ಎನ್ನುತ್ತವೆ.
ಕಳೆದ ಎರಡು ವಾರಗಳಿಂದ ಯಾವುದೇ ಭಾಷೆಯ ಬಿಗ್ ಬಜೆಟ್ ಅಥವಾ ಸ್ಟಾರ್ ನಟರ ಸಿನಿಮಾ ಇಲ್ಲ ಹೀಗಿದ್ದರೂ ಕಬ್ಜ ದಂತಹ ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾ ಕರ್ನಾಟಕವೂ ಸೇರಿದಂತೆ ಎಲ್ಲಿಯೂ ಸದ್ದು ಮಾಡಿಲ್ಲ ಎಂದರೆ ಕಥಾವಸ್ತುವಿನ ಆಯ್ಕೆ, ಸಿನಿಮಾ ತಯಾರಿಕೆಯಲ್ಲಿ ಮಾಡಿದ ಎಡವಟ್ಟುಗಳು ಕಾರಣ ಎನ್ನುತ್ತಾರೆ.
ಇದೀಗ ಸಿನಿಮಾ ಸೋಲುವ ಭೀತಿಯಿಂದ ಆರ್.ಚಂದ್ರು,ತಮ್ಮ ಸಿನೆಮಾ ತಾಂತ್ರಿಕವಾಗಿ ಅದ್ಭುತವಾಗಿದೆ.ಶಬ್ದ ಗ್ರಹಣವೇ ಸಿನಿಮಾದ ಹೈಲೈಟ್.ಆದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ವಿದ್ಯುತ್ ಉಳಿಸಲು ಸಿನಿಮಾದ ಸೌಂಡ್ ಕಡಿಮೆ ಮಾಡುತ್ತಿದ್ದಾರೆ ಹೀಗಾಗಿ ಇದು ನೋಡುಗನ ಮೇಲೆ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ. ಹಾಗಾದರೆ ಸೌಂಡ್ ಕಡಿಮೆ ಮಾಡಿದರೆ ವಿದ್ಯುತ್ ಉಳಿಸಬಹುದಾ ಎನ್ನುವ ಪ್ರಶ್ನೆಗೆ ಉತ್ತರ ಹೇಳುವರಾರು..
ALSO READ –